Sudarshan

ಉಜಿರೆಯಲ್ಲಿ ನ್ಯೂಟ್ರಲ್ ನಲ್ಲಿ ನಿಲ್ಲಿಸಿದ್ದ ಓಮ್ನಿ ನುಗ್ಗಿ ಎಬ್ಬಿಸಿತ್ತು ದಾಂಧಲೆ : ಸ್ವಲ್ಪದರಲ್ಲಿ ತಪ್ಪಿದ ಪ್ರಾಣಾಪಾಯ

ವ್ಯಕ್ತಿಯೊಬ್ಬರು ತರಕಾರಿ ಅಂಗಡಿಯೆದುರು ನಿಲ್ಲಿಸಿದ್ದ ಓಮ್ನಿ ಕಾರೊಂದು ಏಕಾಏಕಿ ಮುಂದಕ್ಕೆ ಚಲಿಸಿ ಅಂಗಡಿಗೆ ನುಗ್ಗಿದ ಘಟನೆ ಉಜಿರೆಯಲ್ಲಿ ನಡೆದಿದೆ. ಉಜಿರೆಯ ಕಾಲೇಜು ರಸ್ತೆಯಲ್ಲಿ ಇರುವ ತರಕಾರಿ ಅಂಗಡಿ ಎದುರು ವ್ಯಕ್ತಿಯೊಬ್ಬರು ತನ್ನ ಓಮ್ನಿ ಕಾರನ್ನು ನಿಲ್ಲಿಸಿ ಬೇರೆಡೆಗೆ ತೆರಳಿದ್ದರು.ಕಾರು ನಿಲ್ಲಿಸಿದ್ದ ಜಾಗ ಸ್ವಲ್ಪ ಎತ್ತರ ಪ್ರದೇಶವಾಗಿದ್ದರಿಂದ ಹಠಾತ್ತನೇ ಕಾರು ಮುಂದಕ್ಕೆ ಚಲಿಸಿ ಅಂಗಡಿಗೆ ನುಗ್ಗಿದೆ. ಆರ್ ಅಡಿಗಳ ಕೆಳಗೆ ಬರುವ ಮೆಟ್ಟಲುಗಳನ್ನು ದಾಟಿ ಒಮ್ಮೆಲೆ ಬಂದು ತರಕಾರಿ ಅಂಗಡಿಗೆ ನುಗ್ಗಿದೆ. ಅಲ್ಲಿ ತರಕಾರಿ ಆಯ್ದುಕೊಳ್ಳುತ್ತಿರುವ ಮಹಿಳೆಯರಿಬ್ಬರು ಎಚ್ಚೆತ್ತುಕೊಂಡು …

ಉಜಿರೆಯಲ್ಲಿ ನ್ಯೂಟ್ರಲ್ ನಲ್ಲಿ ನಿಲ್ಲಿಸಿದ್ದ ಓಮ್ನಿ ನುಗ್ಗಿ ಎಬ್ಬಿಸಿತ್ತು ದಾಂಧಲೆ : ಸ್ವಲ್ಪದರಲ್ಲಿ ತಪ್ಪಿದ ಪ್ರಾಣಾಪಾಯ Read More »

ಕೋಮುಪ್ರಚೋದನೆಯ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹಾಕಿದಾತನ ವಿರುದ್ಧ ಸವಣೂರು ಹಿಂ.ಜಾ.ವೇ.ದೂರು

