ಅಂಕಣ

ಬೇಸಿಗೆ ಕಾಲದಲ್ಲಿ ಮನೆಯನ್ನು ತಂಪಾಗಿರಿಸಲು ಈ ಟಿಪ್ಸ್ ಗಳನ್ನು ಅನುಸರಿಸಿ…

ಈ ಬಾರಿಯ ಬೇಸಿಗೆ ಕಾಲದಲ್ಲಿ ದೇಶಾದ್ಯಂತ ಬಿಸಿಲಿನ ತಾಪವು ಹೆಚ್ಚಾಗಿದೆ. ಬೆಳಿಗ್ಗೆ 10 ಗಂಟೆಯ ಬಳಿಕ ಮನೆಯಿಂದ ಹೊರ ಹೋಗುವುದು ಹೇಗಪ್ಪಾ… ಎನ್ನುವಂತಾಗಿದೆ. ಈ ಮಧ್ಯೆ, ವಿದ್ಯುತ್ ಕಡಿತವು ಸಹ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯ. ಆದರೆ, ಒಂದೆರಡು ನಿಮಿಷ ಕರೆಂಟ್ ಇಲ್ಲ, ಅಂದರೂ ಸೆಕೆಯಿಂದಾಗಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ನೀವೂ ಸಹ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಬೇಸಿಗೆಯಲ್ಲಿ ವಿದ್ಯುತ್ ಇಲ್ಲದೆಯೂ ಮನೆಯನ್ನು ಕೂಲ್ ಇರಿಸಬಹುದಾದ ವಿಶಿಷ್ಟ ವಿಧಾನದ ಬಗ್ಗೆ ತಿಳಿಯೋಣ …

ಬೇಸಿಗೆ ಕಾಲದಲ್ಲಿ ಮನೆಯನ್ನು ತಂಪಾಗಿರಿಸಲು ಈ ಟಿಪ್ಸ್ ಗಳನ್ನು ಅನುಸರಿಸಿ… Read More »

ಆ ಕೋಳಿ ತನ್ನ ತಲೆ ಕಡಿದ ನಂತರ ಕೂಡಾ 18 ತಿಂಗಳುಗಳ ಕಾಲ ಬದುಕಿತ್ತು | ತಲೆ ನೆಲಕ್ಕೆ ಬಿದ್ದರೂ ಸಾಯಲು ನಿರಾಕರಿಸಿದ ಕೋಳಿಯ ಕಥೆ !!

ಅದೊಂದು ಕುಟುಂಬ ಕೋಳಿ ಸಾಕಿ, ಅದನ್ನು ಮಾರಾಟ ಮಾಡಿ ಬದುಕುತ್ತಿತ್ತು. ಒಂದು ದಿನ ಅವರು ಸುಮಾರು 50 ಕೋಳಿಗಳನ್ನು ಮಾಂಸಕ್ಕಾಗಿ ವಧೆ ಮಾಡಲು ನಿರ್ಧರಿಸಿದ್ದರು. ಆ ಮಾಂಸ ಮಾಡಲು ಉದ್ದೇಶಿಸಿದ 50 ಕೋಳಿಗಳಲ್ಲಿ ಒಂದು ಕೋಳಿ ಮಾತ್ರ ಸಾಯಲು ನಿರಾಕರಿಸಿತ್ತು. ತನ್ನ ತಲೆ ಕಡಿದ ನಂತರ ಕೂಡಾ ಆ ಕೋಳಿ ಬದುಕಲು ಬಯಸಿತ್ತು !! ಅಂದು, ಒಂದೊಂದಾಗಿ ಕೋಳಿಗಳ ತಲೆ ಕಡಿದ ಹಾಗೆ, ಎಲ್ಲಾ ಕೋಳಿಗಳು ಕೂಡಾ ಪಟಪಟನೆ ರೆಕ್ಕೆ, ಕಾಲು ಬಡಿದುಕೊಂಡು ನಿಮಿಷಗಳಲ್ಲಿ ಸತ್ತು ಬಿದ್ದಿದ್ದವು. …

