Gowrishankar temple Jammu Kashmir: ಹಿಂದೂ ದೇವಾಲಯಕ್ಕೆ ಭೂಮಿ ನೀಡಿದ ಮುಸ್ಲಿಮರು : ಸೌಹಾರ್ದತೆಗೆ ಇದೇ ಪ್ರತೀಕ ಎಂದ ನೆಟ್ಟಿಗರು

Gowrishankar temple Jammu Kashmir: ಭಾರತದ ಅನೇಕ ಜಾಗಗಳಲ್ಲಿ ಹಿಂದೂ ಹಾಗೂ ಮುಸ್ಲಿಮರು(Hindu Muslim) ಸೌಹಾರ್ದತೆಯಿಂದ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬುವ ಮಾತುಗಳನ್ನು ಕೇಳುತ್ತಿರುತ್ತೇವೆ ಆದರೆ ಜಮ್ಮು ಕಾಶ್ಮೀರದಲ್ಲಿ(Jammu Kashmir)ನಡೆದಿರುವ ಈ ಒಂದು ಘಟನೆ ಅದನ್ನು ಸುಳ್ಳು ಎಂದು ಸಾಬೀತು ಪಡಿಸಿದೆ.

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದೂ ದೇವಾಲಯವೊಂದಕ್ಕೆ ಮುಸ್ಲಿಮರು ಭೂಮಿ ನೀಡಿದ್ದಾರೆ. ರಿಯಾಸಿ ಜಿಲ್ಲೆಯ ಕಾನ್ಸಿ ಪಟ್ಟಾ ಗ್ರಾಮದ ಗೌರಿ ಶಂಕರ ದೇವಸ್ಥಾನಕ್ಕೆ(Gowrishankar temple) 10 ಅಡಿ ಅಗಲದ 1200 ಮೀಟ‌ರ್ ರಸ್ತೆಯನ್ನು ಮುಸ್ಲಿಂ ವ್ಯಕ್ತಿಗಳು ಬಿಟ್ಟುಕೊಟ್ಟಿದ್ದಾರೆ.

ಗುಲಾಮ್ ರಸೂಲ್ ಮತ್ತು ಗುಲಾಮ್ ಮೊಹಮ್ಮದ್ ಎಂಬುವವರು 500 ವರ್ಷಗಳಷ್ಟು ಹಳೆಯದಾದ ಈ ಹಿಂದೂ ದೇವಾಲಯಕ್ಕೆ(Gowrishankar temple) ರಸ್ತೆ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ದಾನ ಮಾಡಿದ್ದಾರೆ. ಪಂಚಾಯಿತಿ ಹಣದಲ್ಲಿ ಶೀಘ್ರವೇ ಈ ರಸ್ತೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕರೀನಾ ಕಪೂರ್ ಗೆ ಮುಳ್ಳಾದ “ಪ್ರೆಗ್ನೆನ್ಸಿ ಬೈಬಲ್” ಪುಸ್ತಕ ; ಕರೀನಾಗೆ ಹೈಕೋರ್ಟ್ ನಿಂದ ನೋಟಿಸ್ ಜಾರಿ

ಮಾಜಿ ಪಂಚಾಯಿತಿ ಸದಸ್ಯ ಹಾಗೂ ರೈತ ಗುಲಾಂ ರಸೂಲ್ ಮಾತನಾಡಿ, ರಸ್ತೆ ಸಮಸ್ಯೆ ನೆಪದಲ್ಲಿ ಕೆಲವರು ಸಮಾಜದಲ್ಲಿ ಬಿರುಕು ಮೂಡಿಸಲು ಯತ್ನಿಸಿದ್ದಾರೆ. ದೇವಸ್ಥಾನಕ್ಕೆ ಸರಿಯಾದ ರಸ್ತೆ ಇಲ್ಲ, ಬಿರುಕು ಮೂಡಿಸುವ ಉದ್ದೇಶದಿಂದ ಕೆಲವರು ದ್ವೇಷ ಅಭಿಯಾನವನ್ನೂ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಧಾರ್ಮಿಕ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಇತ್ತೀಚೆಗೆ ಪಂಚಾಯಿತಿ (Panchayat )ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳ ಸಭೆ ನಡೆಸಿರುವುದು ಬಹಿರಂಗವಾಗಿದೆ. ಈ ಸಭೆಯಲ್ಲಿ ಭೂಮಾಲೀಕರಾದ ಗುಲಾಂ ರಸೂಲ್ ಮತ್ತು ಗುಲಾಂ ಮೊಹಮ್ಮದ್(Gulam Mohammad ) ಅವರು ತಮ್ಮ ಜಮೀನಿನ ಒಂದು ಭಾಗವನ್ನು ರಸ್ತೆಗೆ ನೀಡಲು ತಾವಾಗಿಯೇ ಮುಂದೆ ಬಂದಿದ್ದಾರೆ.

ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಇದನ್ನು ಭಾರತದಲ್ಲಿನ ಹಿಂದು ಮುಸ್ಲಿಂ ಸೌಹಾರ್ದತೆಗೆ ಇದೇ ಪ್ರತೀಕ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಕರುಳು ಸಂಬಂಧಿ ರೋಗ ತೀವ್ರ ಹೆಚ್ಚಳ ; ಆರೋಗ್ಯ ಇಲಾಖೆಯಿಂದ ರಾಜ್ಯದಲ್ಲಿ ವಿಶೇಷ ಕ್ರಮ ಜಾರಿ! 

Leave A Reply

Your email address will not be published.