ಗೋಹತ್ಯೆಯ ನೆಪದಲ್ಲಿ ಯಾರಾದರೂ ಗೂಂಡಾಗಳು ನಿಮ್ಮ ಮೇಲೆ ದಾಳಿ ಮಾಡಲು ಬಂದರೆ ಆತ್ಮರಕ್ಷಣೆಗಾಗಿ ಅವರ ಮೇಲೆ ದಾಳಿ ಮಾಡಬಹುದು ಎಂದು ಕೋಮು ಪ್ರಚೋದನೆಯ ಬರಹವನ್ನು ವಾಟ್ಸಾಪ್ ಹಾಗೂ ಫೇಸ್‌ಬುಕ್‌ ನಲ್ಲಿ ಹಾಕಿದ ವ್ಯಕ್ತಿಯೊಬ್ಬನ ವಿರುದ್ಧ ಸವಣೂರು ಹಿಂದೂ ಜಾಗರಣ ವೇದಿಕೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದೆ. ಕಡಬ ತಾಲೂಕಿನ ಸವಣೂರು ಯಾವುದೇ ಕೋಮು ಪ್ರಚೋದನೆಯಿಲ್ಲದೆ ಜನ ನೆಮ್ಮದಿಯಿಂದ ಜೀವ ನಡೆಸುತ್ತಿರುವ ಗ್ರಾಮೀಣ ಪ್ರದೇಶವಾಗಿದ್ದು, ಇದೀಗ ಸವಣೂರಿನ ಆರಿಗಮಜಲಿನ ನಿಝಾರ್ ಎಂಬಾತ ಗೋಹತ್ಯೆಯ ನೆಪದಲ್ಲಿ ಯಾರಾದರೂ ಗೂಂಡಾಗಳು …

ಕೋಮುಪ್ರಚೋದನೆಯ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹಾಕಿದಾತನ ವಿರುದ್ಧ ಸವಣೂರು ಹಿಂ.ಜಾ.ವೇ.ದೂರು Read More »

ಚಿಕ್ಕಮಗಳೂರು | ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದು ಕಾರು ಚಾಲಕ ಸಜೀವ ದಹನ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ವಸ್ತಾರೆ ಎಂಬಲ್ಲಿ ಕಾರೊಂದು ಹೊತ್ತಿ ಉರಿದಿದ್ದು, ಕಾರು ಚಾಲಕ ಕಾರಿನೊಳಗೇ ಸಜೀವ ದಹನವಾಗಿರುವ ಘಟನೆ ಇಂದು ರಾತ್ರಿ ನಡೆದಿದೆ. ಮೃತ ವ್ಯಕ್ತಿ ಕಾರು ಚಾಲಕ ಅರೆನೂರು ಗ್ರಾಮದ ವಾಸಿ ರಘು ಎಂದು ಗುರುತಿಸಲಾಗಿದ್ದು,ಆತ ತನ್ನ ಕಾರಿನಲ್ಲಿ ಚಿಕ್ಕಮಗಳೂರಿಗೆ ಹೋಗಿ ಆಲ್ದೂರಿಗೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಾಗ, ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಸಾಧ್ಯವಾಗದೇ ಆತ ಕಾರಿನೊಳಗೆ ಅಸಹಾಯಕನಾಗಿ ಉಳಿದು ಕಾರಿನ ಜೊತೆಗೆ ಆತನು …

ಚಿಕ್ಕಮಗಳೂರು | ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದು ಕಾರು ಚಾಲಕ ಸಜೀವ ದಹನ Read More »

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ

ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 98 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾಕಿಸ್ತಾನದ ಪೇಶಾವರದಲ್ಲಿ ಡಿಸೆಂಬರ್‌ 11, 1922 ರಲ್ಲಿ ಜನಿಸಿದ್ದ ಮಹಮ್ಮದ್‌ ಯೂಸೂಫ್‌ ಖಾನ್‌ ವಿಭಜನೆ ವೇಳೆ ಭಾರತಕ್ಕೆ ಬಂದಿದ್ದು ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡ ಬಳಿಕ ದಿಲೀಪ್‌ ಕುಮಾರ್‌ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದರು. ಪತ್ನಿ ಸಾಯಿರಾಬಾನು ಜೊತೆ ಮುಂಬೈನಲ್ಲಿ ನೆಲೆಸಿದ್ದ ದಿಲೀಪ್‌ ಕುಮಾರ್‌ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. …

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ Read More »