ಆ ಕೋಳಿ ತನ್ನ ತಲೆ ಕಡಿದ ನಂತರ ಕೂಡಾ 18 ತಿಂಗಳುಗಳ ಕಾಲ ಬದುಕಿತ್ತು | ತಲೆ ನೆಲಕ್ಕೆ ಬಿದ್ದರೂ ಸಾಯಲು ನಿರಾಕರಿಸಿದ ಕೋಳಿಯ ಕಥೆ !! Read More »

ಲಕ್ಷಾಂತರ ಜನರಿಗೆ ದಾರಿದೀಪವಾದ ಗೀತಾ 18 (ಭಗವದ್ಗೀತೆ ಕೋರ್ಸ್)

ಆ ದಿನಗಳು‌ ನನಗಿನ್ನೂ ಚೆನ್ನಾಗಿ‌ ನೆನಪಿದೆ, ಕೊರೊನಾದಿಂದಾಗಿ ಇಡೀ ದೆಶದ ಜನತೆಯೇ ತತ್ತರಿಸಿ ಹೋಗಿತ್ತು, ಮನೆಯಲ್ಲೇ ಬಂಧಿಯಾಗಿ ತಿಂಗಳುಗಟ್ಟಲೇ ಕಳೆಯಬೇಕಾದ ಪರಿಸ್ಥಿತಿ, ಯಾವಾಗ ಈ ಕೊರೊನಾ ಕೊನೆಯಾಗಿ ಮತ್ತೆ ಜನ ಜೀವನ ಮೊದಲಿನಂತಾಗುವುದೋ ಎಂದು ಕಾತರಿಸುತ್ತದ್ದ ದಿನಗಳು, ಪ್ರತಿ ದಿನ‌ ಸಾವು‌ನೋವಿನ ಸುದ್ದಿಯಿಂದಾಗುತ್ತಿದ್ದ ಆತಂಕ, ಒತ್ತಡ, ಮನೆಯಲ್ಲೇ ಕುಳಿತು ಏನು ಮಾಡಬೇಕಂತ ತೋಚದೇ ಖನ್ನತೆಗೆ ಒಳಗಾಗುವಂತಹ ಪರಿಸ್ಥಿತಿ ಯಲ್ಲಿದ್ದಾಗ ಯಾವುದೋ ಒಂದು ವಾಟ್ಸಪ್ ಗ್ರೂಪಿನಲ್ಲಿ ಬಂದ 18 ದಿವಸಗಳ ಭಗವದ್ಗೀತೆ ಕೋರ್ಸ್ ಲಿಂಕ್ ಒತ್ತಿ ಅದಕ್ಕೆ ಸೇರಿದೆ …

ಲಕ್ಷಾಂತರ ಜನರಿಗೆ ದಾರಿದೀಪವಾದ ಗೀತಾ 18 (ಭಗವದ್ಗೀತೆ ಕೋರ್ಸ್) Read More »

ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣವಂತೆ ಈ ಎಲೆ !! | ಇಲ್ಲಿದೆ ಈ ಔಷಧೀಯ ಎಲೆಯ ಕುರಿತು ಮಾಹಿತಿ

ಇಂದಿನ ಜೀವನಶೈಲಿಯಲ್ಲಿ ನಮ್ಮನ್ನು ನಾವು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಮಧುಮೇಹ, ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ. ಆದರೆ ಈ ಕಾಯಿಲೆಗಳಿಗೆಲ್ಲ ಬಿಲ್ವಪತ್ರೆ ಎಲೆ ರಾಮಬಾಣವಿದ್ದಂತೆ. ಈ ಆರೋಗ್ಯ ಸಮಸ್ಯೆಗಳು ನಿಮಗಿದ್ದಲ್ಲಿ, ಬಿಲ್ವ ಪತ್ರೆ ತಿನ್ನುವ ಮೂಲಕ ಅಂತಹ ಕಾಯಿಲೆಗಳನ್ನು ದೂರ ಮಾಡಬಹುದು. ಬಿಲ್ವ ಪತ್ರೆ ಶಿವನಿಗೆ ತುಂಬಾ ಪ್ರಿಯವಾದುದು. ಹಾಗಾಗಿ ಶಿವನ ಪ್ರತಿ ಪೂಜೆಯಲ್ಲಿಯೂ ಬಿಲ್ವ ಪತ್ರೆಯನ್ನು ಅರ್ಪಿಸಲಾಗುತ್ತದೆ. …

ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣವಂತೆ ಈ ಎಲೆ !! | ಇಲ್ಲಿದೆ ಈ ಔಷಧೀಯ ಎಲೆಯ ಕುರಿತು ಮಾಹಿತಿ Read More »

ಬೇಸಿಗೆಯ ಉರಿಬಿಸಿಲಿಗೆ ಬೆಸ್ಟ್ “ಕಬ್ಬಿನ ಜ್ಯೂಸ್”!! | ಈ ಪಾನಿಯದಿಂದ ಆರೋಗ್ಯಕ್ಕಾಗುವ ಪ್ರಯೋಜನ ಏನು ಗೊತ್ತೇ!?-ಇಲ್ಲಿದೆ ನೋಡಿ ಮಾಹಿತಿ

ಬೇಸಿಗೆ ಬಂತೆಂದರೆ ಸಾಕು, ಉರಿಬಿಸಿಲಿಗೆ ನಾವು ನಮ್ಮ ಆರೋಗ್ಯದ ಕುರಿತು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಬೇಸಿಗೆಯಲ್ಲಿ ಹಸಿವು ಕಡಿಮೆಯಾಗುವುದರಿಂದ ಎಲ್ಲಾ ಸಮಯದಲ್ಲೂ ನೀರು ಕುಡಿಯಬೇಕೆನ್ನಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನೀರಿನೊಂದಿಗೆ ಹಣ್ಣಿನ ರಸವನ್ನು ಹೆಚ್ಚು ಸೇವಿಸಿ. ಇದು ದೇಹವನ್ನು ತಂಪಾಗಿರಿಸುವ ಜೊತೆಗೆ ದೇಹದಲ್ಲಿ ನೀರಿನ ಕೊರತೆಯಿಂದ ರಕ್ಷಿಸುತ್ತದೆ. ಇವುಗಳಲ್ಲಿ ಪ್ರಮುಖವಾದ ಹಣ್ಣಿನ ರಸವೆಂದರೆ ಅದು ಕಬ್ಬಿನ ರಸ. ಕಬ್ಬಿನ ರಸವು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು ಮತ್ತು ಅನೇಕ ಅಮೈನೋ ಆಮ್ಲಗಳನ್ನು ಒಳಗೊಂಡಿದ್ದು, ಇದು ನಿಮ್ಮ …

ಬೇಸಿಗೆಯ ಉರಿಬಿಸಿಲಿಗೆ ಬೆಸ್ಟ್ “ಕಬ್ಬಿನ ಜ್ಯೂಸ್”!! | ಈ ಪಾನಿಯದಿಂದ ಆರೋಗ್ಯಕ್ಕಾಗುವ ಪ್ರಯೋಜನ ಏನು ಗೊತ್ತೇ!?-ಇಲ್ಲಿದೆ ನೋಡಿ ಮಾಹಿತಿ Read More »

ಗುಂಯ್ ಎನ್ನುತ್ತಾ ಸುತ್ತುವರಿಯುವ ಸೊಳ್ಳೆ ಕಾಟದಿಂದ ಬೇಸತ್ತಿದ್ದೀರಾ!?? | ಮನೆಯ ಸುತ್ತ ಈ ಗಿಡಗಳನ್ನು ನೆಟ್ಟು ಸೊಳ್ಳೆ ಕಾಟದಿಂದ ಸುಲಭವಾಗಿ ಪಾರಾಗಿ

