latest

ಉದ್ಯಾನವನವೊಂದರಲ್ಲಿ ಪ್ರೀತಿಯಲ್ಲಿ ಮುಳುಗಿದ್ದ ಪ್ರೇಮಿಗಳು ಚುಂಬಿಸುವ ವೀಡಿಯೋ ವೈರಲ್!! ಸಾರ್ವಜನಿಕರಿಂದ ಭಾರೀ ಆಕ್ರೋಶ

ಹುಬ್ಬಳ್ಳಿ: ಸಾರ್ವಜನಿಕ ಸ್ಥಳದಲ್ಲಿ ಪ್ರೀತಿಯಲ್ಲಿ ಮುಳುಗಿ ಹೋಗಿದ್ದ ಯುವ ಜೋಡಿಯು ಪರಸ್ಪರ ಚುಂಬಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವುದರೊಂದಿಗೆ ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ. ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನದಲ್ಲಿ ಇಂತಹ ಘಟನೆಯೊಂದು ನಡೆದಿದ್ದು, ಪ್ರೇಮಿಗಳಿಬ್ಬರು ಪ್ರೀತಿಯ ಕಡಲಲ್ಲಿ ಮುಳುಗಿ ಹೋಗಿದ್ದಲ್ಲದೆ, ತಮ್ಮನ್ನು ತಾವು ಮರೆತು ಸಾರ್ವಜನಿಕವಾಗಿ ಚುಂಬಿಸುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಕೆಲ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇಂತಹ ವರ್ತನೆಯಿಂದ ಸಾರ್ವಜನಿಕರಿಗೆ ಮುಜುಗರ ಉಂಟಾಗಿದ್ದು, ಹಾಡಹಗಲೇ ಇಂತಹ ಘಟನೆಗಳು ನಡೆಯುವ ಬಗ್ಗೆ …

ಉದ್ಯಾನವನವೊಂದರಲ್ಲಿ ಪ್ರೀತಿಯಲ್ಲಿ ಮುಳುಗಿದ್ದ ಪ್ರೇಮಿಗಳು ಚುಂಬಿಸುವ ವೀಡಿಯೋ ವೈರಲ್!! ಸಾರ್ವಜನಿಕರಿಂದ ಭಾರೀ ಆಕ್ರೋಶ Read More »

ಶಾಲಾ ಸಮವಸ್ತ್ರ ಧರಿಸುವುದು ಕಡ್ಡಾಯ, ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ! ಬಿ ಸಿ ನಾಗೇಶ್ ಸ್ಪಷ್ಟನೆ

ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದು ಕಡ್ಡಾಯ. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ಶಾಲಾ ಸಮಿತಿಗಳು ಎಂಥಾ ಸಮವಸ್ತ್ರ ಧರಿಸಬೇಕು ಎಂದು‌ ನಿರ್ಧಾರ ಮಾಡುತ್ತದೆ. ವಿದ್ಯಾರ್ಥಿಗಳು ಆಯಾ ಶಾಲೆಗೆ ಸಂಬಂಧಿಸಿದ ಸಮವಸ್ತ್ರ ಧರಿಸಬೇಕು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ. ಉಡುಪಿಯ ಶಾಲೆಯೊಂದರಲ್ಲಿ ಆರು ಮಕ್ಕಳು ಪ್ರತಿಭಟನೆ ನಡೆಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕರಾವಳಿಯ ಕೆಲ ಸಂಘಟನೆಗಳು ಇವರನ್ನು ಪ್ರಚೋದಿಸಿದೆ ಎಂದು ಹೇಳಿದ್ದಾರೆ. ಬೇರೆ ಮಕ್ಕಳೆಲ್ಲ ಶಾಲೆಗೆ ಬಂದಿದ್ದಾರೆ. …

ಶಾಲಾ ಸಮವಸ್ತ್ರ ಧರಿಸುವುದು ಕಡ್ಡಾಯ, ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ! ಬಿ ಸಿ ನಾಗೇಶ್ ಸ್ಪಷ್ಟನೆ Read More »

ಮದುವೆಯ ಮೊದಲ ರಾತ್ರಿಯನ್ನು ಠಾಣೆಯಲ್ಲಿ ಕಳೆದ ನವಜೋಡಿ-ಮಾರನೆಯ ದಿನ ಜಾಮೀನಿನ ಮೇಲೆ ಬಿಡುಗಡೆ!! ಅಚ್ಚರಿಯ ಫಸ್ಟ್ ನೈಟ್ ಗೆ ಕಾರಣವೇನು!??

