ಅಂಕಣ

ಆ ಕರಾಳ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು ? | ಸುಕ್ಕು ನೇಯ್ಗೆಯ ಮುಖದ ಮುಪ್ಪಾನ ಮುದುಕಿ ಮತ್ತೆ ಬಾಗಿಲು ಬಡಿಯಲಿದ್ದಾಳೆ, ಎಚ್ಚರ !!

ಕತ್ತಲು ದಟ್ಟವಾಯಿತು. ತಂಪುಗಾಳಿ ಅರೆ ಮುಚ್ಚಿದ್ದ ಕಿಟಕಿಯನ್ನೂ ದಾಟಿಕೊಂಡು ಹಾವಿನಂತೆ ಬುಸುಗುಡುತ್ತ ಬಂತು. ನಾನು ಊರಂಚಿನ ತೋಟದ ಮನೆಯಲ್ಲಿ ಒಬ್ಬನೇ ಮಲಗಿದ್ದೆ. ಒಂದೇ ಸವನೆ ಅರಚುವ ಜೀರುಂಡೆಯ ಶಬ್ದ ಬಿಟ್ಟರೆ ಬೇರೆಲ್ಲ ನೀರವ. ದೂರದಲ್ಲಿ ಜನರು ಎಂದಿಗಿಂತ ಲವಲವಿಕೆಯಲ್ಲಿ ಇದ್ದಾರೆ. ಸುಯ್ಯುವ ಕುಳಿರ್ಗಾಳಿಯನ್ನು ಕೂಡ ಲೆಕ್ಕಿಸದೆ ಅವಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ನಾನೂ ವರ್ಷಗಳಿಂದ ಅವಳಿಗಾಗಿ ಕಾಯುತ್ತಿದ್ದೇನೆ. ಜಗತ್ತಿಗೆ ಜಗತ್ತೆ ಉದ್ವೇಗಗೊಂಡಂತಿತ್ತು. ನಿದ್ದೆಯಿನ್ನೂ ಬಿದ್ದಿರಲಿಲ್ಲ. ಸಾವಿರ ಯೋಚನೆಗಳು, ನೂರು ಯೋಜನೆಗಳು ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸಿದ್ದವು.ಅದ್ಯಾವ ಮಾಯೆಯಲ್ಲಿ ನಿದ್ರಾದೇವಿ ಬಂದು …

ಆ ಕರಾಳ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು ? | ಸುಕ್ಕು ನೇಯ್ಗೆಯ ಮುಖದ ಮುಪ್ಪಾನ ಮುದುಕಿ ಮತ್ತೆ ಬಾಗಿಲು ಬಡಿಯಲಿದ್ದಾಳೆ, ಎಚ್ಚರ !! Read More »

ಒಂದೂವರೆ ಕ್ಲಾಸ್ ಕಲಿತಿದ್ದರೂ, ಇವರು ಮಾಡುತ್ತಾರೆ ಡಾಕ್ಟರೇಟ್ ಗಳಿಗೆ ಪಾಠ !! | ಬರೋಬ್ಬರಿ 52 ದೇಶ ಸುತ್ತಾಡಿದ ನಮ್ಮ ಉಡುಪಿಯ ಮೇಷ್ಟ್ರ ಬಗ್ಗೆ ಹೀಗೊಂದು ವರದಿ

ವಿದೇಶಗಳಿಗೆ ಹೋಗುವವರೆಂದರೆ ಭಾರೀ ಭಾರೀ ಕಲಿತವರು ಅಥವಾ ಸಿರಿವಂತರು ಎಂಬ ಕಲ್ಪನೆ ಇದೆ. ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವ ಸುವರ್ಣರದ್ದು ಇದಕ್ಕೆ ತದ್ವಿರುದ್ಧ. ಇವರು ಕಲಿತದ್ದು ಒಂದೂವರೆ ತರಗತಿ, ಸುತ್ತಾಡಿದ ಒಟ್ಟು ದೇಶಗಳ ಸಂಖ್ಯೆ ಬರೋಬ್ಬರಿ 52.1955ರಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದಲ್ಲಿ ಜನಿಸಿದ ಬನ್ನಂಜೆ ಸಂಜೀವ ಸುವರ್ಣರು ಶಿಕ್ಷಣವನ್ನು ಅನಿವಾರ್ಯವಾಗಿ ನಿಲ್ಲಿಸ ಬೇಕಾಯಿತು. ಗುಂಡಿಬೈಲು ನಾರಾಯಣ ಶೆಟ್ಟಿ, ಮೆಟ್ಕಲ್‌ ಕೃಷ್ಣಯ್ಯ ಶೆಟ್ಟಿ, ಮಾರ್ಗೋಳಿ ಗೋವಿಂದ ಸೇರೆಗಾರ್‌ ಅವರಲ್ಲಿ ವಿವಿಧ ಸ್ತರಗಳ ಯಕ್ಷಗಾನ …

