Pavitra Lokesh: ಅಮ್ಮನ ಸವತಿ, ನಟಿ ಸರ್ವಮಂಗಳಾ ಹಾದಿಯಲ್ಲೇ ಅ’ಪವಿತ್ರ’ ನಡಿಗೆ, ಯಾಕೆ ಹೀಗಾದ್ಳು ಪವಿತ್ರಾ ಲೋಕೇಶ್ ?

Actress pavitra lokesh contraversy: ಪವಿತ್ರಾ ಹುಟ್ಟಿದ್ದು ಮೈಸೂರಿನಲ್ಲಿ.(Pavitra lokesh) ಆಕೆಯ ತಂದೆ ಮೈಸೂರ್ ಲೋಕೇಶ್(Mysore Lokesh) ಕನ್ನಡದ ಖ್ಯಾತ ಕಾಮಿಡಿ ನಟ. ಅಲ್ಲದೆ ಖಳನಟ ಪಾತ್ರವನ್ನೂ ಆತ ಮಾಡುತ್ತಿದ್ದರು. ಒಟ್ಟಾರೆ ವರ್ಸಾಟೈಲ್ ಅನ್ನುವಂತಹ ನಟ ಮೈಸೂರ್ ಲೋಕೇಶ್. ಆತ ಸುಮಾರು 169 ಕ್ಕೂ ಅಧಿಕ ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯಿಸಿದ ನಟ. ಅಲ್ಲದೆ, ಆ ಕಾಲದ ಎಲ್ಲ ದಿಗ್ಗಜ ನಂತರ ಮುಂದೆ ನಟಿಸಿ ಸೈ ಅನ್ನಿಸಿಕೊಂಡ ಹಾಸ್ಯ ನಟ. ಹಳೆಯ ಕನ್ನಡ ಚಿತ್ರ ನೋಡುವ ಅಭ್ಯಾಸ ಇರುವವರಿಗೆ ಮೈಸೂರ್ ಲೋಕೇಶ್ ಚಿರಪರಿಚಿತ. ಆಕೆಯ ತಾಯಿ ಶಿಕ್ಷಕಿರಾಗಿದ್ದರು. ಪವಿತ್ರಾಗೆ ಆದಿ ಲೋಕೇಶ್ ಎಂಬ ಕಿರಿಯ ಸಹೋದರನಿದ್ದಾನೆ. ಆತ ಕೂಡಾ ಕನ್ನಡದ ಖಳ ನಟರಲ್ಲಿ ಒಬ್ಬ. ಕನ್ನಡದಲ್ಲಿ ಸುಮಾರು 150 ಮತ್ತು ತೆಲುಗಿನಲ್ಲಿ ಹೆಚ್ಚುಕಮ್ಮಿ ಅಷ್ಟೇ ಪ್ರಮಾಣದ ಚಿತ್ರಗಳಲ್ಲಿ ನಟಿಸಿದ ಬಹುಭಾಷಾ ಬಲ್ಲ, ಬಹುಭಾಷಾ ಕಲಾವಿದೆ ಪವಿತ್ರಾ.(Actress pavitra lokesh contraversy) 

ಮೈಸೂರ್ ಲೋಕೇಶ್ ನಟರಾಗಿದ್ದುಕೊಂಡು ಕುಟುಂಬ, ಮಡದಿ ಮಕ್ಕಳು ಎಲ್ಲವೂ ಇದ್ದಾಗ ಇನ್ನೊಬ್ಬರ ಹೆಂಡತಿಗೆ ಕಣ್ಣು ಹಾಕಲು ಹೋಗಿದ್ದರು. ಆಕೆ ಸರ್ವಮಂಗಳಾ. ಆಕೆ ಕನ್ನಡದ ಬಹಳ ಫೇಮಸ್ ಡಬ್ಬಿಂಗ್ ಕಲಾವಿದೆ. ಡಬ್ಬಿಂಗ್ ಕೆಲವಿದೆಯಾಗಿ ನಂತರ ಕಾಮಿಡಿ ಕಲಾವಿದೆ ಕೂಡಾ ಆಗಿ ಆಕೆ ತನ್ನ ಪ್ರತಿಭೆಯನ್ನು