ಅಹಮದಬಾದ್: ಮದುವೆ ಮುಗಿಸಿಕೊಂಡು ರಾತ್ರಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ನವ ಜೋಡಿಯನ್ನು ಪೊಲೀಸರು ರಸ್ತೆ ಮಧ್ಯೆ ತಡೆದಿದ್ದು, ಈ ವೇಳೆ ವರ ಪೊಲೀಸರೊಂದಿಗೆ ಅನುಚಿತ ವರ್ತನೆ ತೋರಿದ ಕಾರಣ ಮನೆಯಲ್ಲಿ ಮೊದಲ ರಾತ್ರಿ ಕಳೆಯಲಿದ್ದ ನವಜೋಡಿಯು ಠಾಣಾ ಲಾಕ್ ಅಪ್ ನಲ್ಲಿ ಕಳೆದ ಅಚ್ಚರಿಯ ಘಟನೆಯು ಗುಜರಾತ್ ನ ವಲ್ಸದ್ ನಗರದಲ್ಲಿ ನಡೆದಿದೆ. ಘಟನೆ ವಿವರ: ಮದುವೆಯ ದಿನ ರಾತ್ರಿ ಮನೆಯವರೊಂದಿಗೆ ಮದುವೆ ಮುಗಿಸಿಕೊಂಡು ವಧುವಿನೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ನವ ಜೋಡಿಯನ್ನು ಕೊರೋನ ನಿಯಮದ ಪ್ರಕಾರ …

ಮದುವೆಯ ಮೊದಲ ರಾತ್ರಿಯನ್ನು ಠಾಣೆಯಲ್ಲಿ ಕಳೆದ ನವಜೋಡಿ-ಮಾರನೆಯ ದಿನ ಜಾಮೀನಿನ ಮೇಲೆ ಬಿಡುಗಡೆ!! ಅಚ್ಚರಿಯ ಫಸ್ಟ್ ನೈಟ್ ಗೆ ಕಾರಣವೇನು!?? Read More »

ಆರ್ಥಿಕ ಸಂಕಷ್ಟದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ದಂಪತಿ!!

ಮೈಸೂರು: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ದಂಪತಿಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ಬೆಳಕಿಗೆ ಬಂದಿದೆ. ಅತಿಯಾದ ಸಾಲ ಮಾಡಿಕೊಂಡಿದ್ದ ದಂಪತಿಗಳು ಸಾಲಗಾರರ ಕಿರುಕುಳಕ್ಕೆ ಹಾಗೂ ಆರ್ಥಿಕ ಸಮಸ್ಯೆಗೆ ಹೆದರಿ ಊಟದಲ್ಲಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮೃತಪಟ್ಟ ದಂಪತಿಗಳನ್ನು ಉದಯಗಿರಿ ಸಾತಾಗಳ್ಳಿ ಲೇಔಟ್ ನಿವಾಸಿಗಳಾದ ಸಂತೋಷ್(26) ಹಾಗೂ ಭವ್ಯ(22) ಎಂದು ಗುರುತಿಸಲಾಗಿದೆ.

ಬಜಗೋಳಿ: ಆಟೋ ಹಾಗೂ ಕಾರು ನಡುವೆ ಭೀಕರ ಅಪಘಾತ!! ಆಟೋ ಚಾಲಕ ಮೃತ್ಯು-ಇನ್ನೊರ್ವ ಗಂಭೀರ

ಬಜಗೋಳಿ: ರಾಷ್ಟೀಯ ಹೆದ್ದಾರಿಯ ಮಿಯ್ಯಾರು ಎಂಬಲ್ಲಿ ಆಟೋ ರಿಕ್ಷಾ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಮಟ್ಟು ಇನ್ನೊರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೃತರನ್ನು ಆಟೋ ಚಾಲಕ ಚಂದ್ರಶೇಖರ್ ಮಡಿವಾಳ ಎಂದು ಗುರುತಿಸಲಾಗಿದ್ದು,ಗಾಯಗೊಂಡವರನ್ನು ದಿವಾಕರ್ ಮಡಿವಾಳ ಎಂದು ಗುರುತಿಸಲಾಗಿದೆ. ಈರ್ವರೂ ಆಟೋ ರಿಕ್ಷಾದಲ್ಲಿ ಕಾರ್ಕಳದ ಆಸ್ಪತ್ರೆಗೆ ತೆರಳಿ ಹಿಂದಿರುಗುತ್ತಿದ್ದಾಗ ನಾರಾವಿ ಕಡೆಯಿಂದ ಬರುತ್ತಿದ್ದ ಕಾರೊಂದು ಆಟೋ ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ, ಕಾರು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು …

ಬಜಗೋಳಿ: ಆಟೋ ಹಾಗೂ ಕಾರು ನಡುವೆ ಭೀಕರ ಅಪಘಾತ!! ಆಟೋ ಚಾಲಕ ಮೃತ್ಯು-ಇನ್ನೊರ್ವ ಗಂಭೀರ Read More »

ಐಷರಾಮಿ ಕಾರಿನಲ್ಲಿ ಬಂದು ಹೂವಿನ ಕುಂಡಗಳನ್ನು ಕದಿಯುವ ಐನಾತಿ ಸುಂದರಿ | ಸಿಸಿಟಿವಿಯಲ್ಲಿ ಕೃತ್ಯ ದಾಖಲು

ಎಂಥೆಂಥ ಐನಾತಿ ಕಳ್ಳರನ್ನು ನೀವು ನೋಡಿರಬಹುದು. ಆದರೆ ಹೂವಿನ ಕುಂಡ ಕದಿಯುವ ಸುಂದರಿ ಕಳ್ಳಿಯನ್ನು ನೀವು ಕಂಡಿದ್ದೀರಾ ? ಅದು ಕೂಡಾ ಐಷರಾಮಿ ಕಾರಿನಲ್ಲಿ ಡ್ರೈವರ್ ಜೊತೆ ಬಂದು. ಪ್ಯಾಂಟ್, ಷರ್ಟ್ ಧರಿಸಿ ಕಾರಿನಲ್ಲಿ ಬರುವ ಯುವತಿಯೊಬ್ಬಳು ಯಾರದೋ ಮನೆ ಮುಂದೆ ಇರುವ ಹೂವಿನ ಕುಂಡಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ರೀತಿಯ ಘಟನೆ ಸಂಜಯ ನಗರ ಠಾಣೆಯ ಆರ್ ಎಂವಿ ಎರಡನೇ ಸ್ಟೇಜ್ ನಲ್ಲಿ ನಡೆದಿದೆ. ಕಾವ್ಯ ಸೆಲ್ವಂ ಎನ್ನುವವರ ಮನೆಯಲ್ಲಿ …

ಐಷರಾಮಿ ಕಾರಿನಲ್ಲಿ ಬಂದು ಹೂವಿನ ಕುಂಡಗಳನ್ನು ಕದಿಯುವ ಐನಾತಿ ಸುಂದರಿ | ಸಿಸಿಟಿವಿಯಲ್ಲಿ ಕೃತ್ಯ ದಾಖಲು Read More »

ಬೆಳ್ತಂಗಡಿ:ಮೊಗೆರಡ್ಕ ಬಳಿ ಕಾರು ಪಲ್ಟಿ|ತಪ್ಪಿದ ಬಾರಿ ಅನಾಹುತ

ಬೆಳ್ತಂಗಡಿ:ಗರ್ಡಡಿ ಮೊಗೆರಡ್ಕ ಬಳಿ ಕಾರು ಪಲ್ಟಿ ಆದ ಘಟನೆ ಸಂಜೆವೇಳೆ ಸಂಭವಿಸಿದೆ. ಕಾರು ಅತಿಯಾದ ವೇಗದಲ್ಲಿ ಚಲಾಯಿಸುತಿದ್ದರಿಂದ ಈ ಘಟನೆ ಸಂಭವಿಸಿದೆ.ಅಲ್ಪ ಸ್ವಲ್ಪ ಗಾಯಗಳಾಗಿದ್ದು,ಚಾಲಕ ಯಾರೆಂಬುದು ತಿಳಿದು ಬಂದಿಲ್ಲ.