ಮಳೆಗಾಲ ಬಂತೆಂದರೆ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಗುಂಯ್ ಗುಂಯ್ ಎನ್ನುತ್ತಾ ನಮ್ಮನ್ನು ಸುತ್ತುವರಿಯುವ ಸೊಳ್ಳೆಗಳು ವಿಪರೀತ ಕಾಟ ಕೊಡುತ್ತವೆ. ಆದರೆ ಇದೀಗ ಬೇಸಿಗೆಯ ಸಮಯದಲ್ಲಿಯೂ ಬೆಳಿಗ್ಗೆ, ಸಂಜೆ ಸೊಳ್ಳೆಗಳ ಕಾಟ ಶುರುವಾಗಿದೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ , ಮಲೇರಿಯಾ, ಚಿಕುನ್ ಗುನ್ಯಾದಂತಹ ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ ಸೊಳ್ಳೆ ಕಚ್ಚಿದ ಸ್ಥಳದಲ್ಲಿ ತುರಿಕೆ ಕಾಣಿಸಿಕೊಂಡು ಚರ್ಮದ ಅಲರ್ಜಿ ಕೂಡ ಬಾಧಿಸುತ್ತದೆ. ಆದರೆ ಮನೆಯ ಸುತ್ತ ಮುತ್ತ ಕೆಲವೊಂದು ಸಸ್ಯಗಳನ್ನು ನೆಡುವ ಮೂಲಕ ಈ ಸೊಳ್ಳೆ ಕಾಟದಿಂದ ಮುಕ್ತಿ …

ಗುಂಯ್ ಎನ್ನುತ್ತಾ ಸುತ್ತುವರಿಯುವ ಸೊಳ್ಳೆ ಕಾಟದಿಂದ ಬೇಸತ್ತಿದ್ದೀರಾ!?? | ಮನೆಯ ಸುತ್ತ ಈ ಗಿಡಗಳನ್ನು ನೆಟ್ಟು ಸೊಳ್ಳೆ ಕಾಟದಿಂದ ಸುಲಭವಾಗಿ ಪಾರಾಗಿ Read More »

ಆ ಕರಾಳ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು ? | ಸುಕ್ಕು ನೇಯ್ಗೆಯ ಮುಖದ ಮುಪ್ಪಾನ ಮುದುಕಿ ಮತ್ತೆ ಬಾಗಿಲು ಬಡಿಯಲಿದ್ದಾಳೆ, ಎಚ್ಚರ !!

ಕತ್ತಲು ದಟ್ಟವಾಯಿತು. ತಂಪುಗಾಳಿ ಅರೆ ಮುಚ್ಚಿದ್ದ ಕಿಟಕಿಯನ್ನೂ ದಾಟಿಕೊಂಡು ಹಾವಿನಂತೆ ಬುಸುಗುಡುತ್ತ ಬಂತು. ನಾನು ಊರಂಚಿನ ತೋಟದ ಮನೆಯಲ್ಲಿ ಒಬ್ಬನೇ ಮಲಗಿದ್ದೆ. ಒಂದೇ ಸವನೆ ಅರಚುವ ಜೀರುಂಡೆಯ ಶಬ್ದ ಬಿಟ್ಟರೆ ಬೇರೆಲ್ಲ ನೀರವ. ದೂರದಲ್ಲಿ ಜನರು ಎಂದಿಗಿಂತ ಲವಲವಿಕೆಯಲ್ಲಿ ಇದ್ದಾರೆ. ಸುಯ್ಯುವ ಕುಳಿರ್ಗಾಳಿಯನ್ನು ಕೂಡ ಲೆಕ್ಕಿಸದೆ ಅವಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ನಾನೂ ವರ್ಷಗಳಿಂದ ಅವಳಿಗಾಗಿ ಕಾಯುತ್ತಿದ್ದೇನೆ. ಜಗತ್ತಿಗೆ ಜಗತ್ತೆ ಉದ್ವೇಗಗೊಂಡಂತಿತ್ತು. ನಿದ್ದೆಯಿನ್ನೂ ಬಿದ್ದಿರಲಿಲ್ಲ. ಸಾವಿರ ಯೋಚನೆಗಳು, ನೂರು ಯೋಜನೆಗಳು ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸಿದ್ದವು.ಅದ್ಯಾವ ಮಾಯೆಯಲ್ಲಿ ನಿದ್ರಾದೇವಿ ಬಂದು …