ತೋರ್ಪಡಿಸಿದ್ದಳು. ಪ್ರತಿಭೆಯ ಜತೆ ಯವ್ವನ, ಯವ್ವನದ ಜತೆ ಬಿಂದಾಸ್ ಜೀವನ ಶೈಲಿ ರೂಪಿತಗೊಂಡು ಆಕೆ ಮದುವೆಯ ನಂತರ ಮೈಸೂರ್ ಲೋಕೇಶ್ ಗೆ ಹತ್ತಿರವಾಗಿದ್ದಳು. ಇಬ್ಬರೂ ಬಹಳವಾಗಿ ಪ್ರೀತ್ರಿ ಪ್ರೇಮದಲ್ಲಿ ಮುಳುಗಿ ಬಿದ್ದು ಎದ್ದಿದ್ದರು. ಅದಾಗಲೇ ಸರ್ವಮಂಗಳಾಗೆ ಮದುವೆಯಾಗಿತ್ತು. ಆ ಮದುವೆ ಪ್ರೇಮವಿವಾಹವಾಗಿತ್ತು. ಆಕೆಯನ್ನು ಹಾಗೆ ಪ್ರೇಮವಿವಾಹ ಆದದ್ದು ಯಾರು ಗೊತ್ತೇ? ಅವರೇ ನಮ್ಮ ಡಿಂಗ್ರಿ ನಾಗರಾಜ್ ! ಆತ ಮತ್ತೊಬ್ಬ ಸಕಲ ಕಲಾವಲ್ಲಭ ನಟ, ಮತ್ತು ಮುಖ್ಯವಾಗಿ ಹಾಸ್ಯ ನಟ.

ಡಿಂಗ್ರಿ ನಾಗರಾಜರ ಪತ್ನಿ ಸರ್ವಮಂಗಳಾ ಮತ್ತು ಮೈಸೂರ್ ಲೋಕೇಶ್ ಹಾಗೆ ಪ್ರೀತಿಯಲ್ಲಿ ಬಿಂಗ್ರಿ ಆಟ ಆಡುವ ಕಾರಣದಿಂದ ಎರಡೂ ಕುಟುಂಬದಲ್ಲಿ ಬಿರುಗಾಳಿಯೇ ಎದ್ದಿತ್ತು. ಸರ್ವಮಂಗಳಾ ಪತಿ ಡಿಂಗ್ರಿ ನಾಗರಾಜರನ್ನು ತ್ಯಜಿಸಿ ಲೋಕೇಶ್ ಸಖ್ಯದಲ್ಲಿ ಇರಲಾರಂಭಿಸಿದರು. ಹಾಗೆ ದೂರ ಹೋದ ಎಷ್ಟೋ ವರ್ಷಗಳ ನಂತರವೂ, ಪತ್ನಿ ಮತ್ತೆ ಬಂದರೆ ಸ್ವಾಗತಿಸುವುದಾಗಿ ಪತಿ ಡಿಂಗ್ರಿ ಹೇಳಿ ತನ್ನ ಧಾರಾಳತೆ ಮತ್ತು ದೊಡ್ಟತನ ಮೆರೆದಿದ್ದರು. ಅಲ್ಲದೆ, ಡಿಂಗ್ರಿ ಸರ್ವಮಂಗಳಾ ಗೆ ಇಬ್ಬರು ಹೆಣ್ಣು ಮಕ್ಕಳಿದ್ದರು: ಅಮ್ಮನ ಆರೈಕೆ ಏನೆಂದೇ ಗೊತ್ತಿಲ್ಲದೇ ಬೆಳೆದಿದ್ದ ಡಿಂಗ್ರಿ ನಾಗರಾಜ್ ಗೆ ತನ್ನ ಮಕ್ಕಳು ಅಮ್ಮನ ಪ್ರೀತಿ ಇಲ್ಲದೆ ಬೆಳೆಯಬಾರದು ಎಂದು ಅಂದುಕೊಂಡಿದ್ದರು. ಆದರೆ ಮಕ್ಕಳನ್ನೂ ತ್ಯಜಿಸಿ ಹೋಗುವಷ್ಟು ಮೋಹ ಸರ್ವಮಂಗಳಾಗೆ ಮೈಸೂರ್ ಲೋಕೇಶ್ ಮೇಲೆ ಇತ್ತು. ಸರ್ವಮಂಗಳಾ ಮತ್ತೆ ಡಿಂಗ್ರಿ ಬಾಳಿಗೆ ವಾಪಾಸ್ ಬರಲೇ ಇಲ್ಲ. ಕೊನೆಯಲ್ಲಿ, ಸರ್ವಮಂಗಳಾ ಮತ್ತು ಲೋಕೇಶ್ ಇಬ್ಬರೂ – ಅದೇನಾಯಿತೋ, ಒಂದು