ಲೈಂಗಿಕ ಕಿರುಕುಳ ಆರೋಪ; ಭಾರತ ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ವಜಾ
ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಭಾರತ ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ವಜಾಗೊಳಿಸಲಾಗಿದೆ. ಅಲೆಕ್ಸ್ ಆಂಬ್ರೋಸ್ ಅವರನ್ನು ವಜಾಗೊಳಿಸಲಾಗಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಮೇಲ್ವಿಚಾರಣೆಯ, ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಸದಸ್ಯ ಡಾ. ಎಸ್.ವೈ. ಖುರೇಶಿ ಖಚಿತಪಡಿಸಿದ್ದಾರೆ. “ಅಂಡರ್ 17 ಮಹಿಳಾ ತಂಡದ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಲೈಂಗಿಕ ದುರ್ನಡತೆಗಾಗಿ ವಜಾಗೊಳಿಸಲಾಗಿದೆ. ಮುಂದಿನ ಕ್ರಮ ಪ್ರಕ್ರಿಯೆಯಲ್ಲಿದೆ” ಎಂದು ಖುರೇಶಿ ಟ್ವೀಟ್ ಮಾಡಿದ್ದಾರೆ. …
ಲೈಂಗಿಕ ಕಿರುಕುಳ ಆರೋಪ; ಭಾರತ ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ವಜಾ Read More »