ಒಂದೂವರೆ ಕ್ಲಾಸ್ ಕಲಿತಿದ್ದರೂ, ಇವರು ಮಾಡುತ್ತಾರೆ ಡಾಕ್ಟರೇಟ್ ಗಳಿಗೆ ಪಾಠ !! | ಬರೋಬ್ಬರಿ 52 ದೇಶ ಸುತ್ತಾಡಿದ ನಮ್ಮ ಉಡುಪಿಯ ಮೇಷ್ಟ್ರ ಬಗ್ಗೆ ಹೀಗೊಂದು ವರದಿ Read More »

ಕ್ರಿಸ್‌ಮಸ್‌ ಹಬ್ಬದ ವಿಶೇಷ | ಜಗಕೆ ಬೆಳಕಾಗಿ ಅವತರಿಸಿದ ಪ್ರಭು ಯೇಸು ಕ್ರಿಸ್ತ !!

ಕ್ರಿಸ್ಮಸ್ ಹಬ್ಬ ಸಮಸ್ತ ಕ್ರೈಸ್ತ ಬಾಂಧವರಿಗೆ ಅತೀ ಪವಿತ್ರವಾದ ಹಬ್ಬ. ಕ್ರಿಸ್ಮಸ್ ದಿನ ನಮ್ಮ ರಕ್ಷಕ ಅಂದರೆ ನಮ್ಮ ದೇವರಾದ ಪ್ರಭು ಯೇಸು ಕ್ರಿಸ್ತರು ಜನಿಸಿದ ಅತೀ ಸಂಭ್ರಮದ ಹಬ್ಬ. ಸಂತ ಜೋಸೆಫ್ ಹಾಗೂ ಕನ್ಯಾಮರಿಯಮ್ಮನವರ ಪುತ್ರರಾಗಿ ಪ್ರಭು ಯೇಸುಕ್ರಿಸ್ತರು ಜನಿಸುತ್ತಾರೆ. ಪ್ರಭು ಯೇಸು ಕ್ರಿಸ್ತರು ಈ ಭೂಮಿಗೆ ಬಂದದ್ದು ನಮ್ಮ ಹಾಗೂ ಈ ಲೋಕದ ಪಾಪವನ್ನು ಪರಿಹರಿಸುವುದಕ್ಕೋಸ್ಕರ. ”ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ ಸಮಾಧಾನ” ಎಂಬ ಗಾಯನವನ್ನು ದೇವದೂತರು ಪ್ರಭು ಯೇಸು ಕ್ರಿಸ್ತ …

ಕ್ರಿಸ್‌ಮಸ್‌ ಹಬ್ಬದ ವಿಶೇಷ | ಜಗಕೆ ಬೆಳಕಾಗಿ ಅವತರಿಸಿದ ಪ್ರಭು ಯೇಸು ಕ್ರಿಸ್ತ !! Read More »