ಲಾಡ್ಜ್ ನಲ್ಲಿ ವಿಷ ಸೇವಿಸಿದರು. ಲೋಕೇಶ್ ಅದರಲ್ಲಿ ಸತ್ತರೆ, ಸರ್ವಮಂಗಳಾ ಬದುಕುಳಿದರು. ಆದರೆ, ಸರ್ವಮಂಗಳ ಅವರು ಬದುಕುಳಿದಿದ್ದರು. ನಂತರ ಕೆಲ ಸಮಯ ಜೈಲಿನಲ್ಲಿ ಸಹ ಇದ್ದು ಬಂದಿದ್ದರು. ಡಿಂಗ್ರಿ ಅವರು ಸರ್ವಮಂಗಳ ಅವರನ್ನು ಕ್ಷಮಿಸಿ ಮತ್ತೆ ಒಟ್ಟಿಗೆ ಜೀವನ ಮಾಡುತ್ತಿದ್ದರು ಎನ್ನಲಾಗಿದೆ. ಸತ್ತು ಹೋದ ಲೋಕೇಶ್ ಅವರ ನೋವು ಸಹಿಸಲಾಗದೇ ಡಿಪ್ರೆಷನ್‌ ಗೆ ಹೋಗಿದ್ದರು. ಕೊನೆಗೆ ಆಕೆ ಮತ್ತೆ ಆತ್ಮಹತ್ಯೆ ಮಾಡಿಕೊಂಡಳು.

ಈ ಎಲ್ಲಾ ಪ್ರಹಸನಗಳನ್ನು ಮಕ್ಕಳಾಗಿದ್ದ ಪವಿತ್ರ ಲೋಕೇಶ್ ಮತ್ತು ಆದಿ ಲೋಕೇಶ್ ಹತ್ತಿರದಿಂದ ಗಮನಿಸಿದ್ದರು. ತಂದೆಯ ಅಕಾಲಿಕ ಮರಣ ಮಕ್ಕಳನ್ನು ಕಂಗಾಲಾಗಿಸುವಂತೆ ಮಾಡಿತ್ತು. ಮೈಸೂರು ಲೋಕೇಶ್ ಅವರ ಮರಣದ ನಂತರ ಕುಟುಂಬದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಕಂಡು ಬಂತು. ಎಂಟರಿಷ್ಟರ ಸಹಾಯದಿಂದ ಪವಿತ್ರ ಓದು ಮುಗಿಸಿ ಡಿಗ್ರಿ ಸಂಪಾದಿಸಿಕೊಂಡಳು.ಪವಿತ್ರಾ ಒಂಬತ್ತನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ತೀರಿಕೊಂಡರು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ 80 ಪ್ರತಿಶತ ಗಳಿಸಿದ ಆಕೆ ನಾಗರಿಕ ಸೇವಕನಾಗಲು ಆಕಾಂಕ್ಷೆ ಹೊಂದಿದ್ದಳು. ಆದಾಗ್ಯೂ, ತನ್ನ ತಂದೆಯ ಮರಣದ ನಂತರ, ಅವಳು ತನ್ನ ತಾಯಿಗೆ ಸಹಾಯ ಮಾಡಲು ನಿರ್ಧರಿಸಿದಳು. ಆರಂಭದಲ್ಲಿ ನಟನೆಯಲ್ಲಿ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಲು ಇಷ್ಟವಿರಲಿಲ್ಲ, ಅವರು ಮೈಸೂರಿನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಿದ್ದರು.

