Air India Recruitment 2023: ಏರ್ ಇಂಡಿಯಾದಲ್ಲಿ ಉದ್ಯೋಗ! ಪಿಯುಸಿ ಪಾಸಾದವರಿಗೆ ಆದ್ಯತೆ, ಕಂಪ್ಲೀಟ್‌ ವಿವರ ಇಲ್ಲಿದೆ!

Air India Recruitment :ಏರ್ ಇಂಡಿಯಾದಲ್ಲಿ ಉದ್ಯೋಗಾವಕಾಶ (Air India Recruitment) ಬಯಸುವವರಿಗೆ ಇಲ್ಲಿದೆ ಸುವರ್ಣ ಅವಕಾಶ. ಸದ್ಯ ಏರ್ ಇಂಡಿಯಾ ವಿಮಾನಗಳ ಕ್ಯಾಬಿನ್ ಕ್ರಿವ್​ನಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಪ್ರಸ್ತುತ ಏರ್ ಇಂಡಿಯಾದಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶವಿದ್ದು, ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯ ಕ್ಯಾಬಿನ್ ಸಿಬ್ಬಂದಿಯ (ಪರಿಚಾರಿಕೆಯರು – Cabin Crew) ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ಆಸಕ್ತ ಅಭ್ಯರ್ಥಿಗಳು ಮತ್ತು ಸೂಕ್ತ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ನೇರವಾಗಿ ಈ ಕೆಳಗೆ ಸೂಚಿಸಿರುವ ಸ್ಥಳದಲ್ಲಿ ಸಂದರ್ಶನಕ್ಕೆ ಭಾಗಿಯಾಗಬಹುದು.

ಮುಂಬೈ, ದೆಹಲಿ, ಚೆನ್ನೈ, ಜೈಪುರ್, ಹೈದರಾಬಾದ್, ಕೋಲ್ಕತಾ, ಗುವಾಹಟಿ, ಅಹ್ಮದಾಬಾದ್, ಇಂದೋರ್, ಪುಣೆ ಮತ್ತು ಲಕ್ನೋ ನಗರಗಳಲ್ಲಿ ವಾಕ್ ಇನ್ ಇಂಟರ್ವ್ಯೂ ನಡೆಸಲಾಗುತ್ತಿದ್ದು, ಈ ವಿಚಾರವನ್ನು ಏರ್ ಇಂಡಿಯಾ ಟ್ವಿಟ್ಟರ್​ನಲ್ಲಿ (Twitter ) ತಿಳಿಸಿದೆ. ಈ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದ್ದು, ಮಾರ್ಚ್ 3ರಿಂದ 24ರವರೆಗೆ ನಿರ್ದಿಷ್ಟ ದಿನಗಳಂದು ಸಂದರ್ಶನಗಳಿವೆ.

ಕನಿಷ್ಠ ಶೇ. 50ರಷ್ಟು ಅಂಕಗಳೊಂದಿಗೆ 12ನೇ ತರಗತಿಯಾದರೂ ಪಾಸಾಗಿರಬೇಕು.
ಮಹಿಳಾ ಅಭ್ಯರ್ಥಿಗಳು ಕನಿಷ್ಠ 155 ಸೆಂಟಿಮೀಟರ್ (5 ಅಡಿ 1 ಇಂಚು), ಎತ್ತರಕ್ಕೆ ತಕ್ಕಂತಹ ಸೂಕ್ತ ತೂಕದವಾರಗಿರಬೇಕು.

ವಯಸ್ಸು: ಹೊಸಬರು 18-27 ವರ್ಷದವರಾಗಿರಬೇಕು. ಅನುಭವಿಗಳು 35 ವರ್ಷದ ವಯಸ್ಸಿನವರೆಗೆ ಅವಕಾಶ.
ಬಿಎಂಐ (ಬಾಡಿ ಮಾಸ್ ಇಂಡೆಕ್ಸ್): 18ರಿಂದ 22 ಇರಬೇಕು. ದೃಷ್ಟಿ 6/6 ಇರಬೇಕು.

ಒಂದು ವೇಳೆ ಅಭ್ಯರ್ಥಿಗಳು ಆಯ್ಕೆಯಾಗಿ ನೇಮಕವಾದಲ್ಲಿ ಈ ಕೆಳಕಾಣಿಸಿದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ.
ಫ್ಲೈಟ್ ಸಂದರ್ಭದಲ್ಲಿ ಅನೌನ್ಸ್​ಮೆಂಟ್ ಇದ್ದರೆ ಮಾಡುವುದು, ಪ್ರಯಾಣಿಕರ ಪ್ರಶ್ನೆಗಳಿಗೆ, ಗೊಂದಲಗಳಿಗೆ ಸಮಾಧಾನ ನೀಡುವುದು. ವಿಮಾನ ಹೊರಡುವ ಮುಂಚಿನ ಮೀಟಿಂಗ್​ಗಳನ್ನು ಕಡ್ಡಾಯವಾಗಿ ಅಟೆಂಡ್ ಮಾಡಬೇಕು. ಫ್ಲೈಟ್ ಘಟನೆಗಳ ಬಗ್ಗೆ ವರದಿ ಸಿದ್ಧಪಡಿಸಬೇಕು.

