IPL-2024 Punjab vs KKR: IPL ನಲ್ಲಿ ಇತಿಹಾಸ ಸೃಷ್ಟಿಸಿದ ಪಂಜಾಬ್ ಕಿಂಗ್ಸ್ : ಅತಿ ಹೆಚ್ಚು ರನ್ ಚೇಸ್ ಮಾಡಿ ಟಿ20ಯಲ್ಲಿ ವಿಶ್ವದಾಖಲೆ

IPL-2024 Punjab vs KKR: ಟಿ20 ಕ್ರಿಕೆಟ್‌ನಲ್ಲಿ ಪಂಜಾಬ್ ಕಿಂಗ್ಸ್ ಹೊಸ ಇತಿಹಾಸ ನಿರ್ಮಿಸಿದೆ. ಪಂಜಾಬ್ ಕಿಂಗ್ಸ್ ಟಿ20ಯಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡ ಎಂಬ ವಿಶ್ವ ದಾಖಲೆ ನಿರ್ಮಿಸಿದೆ. ಐಪಿಎಲ್-2024ರ ಅಂಗವಾಗಿ ಈಡನ್ ಗಾರ್ಡನ್ಸ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 262 ರನ್ ಗಳ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ:  Plastic Surgery: ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್ ಬಳಸ್ತಾರ? : ರೂಪ ಬದಲಿಸುವ ಈ ಸರ್ಜರಿಗೆ ಆ ಹೆಸರು ಏಕೆ ಬಂತು ಗೊತ್ತಾ? : ಇದಕ್ಕೆ ಮಹರ್ಷಿ ಸುಶ್ರುತರ ಕೊಡುಗೆ ಅಪಾರ

262 ರನ್‌ಗಳ ಬೃಹತ್ ಗುರಿಯನ್ನು ಪಂಜಾಬ್ ಕಿಂಗ್ಸ್ 18.4 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಈ ಮೊದಲು ಈ ದಾಖಲೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿತ್ತು. ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 259 ರನ್‌ ಗಳ ಗುರಿಯನ್ನು ನೀಡಿತ್ತು. ಈ ಪಂದ್ಯದೊಂದಿಗೆ ಪಂಜಾಬ್ ಕಿಂಗ್ಸ್ ದಕ್ಷಿಣ ಆಫ್ರಿಕಾದ ದಾಖಲೆಯನ್ನು ಮುರಿದಿದೆ. ಇದು ಐಪಿಎಲ್‌ ನಲ್ಲೂ ಅತ್ಯಧಿಕ ಚೇಸ್ ಆಗಿರುವುದು ಗಮನಾರ್ಹ. ಇದುವರೆಗೂ ಈ ದಾಖಲೆ ರಾಜಸ್ಥಾನ್ ರಾಯಲ್ಸ್ ಹೆಸರಿನಲ್ಲಿತ್ತು. 2020 ರ ಐಪಿಎಲ್ ಋತುವಿನಲ್ಲಿ, ಅವರು ಪಂಜಾಬ್ ವಿರುದ್ಧ 224 ರನ್ಗಳ ಗುರಿಯನ್ನು ಮುರಿದಿದ್ದರು.

ಇದನ್ನೂ ಓದಿ:  Kannadati Anu: ಪುನೀತ್ ಕೆರೆಹಳ್ಳಿಯಿಂದ ಕನ್ನಡತಿ ಅಕ್ಕ ಅನುಗೆ ಬ್ಯಾಡ್ ಕಮೆಂಟ್ !!

ಇನ್ನು ಸದ್ಯದ ಪಂದ್ಯದ ವಿಚಾರಕ್ಕೆ ಬಂದರೆ ಆರಂಭಿಕ ಆಟಗಾರ ಜಾನಿ ರ್ಬೈಸ್ಟೋ ಪಂಜಾಬ್ ಬ್ಯಾಟ್ಸ್‌ಮನ್‌ಗಳ ನಡುವೆ ವಿಧ್ವಂಸಕ ಶತಕ ಸಿಡಿಸಿದ್ದಾರೆ. 48 ಎಸೆತಗಳನ್ನು ಎದುರಿಸಿದ ಬೇರ್ ಸ್ಟೋ 8 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ 108 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರೊಂದಿಗೆ ಶಶಾಂಕ್ ಸಿಂಗ್ (28 ಎಸೆತಗಳಲ್ಲಿ 2 ಬೌಂಡರಿ ಮತ್ತು 8 ಸಿಕ್ಸರ್ ಸಹಿತ 68 ರನ್) ಮತ್ತು ಪ್ರಭುಸಿಮ್ರಾನ್ ಸಿಂಗ್ (54) ಅದ್ಭುತ ಇನ್ನಿಂಗ್ಸ್ ಆಡಿದರು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 261 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.

ಕೆಕೆಆರ್ ಬ್ಯಾಟ್ಸ್‌ಮನ್‌ಗಳ ಪೈಕಿ ಫಿಲ್ ಸಾಲ್ಸ್ (75) ಮತ್ತು ಸುನಿಲ್ ನರೈನ್ (71) ವೆಂಕಟೇಶ್ ಅಯ್ಯರ್ (39) ಮತ್ತು ಶ್ರೇಯಸ್ ಅಯ್ಯರ್ (281 ರನ್ ಗಳಿಸಿ ಮಿಂಚಿದರು. ಪಂಜಾಬ್ ಬೌಲರ್‌ಗಳಲ್ಲಿ ಅರ್ಶ್‌ ದೀಪ್ ಸಿಂಗ್ ಎರಡು, ರಾಹುಲ್ ಚಹಾರ್ ಮತ್ತು ಸ್ಕ್ಯಾಮ್ ಕಾನ್ ತಲಾ ಒಂದು ವಿಕೆಟ್ ಪಡೆದರು.

Leave A Reply

Your email address will not be published.