Pavitra Lokesh-Naresh: ಕೈತುಂಬಾ ಸಾಲ, ಮೈ ತುಂಬಾ ಕಾಯಿಲೆ ಇರೋ ನಿನ್ನ ಜತೆ ಯಾರ್ ಸಂಸಾರ ಮಾಡ್ತಾರೆ: ಪವಿತ್ರಾ ಲೋಕೇಶ್ ನಿಜ ಬಣ್ಣ ಬಯಲಾಗುತ್ತಾ?!
Pavitra Lokesh-Naresh: ಇತ್ತೀಚಿನ ಕೆಲ ದಿನಗಳಿಂದ ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ (Pavitra Lokesh-Naresh) ಅವರದ್ದೇ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಮದುವೆಯಾಗುವ ಫೋಟೋ ಹರಿಬಿಟ್ಟ ಜೋಡಿ, ಮತ್ತೆ ಲಿಪ್ ಲಾಕ್ ಮಾಡಿ ಫೋಟೋ ಹಂಚಿ ಕೊಂಡಿತ್ತು. ಇನ್ನೇನು ಮದುವೆಯೇ ಆಗಿಬಿಟ್ಟಿತೇನೋ ಎಂಬ ಮಟ್ಟಿಗೆ ಎಲ್ಲರಿಗೂ ಸುದ್ದಿ ಹಬ್ಬಿತ್ತು. ಕೊನೆಗೆ ಒಂದು ದಿನ ಇಬ್ಬರೂ ಮದುವೆ ಆಗಿದ್ದಾರೆ. ನಂತ್ರ ರಾಜಾರೋಷವಾಗಿ ಹನಿಮೂನ್ ಮುಗಿಸಿಕೊಂಡು ಬಂದಿದ್ದಾರೆ. ‘ ಹನಿಮೂನ್ ಗೆ ಈಗ ಯಾಕ್ ಹೋಗ್ಬೇಕು ? ಮೊದ್ಲೇ ಎಲ್ಲಾ ಆಗಿರಬೇಕಲ್ಲ !!ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಚಾಯಿಸಿದ್ದರು ಕೆಲವರು. ಆದ್ರೆ ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ ದುಬೈ ಫ್ಲೈಟ್ ಹತ್ತಿ ಜೋಡಿ ಹನಿಮೂನಿನ ಸವಿಯುಂಡು ಬಂದಿತ್ತು.
ಇಂತಿಪ್ಪ ತೆ ಮೋಸ್ಟ್ ಯಂಗ್ ಆಂಡ್ ಪರ್ಫೆಕ್ಟ್ ಜೋಡಿ ಇದೀಗ, ಸಿನಿಮಾ ಒಂದರ ತಯಾರಿಯಲ್ಲಿ ಮುಳುಗಿದ್ದು, ತಮ್ಮ ನೈಜ ಜೀವನದ ಕಥೆಯನ್ನೇ ಜನರ ಮುಂದಿಡಲು ರೆಡಿಯಾಗಿದ್ದಾರೆ. ಸಿನಿಮಾದ ಟೈಟಲ್ ಕೂಡಾ ತುಂಬಾ ಮಜವಾಗಿದೆ. ‘ ಮಳ್ಳಿ ಪೆಳ್ಳಿ ‘ ಅನ್ನೋದು ಅದರ ಟೈಟಲ್. ಅಂದರೆ, ‘ ಮತ್ತೆ ಮದುವೆ ‘ ಎಂದರ್ಥ. ಈ ಕಥೆಗೆ ಇದಕ್ಕಿಂತ ಒಳ್ಳೆಯ ಟೈಟಲ್ ಯಾರು ತಾನೆ ಕೊಟ್ಟಾರು ?
ಎಂ.ಎಸ್.ರಾಜು ಡೈರೆಕ್ಷನ್ ಅಡಿಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಭಿನಯಿಸುತ್ತಿದ್ದು, ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. ಟೀಸರ್ ನೋಡಿದವರಿಗೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ‘ ಮತ್ತೆ ಮದುವೆ ‘ ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಅದರಲ್ಲಿಯೂ ನರೇಶ್ ಈ ಸಿನೆಮಾದ ಮೂಲಕ ತಮ್ಮ ಹೆಂಡತಿ ರಮ್ಯಾ ಅವರಿಗೆ ಟಾಂಗ್ ನೀಡುತ್ತಿದ್ದಾರಾ ಎಂಬ ಅನುಮಾನ ಕೂಡ ಮೂಡದಿರದು. ಯಾಕೆಂದರೆ ಈ ಸಿನಿಮಾದಲ್ಲಿ ಇದೆ ಅಂತದೊಂದು ವಿಶಿಷ್ಟ ಡೈಲಾಗ್ !