ವಿಮಾನ ಟೇಕಾಫ್ ಆಗುವ ಮುನ್ನ ಸುರಕ್ಷತಾ ಉಪಕರಣಗಳು ಸರಿ ಇವೆಯೇ ಎಂದು ಪರಿಶೀಲಿಸಬೇಕು. ಬಳಿಕ ಪ್ರಯಾಣಿಕರಿಗೆ ಈ ಉಪಕರಣಗಳನ್ನು ಬಳಸುವ ವಿಧಾನಗಳನ್ನು ತೋರಿಸಿಕೊಡಬೇಕಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಫಸ್ಟ್ ಏಡ್, ರಕ್ಷಣೆ, ಇನ್​ಫ್ಲೈಟ್ ಸರ್ವಿಸ್ ಡ್ಯೂಟಿ ಇತ್ಯಾದಿಯನ್ನು ಮಾಡಬೇಕಾಗುತ್ತದೆ. ಅತಿಥಿಗಳನ್ನು ಸ್ವಾಗತಿಸುವುದು, ಅವರು ಸೀಟುಗಳತ್ತ ಹೋಗಲು ನಿರ್ದೇಶನ ನೀಡುವುದು, ಲಗೇಜು ಇಡಲು ಸಹಾಯ ಮಾಡುವುದು ಇತ್ಯಾದಿ ಕಾರ್ಯ.

ಸಂದರ್ಶನ ಸ್ಥಳಗಳು ಮತ್ತು ಸಮಯ :
ಮುಂಬೈ: ಮಾರ್ಚ್ 3- ಬೆಳಗ್ಗೆ 9:30ರಿಂದ 12:30
ದೆಹಲಿ: ಮಾರ್ಚ್ 6, 13 ಮತ್ತು 20- ಬೆಳಗ್ಗೆ 9:30ರಿಂದ 12:30
ಜೈಪುರ್: ಮಾರ್ಚ್ 7- ಬೆಳಗ್ಗೆ 9:30ರಿಂದ 12:30
ಚೆನ್ನೈ: ಮಾರ್ಚ್ 10- ಬೆಳಗ್ಗೆ 9:30ರಿಂದ 12:30
ಹೈದರಾಬಾದ್: ಮಾರ್ಚ್ 10- ಬೆಳಗ್ಗೆ 9:30ರಿಂದ 12:30
ಕೋಲ್ಕತಾ: ಮಾರ್ಚ್ 14- ಬೆಳಗ್ಗೆ 9:30ರಿಂದ 12:30
ಗುವಾಹತಿ: ಮಾರ್ಚ್ 16- ಬೆಳಗ್ಗೆ 9:30ರಿಂದ 12:30
ಅಹ್ಮದಾಬಾದ್: ಮಾರ್ಚ್ 17- ಬೆಳಗ್ಗೆ 9:30ರಿಂದ 12:30
ಇಂದೋರ್: ಮಾರ್ಚ್ 21- ಬೆಳಗ್ಗೆ 9:30ರಿಂದ 12:30
ಮುಂಬೈ: ಮಾರ್ಚ್ 23- ಬೆಳಗ್ಗೆ 9:30ರಿಂದ 12:30
ಪುಣೆ: ಮಾರ್ಚ್ 24- ಬೆಳಗ್ಗೆ 9:30ರಿಂದ 12:30
ಲಕ್ನೋ: ಮಾರ್ಚ್ 24- ಬೆಳಗ್ಗೆ 9:30ರಿಂದ 12:30

ಹುದ್ದೆಗೆ ಅರ್ಜಿ ಸಲ್ಲಿಸುವವರು ಮುಖ್ಯವಾಗಿ ಭಾರತದ ಪಾಸ್​ಪೋರ್ಟ್, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು. ಯೂನಿಫಾರ್ಮ್ ತೊಟ್ಟಾಗ ಮೇಲೆ ಎದ್ದು ಕಾಣುವಂತಹ ಟಾಟ್ಟೂಗಳು ಇರಬಾರದು. ಇಂಗ್ಲೀಷ್ (English) ಮತ್ತು ಹಿಂದಿಯಲ್ಲಿ (hindi ) ಪರಿಣಿತರಿರಬೇಕು.

Leave A Reply

Your email address will not be published.