Budget 2024: ಬಜೆಟ್ ಗಾತ್ರ 48.21 ಲಕ್ಷ ಕೋಟಿ – ಕೇಂದ್ರಕ್ಕೆ ಇಷ್ಟೊಂದು ಆದಾಯ ಬರೋದು ಎಲ್ಲಿಂದ ?

Share the Article

Budget 2024: ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಮೊದಲ ಬಜೆಟ್(Budget 2024)ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ (ಜ 23) ಮಂಡಿಸಿದ್ದಾರೆ. ಇದು 2024-25ರ ಹಣಕಾಸು ವರ್ಷದ ಪೂರ್ಣ ಬಜೆಟ್ ಆಗಿರುತ್ತದೆ. ಭಾರತದ ಕೇಂದ್ರ ಬಜೆಟ್ ಗಾತ್ರವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಬೆಳೆಯುತ್ತಿದ್ದು ಈ ವರ್ಷದ ಬಜೆಟ್ ಗಾತ್ರ ಬರೋಬ್ಬರಿ 48.21 ಲಕ್ಷ ಕೋಟಿ ರೂನದ್ದಾಗಿದೆ. ಕೇಂದ್ರಕ್ಕೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬುದು ಎಲ್ಲರ ಕುತೂಹಲ. ಹಾಗಿದ್ರೆ ಕೇಂದ್ರದ ಆದಾಯದ ಮೂಲಗಳು ಯಾವುವೆಂದು ನೋಡೋಣ.

ಹೌದು, ಈ ಬಾರಿ ಬಜೆಟ್ ಗರಿಷ್ಠ ಮಟ್ಟಕ್ಕೆ ಹೋಗಿದೆ. ಇಷ್ಟು ದೊಡ್ಡ ಬಜೆಟ್​ಗೆ ಹಣಕಾಸು ಸಂಗ್ರಹಕ್ಕಾಗಿ ಮೂರು ಪ್ರಮುಖ ಮೂಲಗಳಿವೆ. ಇವು ಸರ್ಕಾರದ ಆದಾಯ ಸ್ವೀಕೃತಿಗಳು (ತೆರಿಗೆ ಆದಾಯ ಮತ್ತು ತೆರಿಗೆಯೇತರ ಆದಾಯ) ಮತ್ತು ಬಂಡವಾಳ ಸ್ವೀಕೃತಿಗಳು (ಸಾಲಗಳು ಮತ್ತು ಸಾಲಗಳ ಮರುಪಡೆಯುವಿಕೆ). ಇವು ಮೂಲಭೂತವಾಗಿ ಸರ್ಕಾರವು ತನ್ನ ಒಟ್ಟಾರೆ ಬಜೆಟ್ ವೆಚ್ಚ ಮತ್ತು ಅದರ ಆದಾಯ ಸಂಗ್ರಹದಲ್ಲಿನ ಕೊರತೆಯ ಪೂರೈಕೆಗಾಗಿ ಪಡೆಯುವ ಸಾಲಗಳಾಗಿವೆ. ಅವು ಎಲ್ಲಿಂದ ಬರುತ್ತವೆ ಗೊತ್ತಾ? ಇಲ್ಲಿದೆ ನೋಡಿ.

ಕೇಂದ್ರದ ಆದಾಯ ಮೂಲ:
* ಬಂಡವಾಳ ಸ್ವೀಕೃತಿ: 16.61 ಲಕ್ಷ ಕೋಟಿ ರೂ
* ಟ್ಯಾಕ್ಸ್ ಸಂಗ್ರಹ: 25.84 ಲಕ್ಷ ಕೋಟಿ ರೂ
* ತೆರಿಗೆಯೇತರ ಆದಾಯ: 5.46 ಲಕ್ಷ ಕೋಟಿ ರೂ
* ಮಾರುಕಟ್ಟೆಗಳಿಂದ ಪಡೆಯುವ ಸಾಲ: 11.63 ಲಕ್ಷ ಕೋಟಿ ರೂ
* ಸ್ಮಾಲ್ ಸೇವಿಂಗ್ಸ್ ಸ್ಕೀಮ್, ಪಿಎಫ್ ಇತ್ಯಾದಿ ಫಂಡ್​ಗಳಿಂದ: 4.50 ಲಕ್ಷ ಕೋಟಿ ರೂ
* ಎನ್​​ಡಿಸಿಎಆರ್: 78 ಸಾವಿರ ಕೋಟಿ ರೂ
* ಜಿಎಸ್​ಟಿ: 10.62 ಲಕ್ಷ ಕೋಟಿ ರೂ
* ಕೇಂದ್ರ ಅಬಕಾರಿ ಸುಂಕ: 3.19 ಲಕ್ಷ ಕೋಟಿ ರೂ
* ಆದಾಯ ತೆರಿಗೆ: 11.87 ಲಕ್ಷ ಕೋಟಿ ರೂ
* ಕಾರ್ಪೊರೇಶನ್ ತೆರಿಗೆ: 10.20 ಲಕ್ಷ ಕೋಟಿ ರೂ
* ಅಬಕಾರಿ ಸುಂಕ: 2.38 ಲಕ್ಷ ಕೋಟಿ ರೂ
* ಇತರೆ ತೆರಿಗೆ: 14,000 ಕೋಟಿ ರೂ
* ಬಡ್ಡಿಯಿಂದ ಬರುವ ಆದಾಯ: 38,000 ಕೋಟಿ ರೂ
* ಡಿವಿಡೆಂಡ್ ಆದಾಯ: 2.89 ಲಕ್ಷ ಕೋಟಿ ರೂ
* ಇತರೆ ಆದಾಯ: 2.19 ಲಕ್ಷ ಕೋಟಿ ರೂ

Leave A Reply

Your email address will not be published.