Kodi Mutt Shree Prediction: ಕೋಡಿ ಮಠದ ಕರಾಳ ಭವಿಷ್ಯ: ಸಿದ್ದರಾಮಯ್ಯ ಧರ್ಮ ಬಿಟ್ಟು ಹೋದರೆ ದೈವವೇ ಉತ್ತರ ನೀಡಲಿದೆ ಎಂದ ಸ್ವಾಮೀಜಿ !

Karnataka news Kolar kodi mutt swamiji prediction news Kodisree prediction major dangerous things happen in India this year

Kodi Mutt Shree Prediction: ಈ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆಯ (Karnataka election) ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದ ಕೋಡಿಮಠದ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು (Kodi Mutt Shree Prediction) ಇದೀಗ ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ನೈಸರ್ಗಿಕ ವಿಪ್ಲವ ಆಗಲಿದೆ. ಸಿದ್ದರಾಮಯ್ಯ ಧರ್ಮ ಬಿಟ್ಟು ಹೋದರೆ ದೈವವೇ ಉತ್ತರ ನೀಡಲಿದೆ ಎಂದಿದ್ದಾರೆ.

ಇಂದು ಕೋಲಾರ (Kolar) ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಕೋಡಿಮಠ ಶ್ರೀಗಳು ಈ ವೇಳೆ ಮಾತನಾಡಿದ್ದು, ಈ ಬಾರಿ ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ. ಅಲ್ಲದೆ, ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತದೆ ಎಂದು ಹೇಳಿದ್ದು ನಿಜವಾಗಿದೆ. ಇನ್ನು ಕೂಡ ದೇಶಕ್ಕೆ ಗಂಡಾಂತರ ಮುಗಿದಿಲ್ಲ. ದೇಶಕ್ಕೆ ಒಂದು ಗಂಡಾಂತರ ಎದುರಾಗಲಿದೆ. ಮಳೆ, ಗುಡುಗು, ಮಿಂಚು ಏಕಾಏಕಿ ಅಪ್ಪಳಿಸಲಿದೆ.ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿದೆ. ಬೇರೆಡೆ ನಡೆಯುವ ಬಾಂಬ್ ದಾಳಿಗೆ ದೇಶಕ್ಕೆ ಹಾನಿಯಾಗಲಿದೆ ಎಂದು ಭವಿಷ್ಯ ನುಡಿದರು.

ಗಿಡ, ಮರಗಳು ದೈವದ ಆರಾಧ್ಯದ ಸಂಕೇತವಾಗಿದೆ. ಕೈವಾರ ತಾತಯ್ಯನವರು ಮತ್ತೆ ಹುಟ್ಟಿ ಬರುವ ಸೂಚನೆ ಸಿಕ್ಕಿದೆ ಎಂದರು. ಇನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಆದ್ಯಾತ್ಮಿಕವಾಗಿ ನಡೆಯುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಆದರೆ, ಸಿಎಂ ಸಿದ್ದರಾಮಯ್ಯನವರು ಧರ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ.

ಇತ್ತೀಚೆಗೆ ಗೋಹತ್ಯೆ ನಿಷೇಧದ ಬಗ್ಗೆ, ಗೋಹತ್ಯೆ ನಿಷೇಧ ಕಾನೂನನ್ನು ಹಿಂಪಡೆಯುವ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಅಲ್ಲದೆ,
12 ವರ್ಷ ಮೇಲ್ಪಟ್ಟ ಹಸುಗಳನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದರು. ಇದೀಗ ಸ್ವಾಮೀಜಿಗಳು ಸಿಎಂ ಅವರಿಗೆ ಎಚ್ಚರಿಕೆ ನೀಡಿದ್ದಾರೆಯೇ? ಏನಾಗಲಿದೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ? ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದು ಕಾದು ನೋಡಬೇಕಿದೆ.

 

ಇದನ್ನೂ ಓದಿ:Mysterious people: ಈ ಗ್ರಾಮದಲ್ಲಿ ಮನುಷ್ಯರಿಂದ ಹಿಡಿದು ಪ್ರಾಣಿಗಳ ತನಕ ಎಲ್ಲರೂ ಕುರುಡರು, ಅದಕ್ಕೆ ಇದೆ ಒಂದು ಪ್ರಬಲ ಕಾರಣ ! 

Leave A Reply