ಕಡಬ : ಕೊಂಬಾರು ಹಾಡುಹಗಲೇ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ

ಕಡಬ :ಕೊಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ಹಾಡುಹಗಲೇ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಕಿತ್ತು ತಿಂದಿದೆ. ಸಿರಿಬಾಗಿಲಿನ ಬಾರ್ಯ ಎಂಬ ಪ್ರದೇಶಕ್ಕೆ ಗರ್ಭಿಣಿ ಆನೆ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆನೆಯನ್ನು ಓಡಿಸುವ ಸಲುವಾಗಿ ಸಿಡಿಸಿದರೂ ತೋಟದಿಂದ ಹೋಗಿಲ್ಲ ಎಂದು ಕೃಷಿಕರು ವಿವರಿಸಿದ್ದಾರೆ. ಸಿರಿಬಾಗಿಲಿನ ಜನಾರ್ಧನ ಬಾರ್ಯ,ಬಾಲಕೃಷ್ಣ ಗೌಡ, ಐತಪ್ಪ ಗೌಡ,ದೇವರಾಜ ಗೌಡ ,ಅಣ್ಣಪ್ಪ ಗೌಡ ಎಂಬವರ ತೋಟಕ್ಕೆ ಕಾಡಾನೆ ನುಗ್ಗಿದೆ.. ಈ ಭಾಗದಲ್ಲಿ ಕೃಷಿ ತೋಟಗಳಿಗೆ ನಿರಂತರ ಆನೆ ಹಾಗೂ ಇನ್ನಿತರ ಕಾಡು ಪ್ರಾಣಿ …

ಕಡಬ : ಕೊಂಬಾರು ಹಾಡುಹಗಲೇ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ Read More »

ಮದುವೆಯಾಗಿ ಎಂಟು ವರ್ಷಗಳಾದರೂ ಒಂದು ಬಾರಿಯೂ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡದ ಗಂಡ | ಈ ಕಾರಣಕ್ಕಾಗಿ ಪತ್ನಿ ಕೈಗೊಂಡ ತೀರ್ಮಾನವೇನು ಗೊತ್ತಾ??

ಯಾವುದೇ ಗಿಡವನ್ನು ನೆಟ್ಟ ಬಳಿಕ ಹಾಗೆ ಬಿಟ್ಟರೆ, ಅದು ಅಲ್ಲೇ ಬಾಡಿ ಹೋಗಿ ಸತ್ತು ಹೋಗುವುದು. ಸಂಬಂಧವು ಕೂಡ ಇದೇ ರೀತಿ. ಸಂಬಂಧಕ್ಕಾಗಿ ಹೆಚ್ಚು ಸಮಯ ನೀಡಬೇಕು. ಅದರಲ್ಲೂ ಗಂಡ-ಹೆಂಡತಿ ಸಂಬಂಧ. ತುಂಬಾ ಪ್ರಮುಖ ಸಂಬಂಧಗಳಲ್ಲೊಂದಾಗಿದೆ. ಒಂದು ಸಂಸಾರ ಸುಸೂತ್ರವಾಗಿ ನಡೆಯಬೇಕೆಂದರೆ ಅಲ್ಲಿ ಪತಿ-ಪತ್ನಿಯರಿಬ್ಬರ ಏಕ ಭಾವವೂ ಅಗತ್ಯ. ಮೊದಲು ಇಬ್ಬರೂ ನಾನು- ನಾನೆಂಬ ಅಹಂಕಾರವನ್ನು ತೊರೆದಿರಬೇಕು. ಗಂಡ-ಹೆಂಡತಿಯ ಮಧ್ಯೆ ಒಂದೂ ರಹಸ್ಯ ವಿಚಾರವುಳಿದಿಲ್ಲದಿದ್ದರೆ ಮಾತ್ರ ಅದು ಸುಖೀ ಸಂಸಾರವಾಗಿರಲು ಸಾಧ್ಯ. ಗಂಡ-ಹೆಂಡತಿ ಅಂದ್ರೆ ಒಬ್ಬರಿಗೆ ಮತ್ತೊಬ್ಬರು …

ಮದುವೆಯಾಗಿ ಎಂಟು ವರ್ಷಗಳಾದರೂ ಒಂದು ಬಾರಿಯೂ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡದ ಗಂಡ | ಈ ಕಾರಣಕ್ಕಾಗಿ ಪತ್ನಿ ಕೈಗೊಂಡ ತೀರ್ಮಾನವೇನು ಗೊತ್ತಾ?? Read More »

ಆತನ ಹೆಬ್ಬಂಡೆ ಬೆನ್ನ ಮೇಲೆ ಬೆರಳ ನುಣುಪು ಬೆರೆಸಿ ಆಕೆಯ ಮರ್ದನ, ಕುಲುಕುವ ಸೊಂಟದ ಕೊಡ ರವಿಕೆ ಒದ್ದೆ ಮಾಡಿಕೊಂಡ ಸಂದರ್ಭ ಯಾವುದು ಗೊತ್ತಾ !!

