Haveri gang rape: ಹಾವೇರಿಯಲ್ಲಿ ಮುಸ್ಲಿಂ ಯುವತಿ ಮೇಲೆ ಹಲ್ಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ನಡೆದದ್ದು ನೈತಿಕ ಪೋಲೀಸ್ ಗಿರಿಯಲ್ಲ, ಮಹಿಳೆ ಮೇಲೆ ಮುಸ್ಲಿಂ ಯುವಕರಿಂದಲೇ ಸಾಮೂಹಿಕ ಅತ್ಯಾಚಾರ!!

Haveri gang rape: ಹಾವೇರಿ ಜಿಲ್ಲೆಯ ಹಾನಗಲ್‌ ನ ಖಾಸಗಿ ಹೋಟೆಲ್‌ಗೆ ಯುವಕರ ತಂಡವೊಂದು ನುಗ್ಗಿ ಲಾಡ್ಜ್‌ನಲ್ಲಿ ವಿವಾಹಿತ ಮುಸ್ಲಿಂ ಮಹಿಳೆಯೊಂದಿಗೆ ಅನ್ಯಕೋಮಿನ ಯುವಕನ ಇದ್ದಿದ್ದನ್ನು ಕಂಡು ಹಿಗ್ಗಾಮುಗ್ಗಾ ಥಳಿಸಿ ನೈತಿಕ ಪೋಲೀಸ್ ಗಿರಿ ನಡೆಸಲಾಗಿದೆ ಎಂಬ ಸುದ್ದಿ ಸಾಕಷ್ಟು ಸದ್ದುಮಾಡುತ್ತಿದೆ. ಆದರೆ ಈ ನಡುವೆ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಹಾವೇರಿಯಲ್ಲಿ ನಡೆದದ್ದು ನೈತಿಕ ಪೋಲೀಸ್ ಗಿರಿ ಅಲ್ಲ, ಸಾಮೂಹಿಕ ಅತ್ಯಾಚಾರ(Gang rape) ಎಂಬ ರೋಚಕ ಸತ್ಯ ಬಯಲಾಗಿದೆ.

ಹೌದು, ಹಾವೇರಿ(Haveri) ಜಿಲ್ಲೆಯ ಹಾನಗಲ್‌ನಲ್ಲಿ ಮುಸ್ಲಿಂ ಯುವಕರಿಂದ ನಡೆದಿದ್ದು ನೈತಿಕ ಪೊಲೀಸ್‌ಗಿರಿಯಲ್ಲ, ಅದೊಂದು 7 ಯುವಕರು ಸೇರಿ ಮುಸ್ಲಿಂ ಮಹಿಳೆ ಮೇಲೆ ನಡೆಸಿದ ಗ್ಯಾಂಗ್‌ ರೇಪ್‌ ಪ್ರಕರಣ ಎಂಬ ರೋಚಕ ಸತ್ಯ ಬಯಲಾಗಿದೆ. ಮೀಸೆ ಬಾರದ 7 ಮುಸ್ಲಿಂ ಯುವಕರು ಮಹಿಳೆಯನ್ನು ಕಾರಿನಲಲಿ ಕಾಡಿಗೆ ಕರೆದೊಯ್ದು ವೀಡಿಯೋ ಮಾಡಿಕೊಳ್ಳುತ್ತಾ, ಅತ್ಯಾಚಾರ ಮಾಡಿ ಆಕೆಯನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಬಳಿಕ ಈ ಪ್ರಕರಣಕ್ಕೆ ನೈತಿಕ ಪೊಲೀಸ್‌ಗಿರಿಯ ಬಣ್ಣ ಬಳಿಯುವ ಯತ್ನ ಮಾಡಿದ್ದಾರೆಂಬ ಅಸಲಿ ಸತ್ಯ ಬಯಲಾಗಿದೆ.

ಏನಿದು ಪ್ರಕರಣ?

