LPG: ಈ ಕೆಲಸ ಮಾಡಿ, 450ರೂ ಗೆ LPG ಸಿಲಿಂಡರ್ ಪಡೆಯಿರಿ !!

 

LPG: ಕೇಂದ್ರ ಸರ್ಕಾರವು ಬಡವರಿಗೆ ಅನುಕೂಲವಾಗಲೆಂದು ಉಜ್ವಲ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಅನೇಕ ಕುಟುಂಬಗಳ ಒಲೆ ಉರಿಯುತ್ತಿದೆ. ಆದರೀಗ ಇದರ ಫಲಾನುಭವಿಗಳಿಗೆ ಕೇವಲ 450 ರೂಪಾಯಿಗೆ LPG ಸಿಲಿಂಡರ್ ದೊರೆಯುತ್ತದೆ. ಆದರೆ ಎಲ್ಲರೂ ಇದೊಂದು ಕೆಲಸ ಮಾಡಿದ್ರೆ ಮಾತ್ರ.

ಉಜ್ವಲ ಯೋಜನೆ(PM Ujwal Scheme) ಅಡಿಯಲ್ಲಿ ಜನರು ಕೇವಲ 450ಗಳಿಗೆ ಎಲ್ಪಿಜಿ ಸಿಲಿಂಡರ್ (LPG Cylinder) ಗ್ಯಾಸ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅದೇನೆಂದರೆ ಗ್ಯಾಸ್ ಐಡಿಯನ್ನು ಜನಾಧಾರ್ ಲಿಂಕ್ ಮಾಡಿಕೊಳ್ಳಬೇಕು. ಜೊತೆಗೆ ಆಧಾರ್ ಕೆವೈಸಿ ಮಾಡಿಸಬೇಕು. ಈ ಮೂಲಕ ಕಡಿಮೆ ಬೆಲೆಗೆ ನೀವು ಗ್ಯಾಸ್ ಅನ್ನು ಪಡೆಯಬಹುದು.

ಹೌದು, ಸಬ್ಸಿಡಿ ಯೋಜನೆ ಅಡಿಯಲ್ಲಿ ತಮ್ಮ ಗ್ಯಾಸ್ ಐಡಿಯನ್ನು ಜನಾಧಾರ್ ಲಿಂಕ್ ಮಾಡಿಕೊಳ್ಳುವ ಮೂಲಕ ಕೇವಲ 450ಗಳ ಸಬ್ಸಿಡಿ ಬೆಲೆಯಲ್ಲಿ ಗ್ಯಾಸ್ ಅನ್ನು ಖರೀದಿ ಮಾಡಬಹುದಾಗಿದೆ. ಈ ಪ್ರಕ್ರಿಯೆಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದ್ದು ಇಂದೇ ಇದರ ಲಾಭವನ್ನು ಪಡೆದುಕೊಳ್ಳಿ.

ಅಲ್ಲದೆ ಪ್ರತಿಯೊಬ್ಬರಿಗೂ ಕೂಡ ಈ ಲಾಭ ಸಿಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಮಾಡಿಸಿಕೊಳ್ಳುವಂತಹ ಅವಕಾಶವನ್ನು ಮಾಡಿಕೊಟ್ಟಿದೆ. ಹೀಗಾಗಿ ದಯವಿಟ್ಟು ಎಲ್ಲರೂ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಮಾಡಿಸಿ. ಸರ್ಕಾರದ ಲಾಭ ಪಡೆಯಿರಿ.

Leave A Reply

Your email address will not be published.