ತನ್ನ ಮೊದಲ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲವಾದ ನಂತರ, ಅವರು ಬೆಂಗಳೂರಿಗೆ ತೆರಳುವ ಮೊದಲು ನಟನೆಯನ್ನು ತೆಗೆದುಕೊಂಡರು. ಸಿನಿ ಜಗತ್ತಿನ ಎಡೆಗೆ ಆಕೆಗ ಪ್ರವೇಶ ಅದಾಗಲೇ ಪಡೆದಿದ್ದು ತನ್ನ 16ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿದ್ದಳು. ರೂಪ ಮತ್ತು ಒಳ್ಳೆಯ ಪರ್ಸನಾಲಿಟಿ ಇದ್ದರೂ ನಾಯಕಿಯಾಗಿ ಆಕೆ ಬೆಳೆಯಲಿಲ್ಲ. ಸಿನಿ ಜಗತ್ತು ಬದುಕು ಕಟ್ಟಿಕೊಳ್ಳಲು ಸಹಾಯ ಮಾಡದಿದ್ದಾಗ ಆಕೆ ಬೇರೆ ಕೆಲಸ ಹುಡುಕಿಕೊಂಡಳು. ಈ ಮಧ್ಯೆ ಒಂದು ವರ್ಷ ಸಂಸ್ಥೆ ಒಂದರಲ್ಲಿ ಒಂದು ವರ್ಷ ಕೆಲಸ ಮಾಡಿದಳು. ಆಗ ಎಲ್ಲಾ ಸಾಮಾನ್ಯರಂತೆ ಬಿಎಂಟಿಸಿ ಬಸ್ಸಿನಲ್ಲಿ ಓಡಾಡುವ ಹಾಗಾಗಿತ್ತು. ಬದುಕು ಕಟ್ಟಿಕೊಳ್ಳಲು ನಿಜಕ್ಕೂ ಆಕೆ, ಹಿರಿಯ ಮಗಳಾಗಿ ಕಷ್ಟ ಪಟ್ಟಳು.

ಈ ಮಧ್ಯೆ ಟಿ ಎಸ್ ನಾಗಾಭರಣ ನಿರ್ದೇಶನದ ಚಿತ್ರ ಜನುಮದ ಜೋಡಿಯಲ್ಲಿ ಆಕೆ ನಟಿಸಿ ತನ್ನ ಕಲಾ ಪ್ರತಿಭೆಯನ್ನು ತೋರ್ಪಡಿಸಿದಳು. ಮತ್ತೆ ಬಣ್ಣದ ಬದುಕು ಕೈ ಬೀಸಿ ಕರೆದಿತ್ತು, ನಾಯಕಿಯ ತಂಗಿಯ ಪಾತ್ರದಿಂದ ಅಮ್ಮನ ಪಾತ್ರಕ್ಕೆ ಬರುವಷ್ಟರಲ್ಲಿ ಆಕೆ ಬಹುತೇಕ ತೆಲುಗಿನ ಖ್ಯಾತ ಚಿತ್ರಗಳಲ್ಲಿ ಇರಲೇ ಬೇಕು ಅನ್ನುವಷ್ಟರ ಮಟ್ಟಿಗೆ ಪ್ರಸಿದ್ದಿ ಪಡೆದುಕೊಂಡು ಬಿಟ್ಟಳು. ಕನ್ನಡ ಚಿತ್ರರಂಗ ನಿರ್ಲಕ್ಷಿಸಿದರೆ ಕೂಡಾ, ತೆಲುಗು ವಾಡು ಕೈ ಹಿಡಿದರು. ಇವತ್ತಿಗೂ ಆಕೆ ಅಲ್ಲಿ ದೊಡ್ಡ ಸ್ಟಾರ್ ನಟಿಯೇ !! ಬದುಕಿನ ಅದೆಂತಹ ಅನಿವಾರ್ಯತೆಯೂ ಗೊತ್ತಿಲ್ಲ, ತೆಲುಗಿನ ಶತ ಕೊತ್ಯಾಧಿಪತಿ ಜತೆ ನಟಿಸುವುದೃ ಜತೆಗೇ ಹೆಚ್ಚಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದಳು.