ಆ ಕರಾಳ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು ? | ಸುಕ್ಕು ನೇಯ್ಗೆಯ ಮುಖದ ಮುಪ್ಪಾನ ಮುದುಕಿ ಮತ್ತೆ ಬಾಗಿಲು ಬಡಿಯಲಿದ್ದಾಳೆ, ಎಚ್ಚರ !! Read More »

ಒಂದೂವರೆ ಕ್ಲಾಸ್ ಕಲಿತಿದ್ದರೂ, ಇವರು ಮಾಡುತ್ತಾರೆ ಡಾಕ್ಟರೇಟ್ ಗಳಿಗೆ ಪಾಠ !! | ಬರೋಬ್ಬರಿ 52 ದೇಶ ಸುತ್ತಾಡಿದ ನಮ್ಮ ಉಡುಪಿಯ ಮೇಷ್ಟ್ರ ಬಗ್ಗೆ ಹೀಗೊಂದು ವರದಿ

ವಿದೇಶಗಳಿಗೆ ಹೋಗುವವರೆಂದರೆ ಭಾರೀ ಭಾರೀ ಕಲಿತವರು ಅಥವಾ ಸಿರಿವಂತರು ಎಂಬ ಕಲ್ಪನೆ ಇದೆ. ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರದ ಪ್ರಾಂಶುಪಾಲ ಸಂಜೀವ ಸುವರ್ಣರದ್ದು ಇದಕ್ಕೆ ತದ್ವಿರುದ್ಧ. ಇವರು ಕಲಿತದ್ದು ಒಂದೂವರೆ ತರಗತಿ, ಸುತ್ತಾಡಿದ ಒಟ್ಟು ದೇಶಗಳ ಸಂಖ್ಯೆ ಬರೋಬ್ಬರಿ 52.1955ರಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದಲ್ಲಿ ಜನಿಸಿದ ಬನ್ನಂಜೆ ಸಂಜೀವ ಸುವರ್ಣರು ಶಿಕ್ಷಣವನ್ನು ಅನಿವಾರ್ಯವಾಗಿ ನಿಲ್ಲಿಸ ಬೇಕಾಯಿತು. ಗುಂಡಿಬೈಲು ನಾರಾಯಣ ಶೆಟ್ಟಿ, ಮೆಟ್ಕಲ್‌ ಕೃಷ್ಣಯ್ಯ ಶೆಟ್ಟಿ, ಮಾರ್ಗೋಳಿ ಗೋವಿಂದ ಸೇರೆಗಾರ್‌ ಅವರಲ್ಲಿ ವಿವಿಧ ಸ್ತರಗಳ ಯಕ್ಷಗಾನ …

ಒಂದೂವರೆ ಕ್ಲಾಸ್ ಕಲಿತಿದ್ದರೂ, ಇವರು ಮಾಡುತ್ತಾರೆ ಡಾಕ್ಟರೇಟ್ ಗಳಿಗೆ ಪಾಠ !! | ಬರೋಬ್ಬರಿ 52 ದೇಶ ಸುತ್ತಾಡಿದ ನಮ್ಮ ಉಡುಪಿಯ ಮೇಷ್ಟ್ರ ಬಗ್ಗೆ ಹೀಗೊಂದು ವರದಿ Read More »

ಕ್ರಿಸ್‌ಮಸ್‌ ಹಬ್ಬದ ವಿಶೇಷ | ಜಗಕೆ ಬೆಳಕಾಗಿ ಅವತರಿಸಿದ ಪ್ರಭು ಯೇಸು ಕ್ರಿಸ್ತ !!