” ಕೈ ತುಂಬಾ ಸಾಲ, ಮೈ ತುಂಬಾ ಕಾಯಿಲೆ ಇರೋ ನಿನ್ನ ಜತೆ ಯಾರ್ ಸಂಸಾರ ಮಾಡ್ತಾರೆ” ಇದು ‘ಮತ್ತೆ ಮದುವೆ’ ಚಿತ್ರದಲ್ಲಿ ನರೇಶ್ ತಮ್ಮ ಹಳೆಯ ಹೆಂಡತಿಗೆ ಹೇಳುವ ಮಾತು. ಇದು ಬೆನ್ನು ಬಿದ್ದ ತಮ್ಮ ಹೆಂಡತಿ ರಮ್ಯಾಳನ್ನು ಅವಮಾನಿಸಲೆಂದೇ ನರೇಶ್ ಮತ್ತು ಟೀಮು ನೇಯ್ದ ಡೈಲಾಗು ಅಂತಿದೆ ವರದಿಗಳು.
ಈ ಟೀಸರ್ ನಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಡುವೆ ನಡೆದಿರುವ ಅನೇಕ ಘಟನೆಗಳ ದೃಶ್ಯಗಳು ಈ ಸಿನಿಮಾದಲ್ಲಿದೆ ಎನ್ನಲಾಗಿದ್ದು, ಅವರ ಜೀವನದಲ್ಲಿ ನಡೆದ ಘಟನೆಗಳ ದೃಶ್ಯಗಳು ಟೀಸರ್ನಲ್ಲಿ ನೀವೆಲ್ಲ ನೋಡಿರಬಹುದು. ಏನೇ ಆದರೂ ಸರಿ ನಾನು ಡಿವೋರ್ಸ್ ಕೊಡುವುದಿಲ್ಲ ಎಂದು ನರೇಶ್ ಪತ್ನಿ ರಮ್ಯಾ ಅವರು ಹಟಕ್ಕೆ ಬಿದ್ದಿದ್ದಾರೆ. ಅಂತಹ ಹಟ ಮಾಡುತ್ತಿರುವ ಪತ್ನಿಯ ವಿರುದ್ದ ಸಮರ ಸಾರುವಂತೆ ನರೇಶ್ ಸಿನಿಮಾ ಮೂಲಕ ಹೆಂಡತಿಗೆ ಟಾಂಗ್ ನೀಡುತ್ತಿದ್ದಾರೆ ಅನ್ನೋ ಗುಸು ಗುಸು ಕೇಳಿಬರುತ್ತಿದೆ.
ಈ ನಡುವೆ ಪವಿತ್ರಾ ಲೋಕೇಶ್ ಮತ್ತು ನರೇಶ್ ಮೈಸೂರು ಲಾಡ್ಜ್ ನಲ್ಲಿ (Mysore Lodge) ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ದೃಶ್ಯ ಕೂಡ ಸಿನಿಮಾದಲ್ಲಿದೆ. ಈ ಕುರಿತು ನರೇಶ್ ಪತ್ನಿ ಮೀಡಿಯಾದ ಮುಂದೆ ತನ್ನ ಗೋಳು ಹೇಳಿಕೊಂಡಿದ್ದು ಕೂಡ ಇದೆ. ಟೀಸರ್ನಲ್ಲಿ ಪತ್ನಿ ರಮ್ಯಾ ಬಗ್ಗೆ ನರೇಶ್ ಮಾತಾಡಿದ್ದು, ” ಕೈ ತುಂಬಾ ಸಾಲ, ಮೈ ತುಂಬಾ ಕಾಯಿಲೆ ಇರೋ ನಿನ್ನ ಜತೆ ಯಾರ್ ಸಂಸಾರ ಮಾಡ್ತಾರೆ” ಎನ್ನುವ ಡೈಲಾಗ್ ಹೇಳಿದ್ದಾರೆ. ಇದನ್ನು ನೋಡಿದ್ರೆ ನರೇಶ್ ಸಿನಿಮಾ ಮೂಲಕ ಪತ್ನಿ ರಮ್ಯಾ ಅವರ ವಿರುದ್ಧ ಸಿನಿಮಾ ಮೂಲಕ ಏನೋ ಹೇಳಲು ಹೊರಟಿರುವ ಹಾಗಿದೆ. ಒಟ್ಟಿನಲ್ಲಿ ಇವರ ಲೈಫ್ ಸ್ಟೋರಿ( Life Story)ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ದುಪ್ಪಟ್ಟಾಗಿದ್ದು, ಯಾವಾಗ ಸಿನಿಮಾ ರಿಲೀಸ್ ಆಗುತ್ತೆ ಎಂದು ಗಾಸಿಪ್ ಪ್ರಿಯ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ: ಅಮ್ಮನ ಸವತಿ, ನಟಿ ಸರ್ವಮಂಗಳಾ ಹಾದಿಯಲ್ಲೇ ಅ’ಪವಿತ್ರ’ ನಡಿಗೆ, ಯಾಕೆ ಹೀಗಾದ್ಳು ಪವಿತ್ರಾ ಲೋಕೇಶ್ ?