ಕಳೆದೆರಡು ದಿನಗಳಿಂದ ಹಾವೇರಿ ಜಿಲ್ಲೆಯ ಹಾನಗಲ್‌ ನ ಖಾಸಗಿ ಹೋಟೆಲ್‌ ನಲ್ಲಿ ಹಿಂದೂ ವ್ಯಕ್ತಿಯೊಂದಿಗೆ ಲಾಡ್ಜ್‌ನಲ್ಲಿದ್ದ ಮುಸ್ಲಿಂ ಮಹಿಳೆ ಇದ್ದಳು, ಇದನ್ನರಿತ ಹುಡುಗರು ಅವರ ಮೇಲೆ ಧಾಳಿ ನಡೆಸಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ 7 ಜನ ಮುಸ್ಲಿಂ ಯುವಕರು ಅವರನ್ನು ಕಾಡಿನ ನಿರ್ಛನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಪುನಃ ಹಿಂದೂ ವ್ಯಕ್ತಿಯನ್ನು ಅಲ್ಲಿಂದ ಹೊಡೆದು ಓಡಿಸಿ, ಮಹಿಳೆಯೊಬ್ಬಳನ್ನೇ ಕಾಡಿಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ನಂತರ, ಆಕೆಯನ್ನು ಹಿಂದೂಗಳೊಂದಿಗೆ ಕಾಣಿಸಿಕೊಂಡರೆ ಹೀಗೆಯೇ ಆಗುತ್ತದೆ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ. ಜೊತೆಗೆ, ಅತ್ಯಾಚಾರ ನಡೆದ ವಿಚಾರ ಯಾರ ಬಳಿಯಾದರೂ ಹೇಳಿದರೆ, ವಿಡಿಯೋ ಸೋಷಿಯಲ್‌ ಮೀಡಿಯಾಗೆ ಹಂಚುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಮಹಿಳೆ ಹೇಳಿದ್ದೇನು?

ಜಂಗಲ್ ನಲ್ಲಿ 7 ಮುಸ್ಲಿಂ ಯುವಕರು ಗ್ಯಾಂಗ್ ರೇಪ್ ಮಾಡಿದ್ದು, ಈ ವೇಳೆ ವಿರೋಧಿಸಿದ್ದಕ್ಕೆ ಜೀವ ಹೋಗುವ ಹಾಗೆ ಥಳಿಸಿದ್ದಾರೆ. ನಂತರ, ಒಬ್ಬರಾದ ಮೇಲೆ ಒಬ್ಬರು ನನ್ನ ರೇಪ್ ಮಾಡಿದ್ದಾರೆ ಎಂದು ಸಂತ್ರಸ್ಥ ಮಹಿಳೆ ದೂರು ನೀಡಿದ್ದಾಳೆ. ಜೊತೆಗೆ, ಆಕೆಯ ಪತಿಯೂ ಕೂಡ ತನ್ನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದ್ದು, ಜಂಗಲ್ ನಲ್ಲಿ ರೇಪ್ ಮಾಡಿದ್ದ ವಿಡಿಯೋ ನನ್ನ ಬಳಿಯಿದ್ದು ಪೊಲೀಸರಿಗೆ ಕೊಟ್ಟಿದ್ದೇನೆ ಎಂದಿದ್ದಾರೆ.

ಯಾರು ಈ ಕಾಮಿಷ್ಟರು?

ಅಪ್ತಾಬ್ ಚಂದನಕಟ್ಟಿ , ಮದರಸಾಬ್ ಮಂಡಕ್ಕಿ, ಅಬ್ದುಲ್ ಖಾದರ್ ಬಂಧಿತರಾಗಿದ್ದಾರೆ. ಇನ್ನೊಬ್ಬ ಆರೋಪಿ ಮೊಹಮ್ಮದ್ ಸೈಪ್ ಗಾಯಾಳುವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಮೂರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಿಸಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.