ಕ್ರಿಸ್ಮಸ್ ಹಬ್ಬ ಸಮಸ್ತ ಕ್ರೈಸ್ತ ಬಾಂಧವರಿಗೆ ಅತೀ ಪವಿತ್ರವಾದ ಹಬ್ಬ. ಕ್ರಿಸ್ಮಸ್ ದಿನ ನಮ್ಮ ರಕ್ಷಕ ಅಂದರೆ ನಮ್ಮ ದೇವರಾದ ಪ್ರಭು ಯೇಸು ಕ್ರಿಸ್ತರು ಜನಿಸಿದ ಅತೀ ಸಂಭ್ರಮದ ಹಬ್ಬ. ಸಂತ ಜೋಸೆಫ್ ಹಾಗೂ ಕನ್ಯಾಮರಿಯಮ್ಮನವರ ಪುತ್ರರಾಗಿ ಪ್ರಭು ಯೇಸುಕ್ರಿಸ್ತರು ಜನಿಸುತ್ತಾರೆ. ಪ್ರಭು ಯೇಸು ಕ್ರಿಸ್ತರು ಈ ಭೂಮಿಗೆ ಬಂದದ್ದು ನಮ್ಮ ಹಾಗೂ ಈ ಲೋಕದ ಪಾಪವನ್ನು ಪರಿಹರಿಸುವುದಕ್ಕೋಸ್ಕರ. ”ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ ಸಮಾಧಾನ” ಎಂಬ ಗಾಯನವನ್ನು ದೇವದೂತರು ಪ್ರಭು ಯೇಸು ಕ್ರಿಸ್ತ …

ಕ್ರಿಸ್‌ಮಸ್‌ ಹಬ್ಬದ ವಿಶೇಷ | ಜಗಕೆ ಬೆಳಕಾಗಿ ಅವತರಿಸಿದ ಪ್ರಭು ಯೇಸು ಕ್ರಿಸ್ತ !! Read More »

ಕಡಬ : ಕೊಂಬಾರು ಹಾಡುಹಗಲೇ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ

ಕಡಬ :ಕೊಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿರಿಬಾಗಿಲಿನಲ್ಲಿ ಹಾಡುಹಗಲೇ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಬಾಳೆಗಿಡಗಳನ್ನು ಕಿತ್ತು ತಿಂದಿದೆ. ಸಿರಿಬಾಗಿಲಿನ ಬಾರ್ಯ ಎಂಬ ಪ್ರದೇಶಕ್ಕೆ ಗರ್ಭಿಣಿ ಆನೆ ಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆನೆಯನ್ನು ಓಡಿಸುವ ಸಲುವಾಗಿ ಸಿಡಿಸಿದರೂ ತೋಟದಿಂದ ಹೋಗಿಲ್ಲ ಎಂದು ಕೃಷಿಕರು ವಿವರಿಸಿದ್ದಾರೆ. ಸಿರಿಬಾಗಿಲಿನ ಜನಾರ್ಧನ ಬಾರ್ಯ,ಬಾಲಕೃಷ್ಣ ಗೌಡ, ಐತಪ್ಪ ಗೌಡ,ದೇವರಾಜ ಗೌಡ ,ಅಣ್ಣಪ್ಪ ಗೌಡ ಎಂಬವರ ತೋಟಕ್ಕೆ ಕಾಡಾನೆ ನುಗ್ಗಿದೆ.. ಈ ಭಾಗದಲ್ಲಿ ಕೃಷಿ ತೋಟಗಳಿಗೆ ನಿರಂತರ ಆನೆ ಹಾಗೂ ಇನ್ನಿತರ ಕಾಡು ಪ್ರಾಣಿ …

ಕಡಬ : ಕೊಂಬಾರು ಹಾಡುಹಗಲೇ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ Read More »

error: Content is protected !!
Scroll to Top