ಸಾಂಪ್ರದಾಯಿಕ ಶೈಲಿಯಲ್ಲಿ ಗದ್ದೆಗಿಳಿದ ಶಾಸಕ ಸಂಜೀವ ಮಠಂದೂರು | ನೇಗಿಲು ಹಿಡಿದು ಉಳುಮೆ ಮಾಡಿ ಗಮನ ಸೆಳೆದ ಶಾಸಕರು

ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಉಳುಮೆ ಮಾಡಿ ಗಮನ ಸೆಳೆದಿದ್ದಾರೆ. ಪಂಚೆ ಕಟ್ಟಿಕೊಂಡು ಪರಾಂಪರಾಗತವಾಗಿ ನಡೆಯುತ್ತಿದ್ದ ಭತ್ತದ ಗದ್ದೆಯಲ್ಲಿ ನೇಗಿಲು ಹಿಡಿದು ಉಳುಮೆಮಾಡಿದ್ದಾರೆ. ಇಂತಹ ಸನ್ನಿವೇಶಕ್ಕೆ ಆರ್ಯಾಪು ಗ್ರಾಮದ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನ ಹಾಗೂ ಸಂಪ್ಯ ನವಚೇತನಾ ಯುವಕ ಮಂಡಲದ ಸಹಭಾಗಿತ್ವದಲ್ಲಿ ದಿ. ಉಗ್ಗಪ್ಪ ಗೌಡ ಅವರ ಹಡೀಲು ಬಿದ್ದ ಗದ್ದೆಯಲ್ಲಿ ‘ಗದ್ದೆಗೆ ಇಳಿಯೋಣ-ಬೇಸಾಯ ಮಾಡೋಣ’ ಅಭಿಯಾನ ಸಾಕ್ಷಿಯಾಯಿತು. ಸ್ವತಃ ಗುಡ್ಡ ಅಗೆದು ತನ್ನೂರಿನಲ್ಲಿ ಗದ್ದೆ ನಿರ್ಮಿಸಿ ಇತ್ತು ಕಟ್ಟಿ ಬೇಸಾಯ ಮಾಡಿದ ಅನುಭವವಿರುವ ಶಾಸಕ …

ಸಾಂಪ್ರದಾಯಿಕ ಶೈಲಿಯಲ್ಲಿ ಗದ್ದೆಗಿಳಿದ ಶಾಸಕ ಸಂಜೀವ ಮಠಂದೂರು | ನೇಗಿಲು ಹಿಡಿದು ಉಳುಮೆ ಮಾಡಿ ಗಮನ ಸೆಳೆದ ಶಾಸಕರು Read More »

ಆಕೆ ದೇಶಕ್ಕೆ ಗೆದ್ದು ತಂದದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 28 ಚಿನ್ನದ ಪದಕ..ಆದರೀಗ ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ

ಡೆಹ್ರಾಡೂನ್: ಒಮ್ಮೆ ಜೋರಾಗಿ ಹೇಳಿಬಿಡಿ. ಮೇರಾ ದೇಶ ಮಹಾನ್ ಎಂದು. ಸುತ್ತಮುತ್ತಲು ಇರುವವರಿಗೆ ಕೇಳಿಸುವಷ್ಟು ಜೋರಾಗಿ. ಆಗಲಾದರೂ ನಮ್ಮ ವ್ಯವಸ್ಥೆಗೆ ಕೇಳಿಸುತ್ತಾ ನೋಡೋಣ. ಇದು ಮಹಾನ್ ಎಂದು ನಾವು ಸುಮ್ಮ ಸುಮ್ಮನೇ ನಮ್ಮನ್ನು ನಾವು ಹೊಗಳಿಕೊಳ್ಳುವ ದೇಶದ ಕಥೆ. ಅಲ್ಲಿ ಪರ 28 ಬಾರಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ದೇಶದ ಮೊದಲ ಪ್ಯಾರಾಶೂಟರ್ ದಿಲ್ರಾಜ್ ಕೌರ್ ಇದೀಗ ತನ್ನ ಜೀವನ ನಿರ್ವಹಣೆಗಾಗಿ ಉತ್ತರಾಖಂಡದ ಡೆಹ್ರಾಡೂನ್, ಗಾಂಧಿ ಪಾರ್ಕ್ ಬಳಿ ಬಿಸ್ಕತ್ ಮತ್ತು ಚಿಪ್ಸ್ ಮಾರಾಟ …