ಮತ್ತೆ ಬೆಳಕಿನ ಹಬ್ಬ ದೀಪಾವಳಿ ಬಂದಿದೆ. ಸಾಲು ಸಾಲು ಆಚರಣೆಗಳ ಸಾಲಿನೊಂದಿಗೆ ಹಚ್ಚಿಟ್ಟ ದೀಪಗಳ ಸಾಲು.  ಹಣತೆಗಳ ಮಂದ್ರ ಬೆಳಕಿನ ತೇಜದ ಜತೆ ಸ್ಪರ್ಧೆಗೆ ಬಿದ್ದು ಅಲೌಕಿಕ ವಾತಾವರಣ ಸೃಷ್ಟಿಸುವ ನಕ್ಷತ್ರ ಕಡ್ಡಿಯ ಕಿಡಿ.  ಪುಟ್ಟಿಯ ಕಣ್ಣಲ್ಲಿ ಬೆಳಕಿನ ನಕ್ಷತ್ರಗಳು ಅರಳುತ್ತವೆ. ಆತನಿಗೆ ಸುರ್ಸುರುಬತ್ತಿ ರುಚಿಸುವುದಿಲ್ಲ. ಪುಟ್ಟ ಬೀಡಿ ಪಟಾಕಿಗಾಗಿ ಕಣ್ಣು ನೆಟ್ಟು ಕೂತಿದ್ದಾನೆ. ಹರೆಯದ ಹುಡುಗರು ರಾಕೆಟ್ ಬಾಂಬ್ ಗಳ ಹುಡುಕಾಟದಲ್ಲಿದ್ದರೆ, ಅದ್ರತ್ತಲೂ ಪುಟ್ಟನದು  ಒಂದು ಕುತೂಹಲದ ಕಣ್ಣು. ಅತನಿಗೆ ಯಾವುದೇ ಸಣ್ಣದು, ಚಿಕ್ಕದು ಕಣ್ಣಿಗೆ ಬೀಳುವದಿಲ್ಲ. …

ಆತನ ಹೆಬ್ಬಂಡೆ ಬೆನ್ನ ಮೇಲೆ ಬೆರಳ ನುಣುಪು ಬೆರೆಸಿ ಆಕೆಯ ಮರ್ದನ, ಕುಲುಕುವ ಸೊಂಟದ ಕೊಡ ರವಿಕೆ ಒದ್ದೆ ಮಾಡಿಕೊಂಡ ಸಂದರ್ಭ ಯಾವುದು ಗೊತ್ತಾ !! Read More »

ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಕರೆನೀಡಿದ ಹಿಂದೂ ಜನಜಾಗೃತಿ ಸಮಿತಿ | ಸೆಕ್ಯುಲರ್’ ಭಾರತದಲ್ಲಿ ಧರ್ಮಾಧಾರಿತ ‘ಹಲಾಲ್ ಆರ್ಥಿಕತೆ’ ಯಾತಕ್ಕಾಗಿ ?!