ಉಪ್ಪಿನಂಗಡಿ :ಲಾಡ್ಜ್ ನಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ

ಉಪ್ಪಿನಂಗಡಿ: ವ್ಯಕ್ತಿಯೋರ್ವ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ವಿಟ್ಲ ಮಾಡೂರು ನಿವಾಸಿ ಮಹಮ್ಮದ್ ಶರೀಫ್(37)ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಬೆಳಿಗ್ಗೆ 11:30 ಕ್ಕೆ ಲಾಡ್ಜ್ ನಲ್ಲಿ ರೂಂ ಪಡೆದಿದ್ದರು.ಆದರೆ ಇಂದು ಮಧ್ಯಾಹ್ನ ತನಕ ರೂಮ್ ಖಾಲಿ ಮಾಡದೇ ಇರುವ ಕಾರಣ ಹೋಟೆಲ್ ಮ್ಯಾನೇಜರ್ ಈ ಕುರಿತು ಪೊಲೀಸರಿಗೆ ವಿಷಯತಿಳಿಸಿದ್ದಾರೆ. ರೂಮ್ ಬಾಗಿಲು ತೆರೆದು ನೋಡಿದಾಗ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ರಾಷ್ಟೀಯ ಬಾಲ ಪುರಸ್ಕಾರ ಮುಡಿಗೇರಿಸಿಕೊಂಡ ಕರಾವಳಿಯ ಬಾಲಕಿ ರೆಮೊನಾ|ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತಾಡಿದ ಪ್ರತಿಭಾವಂತ ಬೆಡಗಿ |32 ಮಕ್ಕಳ ಪೈಕಿ ಈಕೆಯ ಪಾಲಿಗೆ ದಕ್ಕಿದೆ ಮೋದಿಯೊಂದಿಗೆ ಮಾತುಕತೆ

ಕರ್ನಾಟಕದ ಕರಾವಳಿಯ ಬಾಲಕಿಗೆ ಕೇಂದ್ರ ಸರಕಾರ ನೀಡುವ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವು ಲಭಿಸಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಈ ಬಾಲಕಿಗೆ ಮಾತನಾಡುವ ಅವಕಾಶ ದೊರೆತಿದೆ. ಕರ್ನಾಟಕದವರ ಪೈಕಿ‌ ಮೋದಿ ಜೊತೆ ಮಾತನಾಡುವ ಅವಕಾಶ ಈ ಬಾಲಕಿಗೆ ಮಾತ್ರ ದೊರಕಿದೆ. ದೇಶದಲ್ಲಿ ಒಟ್ಟು 32 ಮಕ್ಕಳು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇಂದು ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ವೀಡಿಯೋ …

ರಾಷ್ಟೀಯ ಬಾಲ ಪುರಸ್ಕಾರ ಮುಡಿಗೇರಿಸಿಕೊಂಡ ಕರಾವಳಿಯ ಬಾಲಕಿ ರೆಮೊನಾ|ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತಾಡಿದ ಪ್ರತಿಭಾವಂತ ಬೆಡಗಿ |32 ಮಕ್ಕಳ ಪೈಕಿ ಈಕೆಯ ಪಾಲಿಗೆ ದಕ್ಕಿದೆ ಮೋದಿಯೊಂದಿಗೆ ಮಾತುಕತೆ Read More »

ಮುಕ್ಕೂರು : ಪುಸ್ತಕ ಗೂಡು ಉದ್ಘಾಟನೆ

8 ಗ್ರಾ.ಪಂ.ನಲ್ಲಿ ಡಿಜಿಟಲ್ ಗ್ರಂಥಾಲಯ ಸೌಲಭ್ಯ : ಇಓ ಭವಾನಿಶಂಕರ ಎನ್ ಓದುವ ಅಭಿರುಚಿಗೆ ಪೂರಕ ಕಾರ್ಯ :ಗೋಪಾಲಕೃಷ್ಣ ಭಟ್ ಮನವಳಿಕೆ ಬೆಳ್ಳಾರೆ, ಜ. 26 : ಸುಳ್ಯ ತಾಲೂಕಿನ ಎಂಟು ಗ್ರಾ.ಪಂ.ಗಳಲ್ಲಿ ಡಿಜಿಟಲ್ ಗ್ರಂಥಾಲಯದ ಸೌಲಭ್ಯ ಇದ್ದು, ಇಲ್ಲಿ ಆನ್‍ಲೈನ್ ಮೂಲಕ ಪುಸ್ತಕ ಓದಲು ಅವಕಾಶವಿದೆ. ಗ್ರಾ.ಪಂ. ವ್ಯಾಪ್ತಿಯ ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳನ್ನು ತಂಡ-ತಂಡವಾಗಿ ವಿಭಾಗಿಸಿ ಡಿಜಿಟಲ್ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿ ಪರಿಚಯಿಸುವ ಕಾರ್ಯವು ನಡೆಯುತ್ತಿದೆ ಎಂದು ಸುಳ್ಯ ತಾ.ಪಂ.ಇಓ ಭವಾನಿಶಂಕರ ಎನ್ ಹೇಳಿದರು. …

ಮುಕ್ಕೂರು : ಪುಸ್ತಕ ಗೂಡು ಉದ್ಘಾಟನೆ Read More »

error: Content is protected !!
Scroll to Top