ಆಕೆ ದೇಶಕ್ಕೆ ಗೆದ್ದು ತಂದದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 28 ಚಿನ್ನದ ಪದಕ..ಆದರೀಗ ರಸ್ತೆ ಬದಿಯಲ್ಲಿ ಚಿಪ್ಸ್ ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ Read More »

ಹೊಸದಾಗಿ ಬಂದಿದೆ ಮನೆ ಬಾಡಿಗೆ ನೀತಿ | ಟೆನೆನ್ಸಿ ಕಾನೂನಿನ ಪ್ರಮುಖ ಅಂಶಗಳು ಹೀಗಿವೆ

ಜೂನ್ 2, 2021 ರಂದು ಹೊಸ ಮಾಡೆಲ್ ಟೆನೆನ್ಸಿ ಆಕ್ಟ್ ಸಂಸತ್ತಿನಲ್ಲಿ ಅನುಮೋದನೆ ಪಡೆದಿದೆ ಮತ್ತು ಶೀಘ್ರದಲ್ಲಿ ಜಾರಿಗೆ ಬರಲಿದೆ. ಅಂದರೆ ಹೊಸದಾಗಿ ಬಾಡಿಗೆ ಕಾನೂನನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ. ಮತ್ತು ಅದಕ್ಕೆ ಬೇಕಾದ ಒಪ್ಪಿಗೆಯನ್ನ ಕೂಡ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಪಡೆದುಕೊಂಡಿದೆ. ಹೊಸ ಟೆನೆನ್ಸಿ ಆಕ್ಟ್ ನಲ್ಲಿ ಏನಿದೆ? 2011 ರ ಜನಗಣತಿಯಲ್ಲಿ ಒಂದು ಕೋಟಿ ಹತ್ತು ಲಕ್ಷ ಮನೆಗಳು ಖಾಲಿ ಅಥವಾ ಬೀಗ ಹಾಕಲ್ಪಟ್ಟಿವೆ ಎನ್ನುವುದನ್ನ ಕೇಂದ್ರ ಸರಕಾರ ಗಮನಿಸಿದೆ. ಅಲ್ಲದೆ 2021ರಲ್ಲಿ ಈ …

ಹೊಸದಾಗಿ ಬಂದಿದೆ ಮನೆ ಬಾಡಿಗೆ ನೀತಿ | ಟೆನೆನ್ಸಿ ಕಾನೂನಿನ ಪ್ರಮುಖ ಅಂಶಗಳು ಹೀಗಿವೆ Read More »

ಸರ್ವೆ ಕಲ್ಪನೆ ಶಾಲಾ ಮೈದಾನದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಕ್ರಿಕೆಟ್ | 8 ಬೈಕ್ ಸೀಜ್ ಮಾಡಿದ ಸಂಪ್ಯ ಪೊಲೀಸರು

ಪುತ್ತೂರು : ಕೋವಿಡ್ ಸರಪಳಿಯನ್ನು ತುಂಡರಿಸುವ ಸಲುವಾಗಿ ಸರಕಾರ ಹಾಗೂ ಜಿಲ್ಲಾಡಳಿತದ ವಿಧಿಸಿದ್ದ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಮುಂಡೂರು ಗ್ರಾ.ಪಂ.ವ್ಯಾಪ್ತಿಯ ಸರ್ವೆ ಕಲ್ಪನೆ ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಸಂಪ್ಯ ಪೊಲೀಸರು ದಾಳಿ ನಡೆಸಿ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಕ್ರಿಕೆಟ್ ಆಟವಾಡುವ ಸಂದರ್ಭದಲ್ಲಿ ದಾಳಿ ನಡೆಸಿದ ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ 8 ಬೈಕ್ ಗಳನ್ನು ಸೀಜ್ ಮಾಡಿದ್ದಾರೆ ಎನ್ನಲಾಗಿದೆ.