📝 ಶ್ರೀ ರಮೇಶ್ ಶಿಂಧೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ ‘ಹಲಾಲ್’ ಇದು ಮೂಲತಃ ಅರೇಬಿಕ್ ಪದವಾಗಿದ್ದು ಇಸ್ಲಾಮ್‌ಗನುಸಾರ ನ್ಯಾಯಸಮ್ಮತ ಎಂಬುದು ಇದರ ಅರ್ಥವಾಗಿದೆ. ಮೂಲತಃ ಮಾಂಸದ ಸಂದರ್ಭದಲ್ಲಿಮಾತ್ರವಿದ್ದ, ‘ಹಲಾಲ್’ಅನ್ನು ಈಗ ಸಸ್ಯಾಹಾರಿ ಆಹಾರಗಳ ಸಹಿತ, ಸೌಂದರ್ಯವರ್ಧಕಗಳು, ಔಷಧಗಳು, ಆಸ್ಪತ್ರೆಗಳು, ಮನೆಗಳು ಸೇರಿದಂತೆ ಹಲವು ವಿಷಯಗಳಲ್ಲಿಯೂ ಈಗ ಬೇಡಿಕೆ ಮಾಡಲಾಗುತ್ತಿದೆ. ಇದಕ್ಕಾಗಿ ಹಲಾಲ್ ಇಂಡಿಯಾ, ಜಮೀಯತ್ ಉಲೇಮಾ-ಎ-ಹಿಂದ್ ನಂತಹ ಇಸ್ಲಾಮಿಕ್ ಸಂಸ್ಥೆಗಳಿಗೆ ಶುಲ್ಕ ಪಾವತಿಸಿ ಅವರಿಂದ ‘ಹಲಾಲ್ ಪ್ರಮಾಣಪತ್ರ’ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಜಾತ್ಯತೀತ ಭಾರತದಲ್ಲಿ ಸರಕಾರದ …

ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಕರೆನೀಡಿದ ಹಿಂದೂ ಜನಜಾಗೃತಿ ಸಮಿತಿ | ಸೆಕ್ಯುಲರ್’ ಭಾರತದಲ್ಲಿ ಧರ್ಮಾಧಾರಿತ ‘ಹಲಾಲ್ ಆರ್ಥಿಕತೆ’ ಯಾತಕ್ಕಾಗಿ ?! Read More »

ತಳಮಟ್ಟದಲ್ಲಿ ಅಡಿಪಾಯ ಗಟ್ಟಿಯಾಗದಿದ್ದಲ್ಲಿ ಮೇಲಂತಸ್ತು ಗಟ್ಟಿಯಾಗಲು ಸಾಧ್ಯವೇ?

ತಳಮಟ್ಟದಲ್ಲಿ ಅಡಿಪಾಯ ಗಟ್ಟಿಯಾಗದಿದ್ದಲ್ಲಿ ಮೇಲಂತಸ್ತು ಗಟ್ಟಿಯಾಗಲು ಸಾಧ್ಯವೇ?…ಇದೊಂದು ಸಾಮಾನ್ಯ ಪ್ರಶ್ನೆ.ಈ ಪ್ರಶ್ನೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ,ಇದರಲ್ಲಿ ಕಿರಿಯ ಮತ್ತು ಹಿರಿಯ ಎರಡೂ ಸೇರಿಸಿ ಅನ್ವಯಗೊಳಿಸೋಣ.ಇದರಲ್ಲಿ ಸಾಮಾನ್ಯ ಶಿಕ್ಷಣ ಸದ್ಯದ ಮಟ್ಟಿಗೆ ಪರ್ವಾಗಿಲ್ಲ ಎಂದರೂ ವಿಶೇಷ ಶಿಕ್ಷಣಗಳಾದ ಚಿತ್ರ ಕಲೆ, ಸಂಗೀತ ಮತ್ತು ದೈಹಿಕ ಶಿಕ್ಷಣ ಇವುಗಳ ನಿರ್ವಹಣೆ ತೀರಾ ಕೆಳಮಟ್ಟದಲ್ಲಿದೆ. ಅದರಲ್ಲಿ ಚಿತ್ರ ಕಲೆ ಮತ್ತು ಸಂಗೀತ ಶಿಕ್ಷಣವನ್ನು ಶಾಲೆಯನ್ನು ಹೊರತಾಗಿಯೂ ಕಲಿಯಬಹುದು.ಆದರೂ ಕಷ್ಟವೆ.ಆದರೆ ದೈಹಿಕ ಶಿಕ್ಷಣವನ್ನು ಶಾಲೆಗಳಲ್ಲೇ ಕಲಿಯಬೇಕು.ಒಬ್ಬ ವಿದ್ಯಾರ್ಥಿ ಮಾನಸಿಕವಾಗಿ ಸಾಮಾಜಿಕವಾಗಿ ಮತ್ತು ದೈಹಿಕವಾಗಿ …

ತಳಮಟ್ಟದಲ್ಲಿ ಅಡಿಪಾಯ ಗಟ್ಟಿಯಾಗದಿದ್ದಲ್ಲಿ ಮೇಲಂತಸ್ತು ಗಟ್ಟಿಯಾಗಲು ಸಾಧ್ಯವೇ? Read More »


‘ಆನ್‌ಲೈನ್’ ವಿಶೇಷ ಚರ್ಚಾಕೂಟ ! :‘ಆಹಾರ ಪದಾರ್ಥಗಳಲ್ಲಿ ಕಲಬೆರಕೆಯನ್ನು ಹೇಗೆ ಗುರುತಿಸುವುದು ಮತ್ತು ಅದಕ್ಕೆ ಪರಿಹಾರ ?’