ಇಷ್ಟರಲ್ಲಾಗಲೇ ಆಕೆಗೆ ಮದುವೆ ಆಗಿತ್ತು. ಆಕೆಯ ಮೊದಲ ಪತಿ ಸಾಫ್ಟ್‌ವೇರ್ ಇಂಜಿನಿಯರ್. ಸಾಫ್ಟ್‌ವೇರ್ ಇಂಜಿನಿಯರ್ ರಿಂದ ವಿಚ್ಛೇದನದ ನಂತರ ಕನ್ನಡದ ನಟ ಚಿಂತಕ ಸುಚೇಂದ್ರ ಪ್ರಸಾದ್ ಅವರೊಂದಿಗೆ ಲಿವ್-ಇನ್-ರಿಲೇಶನ್‌ಶಿಪ್‌ನಲ್ಲಿ ಇದ್ದಾಳಾಕೆ ಮತ್ತು 2018 ರಲ್ಲಿ ಅವರು ಕೂಡಾ ಬೇರ್ಪಟ್ಟರು. ಆಕೆಗೆ 2 ಮಕ್ಕಳು ಜನಿಸಿದರು. ಈಗ ಆಕೆಯ ಹೆಸರು ತೆಲುಗು ನಟ, ಕೋಟ್ಯಾಧಿಪತಿ ನರೇಶ್ ಜತೆ ಗಿರ್ಕಿ ಹೊಡೀತಿದೆ. ಮಾಧ್ಯಮಗಳಲ್ಲಿ ಅದು ರಚ್ಚೆ ಎಬ್ಬಿಸಿ ಕುಳಿತಿದೆ. ನಾವಿಬ್ಬರೂ ಸ್ನೇಹಿತರು, ಅಂತ ಆಕೆ ಸಮಜಾಯಿಷಿ ನೀಡುತ್ತಲೇ ಬಂದಿದ್ದಾಳೆ. ಆದರೆ ಯಾರು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ.ನಿನ್ನೆ ಅವರಿಬ್ಬರೂ ಒಂದೇ ಹೋಟೆಲಿನ ರೂಮಿನಲ್ಲಿ ಸಿಕ್ಕಿ ಬೀಳುವ ಮೂಲಕ ಅವರಿಬ್ಬರ ರಿಲೇಶನ್ ಶಿಪ್ ಕನ್ಫರ್ಮ್ ಆಗಿದೆ.

