Bank Loan: ಯಾವುದೇ ಆಸ್ತಿ ಪತ್ರ ಇಟ್ಟು ಸಾಲ ಪಡೆದವರಿಗೆ RBIಯಿಂದ ಮುಖ್ಯ ಮಾಹಿತಿ!!

Bank loan: ಜನರು ತಮ್ಮ ಅವಶ್ಯಕತೆಗಳನ್ನು ಈಡೇರಿಸುವ ಸಲುವಾಗಿ ಬ್ಯಾಂಕ್ ಗಳಲ್ಲಿ ಸಣ್ಣ ಪುಟ್ಟ ಸಾಲ(Bank loan) ಮಾಡಿರುತ್ತಾರೆ. ಅದರಲ್ಲೂ ಹೆಚ್ಚಿನವರು ತಮ್ಮ ಜಮೀನು, ತೋಟ, ಸೈಟ್ ಅಥವಾ ಯಾವುದಾದರೂ ಆಸ್ತಿ ಪತ್ರಗಳನ್ನಿಟ್ಟು ಸಾಲ(Bank Loan) ಪಡೆದಿರುತ್ತಾರೆ. ಇದೀಗ ಇಂತವರಿಗೆ RBI ಹೊಸ ಸೂಚನೆ ನೀಡಿದೆ.

ಇದನ್ನೂ ಓದಿ: Actor Yash: ಬಾಲಿವುಡ್‌ ಸಿನಿಮಾ ʼರಾಮಾಯಣʼ ಚಿತ್ರಕ್ಕೆ ಯಶ್‌ ನಿರ್ಮಾಪಕ

ಹೌದು, ಬ್ಯಾಂಕಿಂಗ್ ವಿಚಾರವಾಗಿ ಆಗಾಗ ಹೊಸ ಬದಲಾವಣೆಯನ್ನು ತರುವ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಸಾಲ ಪಡೆದವರಿಗೆ ಅನುಕೂಲ ಆಗಲಿ ಎಂದು ಹೊಸ ಆದೇಶವನ್ನು ಹೊರಡಿಸಿದೆ. ಇದರಿಂದ ಮನೆಸಾಲ, ಗೃಹ ಸಾಲ ಪಡೆದವರೆಲ್ಲರಿಗೂ ಭರ್ಜರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ಇದನ್ನೂ ಓದಿ: Actress Manvita Kamath: ಟಗರು ಪೋರಿ ನಟಿ ಮಾನ್ವಿತಾ ಕಾಮತ್‌ಗೆ ಕಂಕಣಭಾಗ್ಯ

ಏನದು RBI ಹೊಸ ಆದೇಶ ?

ಅವಶ್ಯಕತೆಗಳ ಈಡೇರಿಕೆಗಾಗಿ ಜನರು ತಮ್ಮ ಆಸ್ತಿ ಅಡವಿಟ್ಟು ಸಾಲ ಪಡೆಯುತ್ತಾರೆ. ಅಂತಹ ಸಂದರ್ಭದಲ್ಲಿ ಆಸ್ತಿಯ ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಬೇಕು. ಸಾಲ ಮರು ಪಾವತಿಸಿದ ಬಳಿಕ ಬ್ಯಾಂಕಿನಲ್ಲಿಟ್ಟ ದಾಖಲಾತಿಗಳನ್ನು ಹಿಂಪಡೆಯಲು ನೀವು ಬ್ಯಾಂಕಿನಲ್ಲಿ ಪರದಾಡಬೇಕಾಗುತ್ತದೆ. ಸಾಲ ಸಿಗುವ ಕಾರಣಕ್ಕೆ ನೀವು ನೀಡುವ ಆಸ್ತಿ ದಾಖಲೆಗಳು ಅಷ್ಟೇ ಸುಲಭಕ್ಕೆ ವಾಪಾಸ್ಸು ನಿಮ್ಮ ಕೈ ಸೇರುವುದಿಲ್ಲ. ಹಾಗಾಗಿ RBI ಬ್ಯಾಂಕುಗಳಿಗೆ ಹೊಹ ಆದೇಶ ಹೊರಡಿಸಿದ್ದು ಹೊಸದಾಗಿ ಸಾಲ ಪಡೆದು ಅದನ್ನು ವಾಪಾಸ್ಸು ನೀಡಿದಾಗ ಅವರ ದಾಖಲಾತಿಯನ್ನು ಕೂಡ ಅಷ್ಟೇ ಶೀಘ್ರವಾಗಿ ಅವರಿಗೆ ವಾಪಾಸ್ಸು ನೀಡಬೇಕೆಂದು ತಿಳಿಸಿದೆ. ಇದರಿಂದ ಜನರು ಪದೇ ಪದೇ ಬ್ಯಾಂಕಿಗೆ ಅಲೆಯುವುದು ತಪ್ಪುತ್ತದೆ.

ಒಂದುವೇಳೆ RBI ನಿಯಮ ಹೊರಡಿಸಿದ ಬಳಿಕವೂ ಯಾವುದಾದರು ಬ್ಯಾಂಕ್ ಗ್ರಾಹಕರಿಗೆ ಆಸ್ತಿ ಪತ್ರ ನೀಡಲು ಸತಾಯಿಸಿದರೆ ಅಂತಹ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದೆ.

Leave A Reply

Your email address will not be published.