ಹಬ್ಬಗಳ ಸಮಯದಲ್ಲಿ ಜಾಗರೂಕರಾಗಿದ್ದು ಆಹಾರ ಪದಾರ್ಥಗಳನ್ನು ಖರೀದಿಸಿ !  – ಶ್ರೀ. ಮೋಹನ ಕೆಂಬಳಕರ, ಸಹಾಯಕ ಆಯುಕ್ತರು, ಆಹಾರ ಮತ್ತು ಔಷಧ ಆಡಳಿತ ಅನಾರೋಗ್ಯಕರ ವಾತಾವರಣದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವುದು ಕಂಡುಬಂದಲ್ಲಿ, ಕಲಬೆರಕೆಯುಕ್ತ ಆಹಾರ ಜೊತೆಗಿಟ್ಟುಕೊಂಡಿದ್ದರೆ ಅದೇ ರೀತಿ ಕಲಬೆರಕೆಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ಯಾರಾದರೂ ಮೃತಪಟ್ಟಲ್ಲಿ ಅಥವಾ ವ್ಯಕ್ತಿಗೆ ಶಾರೀರಿಕ ತೊಂದರೆ, ಅನಾರೋಗ್ಯ ಹೀಗೆ ಅನೇಕ ಅಪರಾಧಗಳಿಗಾಗಿ ಆಹಾರ ಸುರಕ್ಷತೆಯ ಬಗ್ಗೆ ಈಗಿರುವ ಕಾನೂನಿಗನುಸಾರ ಆರೋಪಿಗೆ ಶಿಕ್ಷೆ ವಿಧಿಸುವ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಈ ನಿಟ್ಟಿನಲ್ಲಿ ಅಪರಾಧಗಳಿಗೆ …


‘ಆನ್‌ಲೈನ್’ ವಿಶೇಷ ಚರ್ಚಾಕೂಟ ! :‘ಆಹಾರ ಪದಾರ್ಥಗಳಲ್ಲಿ ಕಲಬೆರಕೆಯನ್ನು ಹೇಗೆ ಗುರುತಿಸುವುದು ಮತ್ತು ಅದಕ್ಕೆ ಪರಿಹಾರ ?’
Read More »

ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ | ಆಕೆಯ ಶೌರ್ಯ ಸಾಹಸ ರಾಷ್ಟ್ರಪ್ರೇಮದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಕನ್ನಡ ನಾಡಿನಲ್ಲಿ ಸ್ವತಂತ್ರ್ಯ ಹೋರಾಟದ ಸಮಯದಲ್ಲಿ ಆಗಿ ಹೋದ ವೀರವನಿತೆಯರಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳು ಅಗ್ರಗಣ್ಯಳು. ಅಕ್ಟೋಬರ ೨೩ರಂದು ಅವರ ಜಯಂತಿಯಿರುವುದರಿಂದ ಅವರ ಶೌರ್ಯ ಸಾಹಸ, ರಾಷ್ಟ್ರಪ್ರೇಮದ ಬಗ್ಗೆ ತಿಳಿದುಕೊಳ್ಳೋಣ.ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸವು ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚೆನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದ್ದು ಇದರ ಇತಿಹಾಸವು ಕ್ರಿ.ಶ.೧೫೮೬ರಿಂದಲೇ ಆರಂಭವಾಗುತ್ತದೆ. …

ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ | ಆಕೆಯ ಶೌರ್ಯ ಸಾಹಸ ರಾಷ್ಟ್ರಪ್ರೇಮದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ Read More »

error: Content is protected !!
Scroll to Top