Actor Yash: ಬಾಲಿವುಡ್‌ ಸಿನಿಮಾ ʼರಾಮಾಯಣʼ ಚಿತ್ರಕ್ಕೆ ನಟ ಯಶ್‌ ನಿರ್ಮಾಪಕ

Actor Yash: ದಂಗಲ್‌ ಸಿನಿಮಾ ಖ್ಯಾತಿಯ ನಿತೀಶ್‌ ತಿವಾರಿ ಅವರು ಬಾಲಿವುಡ್‌ನಲ್ಲಿ ʼರಾಮಾಯಣʼ ಸಿನಿಮಾ ಮಾಡುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದರಲ್ಲಿ ರಣಬೀರ್‌ ಕಪೂರ್‌, ಸಾಯಿಪಲ್ಲವಿ ಅವರು ರಾಮ-ಸೀತೆ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಹಣ ಹಾಕಲಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಹುಕೋಟಿ ವೆಚ್ಚದ ಈ ಸಿನಿಮಾಗೆ ಯಶ್‌ ಕೂಡಾ ನಿರ್ಮಾಪಕ ಎಂದು ಅಧಿಕೃತ ಘೋಷಣೆ ಆಗಿದೆ.

ಇದನ್ನೂ ಓದಿ: Actress Manvita Kamath: ಟಗರು ಪೋರಿ ನಟಿ ಮಾನ್ವಿತಾ ಕಾಮತ್‌ಗೆ ಕಂಕಣಭಾಗ್ಯ

ಹನುಮಂತನಾಗಿ ಸನ್ನಿ ಡಿಯೋಲ್‌ ನಟಿಸಲಿದ್ದಾರೆ. ಕುಂಭಕರ್ಣನ ಪಾತ್ರಕ್ಕೆ ಬಾಬಿಡಿಯೋಲ್‌ ಅವರನ್ನು ಸಂಪರ್ಕ ಮಾಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ವಿಜಯ್‌ ಸೇತುಪತಿ ರಾವಣನ ಕಿರಿಯ ಸಹೋದರ ವಿಭೀಷಣನ ಪಾತ್ರವನ್ನು ಮಾಡಬಹುದು ಎಂದು ಹೇಳಲಾಗಿದೆ.

https://twitter.com/CinemaWithAB/status/1778685231199125739

ಎಪ್ರಿಲ್‌ 12ರಂದು ಯಶ್‌ ಅವರ ನಿರ್ಮಾಣ ಸಂಸ್ಥೆ ಮಾನ್ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ನಮಿತ್‌ ಮಲ್ಹೋತ್ರಾ ಅವರ ಪ್ರೈಮ್‌ ಫೋಕಸ್‌ ಜೊತೆ ʼರಾಮಾಯಣʼ ಚಿತ್ರಕ್ಕೆ ಬಂಡವಾಳ ಹೂಡಲಿದೆ ಎಂದು ಘೋಷಣೆ ಮಾಡಲಾಗಿದೆ. ಮುಂದಿನ ತಿಂಗಳಲ್ಲಿ ರಾಮಾಯಣದ ಪಾತ್ರವರ್ಗ, ಸಿಬ್ಬಂದಿಯನ್ನು ಹೇಳಲಾಗುವುದು. ಆದರೆ ರಾವಣನ ಪಾತ್ರ ಮಾಡುವವರು ಯಾರೆಂದು ಇನ್ನೂ ನಿಗೂಢವಾಗಿದೆ. ಬಲ್ಲ ಮೂಲಗಳಿಂದ ಈ ಪಾತ್ರವನ್ನು ಯಶ್‌ ಅವರೇ ಮಾಡುವುದಾಗಿ ಹೇಳಲಾಗಿದೆ.

ಇದನ್ನೂ ಓದಿ: Bengaluru: ಮಲ್ಲೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಎನ್ಐಎ

Leave A Reply

Your email address will not be published.