Rakhi Sawant: ಕೊಲೆ ಬೆದರಿಕೆ ಬಂದಿದೆ ಎಂದು ಹೆಲ್ಮೆಟ್ ಧರಿಸಿ ಓಡಾಡ್ತಿರೋ ಹುಂಬ ಹುಡುಗಿ ರಾಖಿ ಸಾವಂತ್​! ಸಾಕು ನಾಟಕ ನಿಲ್ಸಮ್ಮ ಎಂದ ಫ್ಯಾನ್ಸ್!

Rakhi Sawant :ಸದಾ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಾಗೋ ನಟಿ, ಹುಂಬ ಹುಡುಗಿ ರಾಖಿ ಸಾವಂತ್ ಒಂದಷ್ಟು ದಿನ ತನ್ನ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದು ನಂತರ ಸೈಲೆಂಟ್ ಆಗಿದ್ದಳು. ಆದರೀಗ ಈಕೆ ಮತ್ತೆ ವೈಲೆಂಟ್ ಆದಂತೆ ಕಾಣುತ್ತಿದೆ. ಯಾಕೆಂದರೆ ನಟಿ ರಾಖಿ ಸಾವಂತ್ ಮುಂಬೈ ಬೀದಿಯಲ್ಲಿ ಹೆಲ್ಮೆಟ್ (Helmet) ಧರಿಸಿ ಓಡಾಡುತ್ತಿದ್ದಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ರಾಖಿ ಹೆಲ್ಮೆಟ್ ಹಾಕಿಕೊಳ್ಳುತ್ತಾರೆ. ಕಾರಣ ಅವರಿಗೆ ಕೊಲೆ ಬೆದರಿಕೆ ಇದೆಯಂತೆ!

ಹೌದು, ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan)​ ಅವರಿಗೆ ಕೊಲೆ ಬೆದರಿಕೆ ಬಂದಿದ್ದು ಅವರನ್ನು ಹತ್ಯೆ ಮಾಡುವುದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಬೆದರಿಕೆ ಹಾಕಿದ್ದಾರೆ. ಇದರ ಬೆನ್ನಲೇ ನಟ ಸಲ್ಮಾನ್ ಖಾನ್ ಪರವಾಗಿ ನಿಂತಿರುವ ಮತ್ತು ಸಲ್ಮಾನ್ ಕುರಿತಾಗಿ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡುವ ರಾಖಿ ಸಾವಂತ್ (Rakhi Sawant)ಗೂ ಲಾರೆನ್ಸ್ ಬಿಷ್ಣೋಯ್ ಟೀಮ್ ನಿಂದ ಬೆದರಿಕೆ ಕರೆ ಬಂದಿದೆಯಂತೆ. ‘ಸಲ್ಮಾನ್ ಖಾನ್ ಪ್ರಕರಣದಿಂದ ದೂರ ಇರು’ ಎಂದು ಇ-ಮೇಲ್ ಮೂಲಕ ನನಗೆ ಬೆದರಿಸಿದ್ದಾರೆ ಎಂದು ಆರೋಪ ಮಾಡಿರುವ ರಾಖಿ ಸಾವಂತ್ ತನ್ನ ಗುರುತು ಸಿಗಬಾರದೆಂದು ಹೆಲ್ಮೆಟ್ ಹಾಕಿಕೊಂಡು ತಿರುಗಾಡುತ್ತಿದ್ದಾಳೆ. ಅವರ ನಾಟಕ ನೋಡಿ ಅನೇಕರಿಗೆ ಸಿಟ್ಟು ಬಂದಿದೆ.

ಈ ಹಿಂದೆ ಇದೇ ಗ್ಯಾಂಗ್ ನಿರಂತರವಾಗಿ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಾಕುತ್ತಲೇ ಇದೆ. ಅಂದಹಾಗೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುತ್ತೇವೆ ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಹೇಳೋಕೆ ಒಂದು ಕಾರಣ ಇದೆ. ಬಿಷ್ಣೋಯ್ ಸಮುದಾದಯವರು ಪೂಜಿಸುವ ಕೃಷ್ಣಮೃಗವನ್ನು ಸಲ್ಮಾನ್​ ಹತ್ಯೆ ಮಾಡಿದರು ಎನ್ನುವ ಸಿಟ್ಟು ಅವರಿಗೆ ಇದೆ. ಆದರೆ, ಈ ಪ್ರಕರಣಕ್ಕೂ ರಾಖಿ ಸಾವಂತ್​ಗೂ ಯಾವುದೇ ಸಂಬಂಧ ಇಲ್ಲ. ಹೀಗಿದ್ದರೂ ತಮಗೆ ಬೆದರಿಕೆ ಬರುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ರಾಖಿ ಸಾವಂತ್ ಹೇಳುವ ಪ್ರಕಾರ ಸಲ್ಮಾನ್ ಖಾನ್ ಜೊತೆ ಅವರಿಗೆ ಒಳ್ಳೆಯ ಒಡನಾಟ ಇದೆಯಂತೆ. ಅವರ ಪರವಾಗಿ ಮಾತನಾಡಿದ್ದಕ್ಕೆ ತಮಗೆ ಬೆದರಿಕೆ ಬಂದಿದೆ ಅನ್ನೋದು ರಾಖಿ ಹೇಳಿಕೆ. ಇಂದು (ಏಪ್ರಿಲ್ 21) ರಾಖಿ ಹೆಲ್ಮೆಟ್ ಧರಿಸಿ ಬಂದಿದ್ದಾರೆ. ತಮ್ಮ ರಕ್ಷೆಗೆ ಇದನ್ನು ಧರಿಸಿರುವುದಾಗಿ ಅವರು ಹೇಳಿದ್ದಾರೆ.

ಇನ್ನು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.

ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ (Mumbai) ಪೊಲೀಸರು (Police) ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಅಲ್ಲದೇ, ಸುಖಾಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.

ಇನ್ನು ‘ನಾನು ನನ್ನ ಮುಖವನ್ನು ಮುಚ್ಚಿಟ್ಟುಕೊಳ್ಳಬೇಕು. ಅದಕ್ಕೆ ಹ್ಯಾಮ್ಲೆಟ್ (ಹೆಲ್ಮೆಟ್) ಧರಿಸಿ ಬಂದಿದ್ದೀನಿ’ ಎಂದು ಹುಚ್ಚುಹುಚ್ಚಾಗಿ ಆಡಿದ್ದಾರೆ. ಅವರ ನಾಟಕ ನೋಡಿದ ಅನೇಕರು ಸಿಟ್ಟಿನಿಂದ ಕಮೆಂಟ್ ಹಾಕಿದ್ದಾರೆ. ‘ನಾಟಕ ನಿಲ್ಲಿಸು ತಾಯಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಅದು ಹ್ಯಾಮ್ಲೆಟ್ ಅಲ್ಲ ಹೆಲ್ಮೆಟ್’ ಎಂದು ರಾಖಿಯನ್ನು ತಿದ್ದಿದ್ದಾರೆ.

Beautiful wifes of cricketers : ಅಪ್ಸರೆಯಂತೆ ಕಾಣೋ ಕ್ರಿಕೆಟಿಗರ ಹೆಂಡತಿಯರು! ಬ್ಯೂಟಿಯಲ್ಲಿ ಫಿಲಂ ಹೀರೋಯಿನ್ ಗಳಿಗೇ ಪೈಪೋಟಿ ಕೊಡ್ತಾರೆ ಇವ್ರು!

 

 

Leave A Reply

Your email address will not be published.