ಬಹುಶ, ಇಂತಹ ಅಸ್ಥಿರ ಡಿಸ್ಟರ್ಬ್ದ್ ಬಾಲ್ಯದ ಕಾರಣದಿಂದಲೋ ಏನೋ, ಪವಿತ್ರಾ ಮನಸ್ಸು ಒಂದೆಡೆ ನಿಲ್ಲುತ್ತಿಲ್ಲ ಇರಬೇಕು. ಆಕೆಯ ವೈವಾಹಿಕ ಜೀವನ ನೋಡಿದಾಗ ಹಾಗನ್ನಿಸುತ್ತದೆ. ಅಲ್ಲದೆ, ಆಕೆಯ ಜತೆ ಹಲವಾರು ವರ್ಷ ಸಂಸಾರ ಮಾಡಿದ ನಟ ಸುಚೇಂದ್ರ ಪ್ರಸಾದ್ ಮೊನ್ನೆ ಒಂದು ಮಾತು ಹೇಳಿದ್ದರು: ” ಇನ್ನು ಆರೇ ತಿಂಗಳು. ಅಷ್ಟರಲ್ಲಿ ನರೇಶ್ ಅನ್ನು ಕೂಡಾ ಆಕೆ ಬಿಟ್ಟು ಹೊರಡುತ್ತಾಳೆ ಎಂದು “. ಈ ಮಾತು ಎಷ್ಟರಮಟ್ಟಿಗೆ ನಿಜ ಆಗತ್ತೋ ಗೊತ್ತಿಲ್ಲ ?! ಈಗ ನರೇಶ್ ಮತ್ತು ಪವಿತ್ರ ಲೋಕೇಶ್ ಇಬ್ಬರೂ ಮೈಸೂರಿನ ಹೋಟೆಲ್ ಒಂದರಲ್ಲಿ ರೆಡ್ ಹ್ಯಾಂಡ್ ಆಗಿ ನಟ ನರೇಶ್ ಹೆಂಡತಿ ರಮ್ಯಾ ರಘುಪತಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಹಾಗಾಗಿ ಆಕೆಯ ಜೀವನ ಸಿನಿಮಾ ಕಥೆಯ ರೂಪಕ್ಕೆ ಬದಲಾಗಿದೆ. ಆಕೆಯ ಪ್ರೈವೇಟ್ ಲೈಫ್ ಇವತ್ತು ಬೀದಿಗೆ ಬಂದು ನಿಂತಿದೆ.

ಅತ್ತ ಆಕೆಯ ತಮ್ಮ ಆದಿ ಲೋಕೇಶ್ ಕೂಡಾ ಸಕ್ಸಸ್ ಕಾಣಲಿಲ್ಲ. ಓದಿನಲ್ಲಿ ಹಿಂದೆ ಬಿದ್ದಿದ್ದ ಹುಡುಗ, ನಂತರ ಮೈಸೂರಿನಲ್ಲಿ ಪೋಲಿ ಬಿದ್ದು ಹೋಗಿದ್ದ. ವಿಪರೀತಕ್ಕೆ ಆಡುತ್ತಿದ್ದ. ಕೆಲವು ಹುಡುಗರು ಆತನನ್ನು ಹಿಡಿದು ಸರಿಯಾಗಿ ಬಡಿದಿದ್ದರು. ಆ ನಂತರ ಕೆಲ ಸಿನಿಮಾಗಳಲ್ಲಿ ನಟಿಸಿದ ಆದಿ. ಅವು ಒಂದಷ್ಟು ಹೆಸರು ತಂದು ಕೊಟ್ಟಿತು. ಒಂದು ಚಿತ್ರದಲ್ಲಿ ನಾಯಕ ನಟನಾಗಿ ಕೂಡ ಅಭಿನಯಿಸಿದ. ಆದರೆ ಅದು ಸಕ್ಸಸ್ ನೋಡಲೇ ಇಲ್ಲ. ಒಟ್ಟಾರೆ ಮೈಸೂರು ಲೋಕೇಶ್ ಅವರ ಇಬ್ಬರು ಮಕ್ಕಳ ಜೀವನ ಸೆಟಲ್ ಆಗಲಿಲ್ಲ. ಕಾರಣ ಹುಡುಕಿದರೆ ಕಾಣೋದು, ಆಕೆಯ ಕುಟುಂಬ !!

 
Leave A Reply