ಸೋರುತ್ತಿದ್ದ ಮನೆಯ ಹಂಚು ಸರಿಪಡಿಸುವ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ವ್ಯಕ್ತಿ ಸಾವು

ಮಂಗಳೂರು, ಜೂನ್ 15: ಸೋರುತ್ತಿದ್ದ ಮನೆಯ ಹಂಚು ಸರಿಪಡಿಸುವ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮುಲ್ಕಿಯಲ್ಲಿ ನಡೆದಿದೆ. ಮೂಲ್ಕಿಯ ಐಕಳ ಬಳಿಯ ಉಳೆಪಾಡಿ ಪುರಂಜ ಗುಡ್ಡೆ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯನ್ನು ಮಾಧವ ಆಚಾರ್ಯ (55) ಎಂದು ಗುರುತಿಸಲಾಗಿದೆ. ಗಾಳಿ-ಮಳೆಯ ಪರಿಣಾಮ ಹಾನಿಗೀಡಾಗಿದ್ದ ಮನೆಯ ಹಂಚನ್ನು ಸರಿಪಡಿಸಲು ಜನಾರ್ಧನ ಆಚಾರ್ಯ ಅಲ್ಯುಮಿನಿಯಂ ಏಣಿ ಇಟ್ಟು ಮೇಲೇರುತ್ತಿದ್ದರು.ಆಗ ಸಂದರ್ಭ ಆಯತಪ್ಪಿ ಏಣಿ ಜಾರಿ ವಿದ್ಯುತ್ ತಂತಿಗೆ ಬೀಳುವಂತಾಗಿದೆ. ಆಗ ಮಾಧವ …

ಸೋರುತ್ತಿದ್ದ ಮನೆಯ ಹಂಚು ಸರಿಪಡಿಸುವ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ವ್ಯಕ್ತಿ ಸಾವು Read More »

ಕೋವಿಡ್ ವಾರಿಯರ್ಸ್‌ಗಳಿಗೆ ಕೃತಜ್ಞತೆ-ಪ್ರಶಾಂತ್ ರೈ ಮರುವಂಜ

ಸುಳ್ಯ : ಕೋವಿಡ್ ನಿಯಂತ್ರಣ ಸಲುವಾಗಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್‌ಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಭ್ರಷ್ಟಾಚಾರ ನಿಗ್ರಹ ಅಪರಾಧ ತಡೆ ವಿಭಾಗದ ರಾಜ್ಯಾಧ್ಯಕ್ಷ ಪ್ರಶಾಂತ್ ರೈ ಮರುವಂಜ ಹೇಳಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಐಎಎಸ್,ಐಪಿಎಸ್ ಹಾಗೂ ಪೊಲೀಸ ಇಲಾಖೆಯ ಅಧಿಕಾರಿಗಳ ಶ್ರಮ,ಆರೋಗ್ಯ ಇಲಾಖೆಯ ಅಧಿಕಾರಿಗಳ,ಸಿಬಂದಿಗಳು ತಮ್ಮ ಆರೋಗ್ಯ ಹಾಗೂ ಪ್ರಾಣ ಕಳೆದುಕೊಂಡಿದ್ದಾರೆ. ಯಾವ ಸರಕಾರ ಇದೆ ಎಂಬುದು ಮುಖ್ಯವಲ್ಲ. ಟೀಕೆ ಮಾಡುವುದೂ ಸರಿಯಲ್ಲ,ಎಲ್ಲರ ಆರೋಗ್ಯ ರಕ್ಷಣೆಗಾಗಿ ಎಚ್ಚರ ವಹಿಸುವುದು ಅಗತ್ಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top