Praveen Chennavara

Praveen Chennavara Palthady village & post Kadaba Taluq D.K.-For contact- 7090806456

ಮುಕ್ಕೂರು : ಪುಸ್ತಕ ಗೂಡು ಉದ್ಘಾಟನೆ

8 ಗ್ರಾ.ಪಂ.ನಲ್ಲಿ ಡಿಜಿಟಲ್ ಗ್ರಂಥಾಲಯ ಸೌಲಭ್ಯ : ಇಓ ಭವಾನಿಶಂಕರ ಎನ್ ಓದುವ ಅಭಿರುಚಿಗೆ ಪೂರಕ ಕಾರ್ಯ :ಗೋಪಾಲಕೃಷ್ಣ ಭಟ್ ಮನವಳಿಕೆ ಬೆಳ್ಳಾರೆ, ಜ. 26 : ಸುಳ್ಯ ತಾಲೂಕಿನ ಎಂಟು ಗ್ರಾ.ಪಂ.ಗಳಲ್ಲಿ ಡಿಜಿಟಲ್ ಗ್ರಂಥಾಲಯದ ಸೌಲಭ್ಯ ಇದ್ದು, ಇಲ್ಲಿ ಆನ್‍ಲೈನ್ ಮೂಲಕ ಪುಸ್ತಕ ಓದಲು ಅವಕಾಶವಿದೆ. ಗ್ರಾ.ಪಂ. ವ್ಯಾಪ್ತಿಯ ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳನ್ನು ತಂಡ-ತಂಡವಾಗಿ ವಿಭಾಗಿಸಿ ಡಿಜಿಟಲ್ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿ ಪರಿಚಯಿಸುವ ಕಾರ್ಯವು ನಡೆಯುತ್ತಿದೆ ಎಂದು ಸುಳ್ಯ ತಾ.ಪಂ.ಇಓ ಭವಾನಿಶಂಕರ ಎನ್ ಹೇಳಿದರು. …

ಮುಕ್ಕೂರು : ಪುಸ್ತಕ ಗೂಡು ಉದ್ಘಾಟನೆ Read More »

ಕಡಬ : ನೆಡುತೋಪಿನಲ್ಲಿ ಗಿಡ ನೆಡುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ, ಗಂಭೀರ ಗಾಯ

ಕಡಬ‌ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳಕ್ಕ‌ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಬಳಕ್ಕ ಅರಣ್ಯ ಪ್ರದೇಶದಲ್ಲಿ ನೆಡುತೋಪಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಠಾತ್ತನೆ ಕಾಡಾನೆಯೊಂದು ದಾಳಿ ನಡೆಸಿದ್ದು ವ್ಯಕ್ತಿಯೊಬ್ಬರ ತಲೆ ಮತ್ತು ಸೊಂಟಕ್ಕೆ ಗಂಭೀರ ಗಾಯವಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರೇವಪ್ಪ ಎಂದು ಗುರುತಿಸಲಾಗಿದೆ. ಇವರು ಅರಣ್ಯ ಇಲಾಖೆಯಲ್ಲಿ ನೆಡುತೋಪುಗಳಲ್ಲಿ ಗಿಡ ನೆಡುವ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು …

ಕಡಬ : ನೆಡುತೋಪಿನಲ್ಲಿ ಗಿಡ ನೆಡುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ, ಗಂಭೀರ ಗಾಯ Read More »

ಕೇಸರಿ ಪೇಟ ತೊಡಿಸಲು ಬಂದ ಅಭಿಮಾನಿಯನ್ನು ಗದರಿಸಿ, ಪೇಟ ಎಸೆದ ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರಿಗೆ ಕೇಸರಿ ಪೇಟ ತೊಡಿಸಲು ಬಂದ ಅಭಿಮಾನಿಯನ್ನು ಗದರಿಸಿ,ಪೇಟ ಬಿಸಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಗಲಕೋಟೆ ಭೇಟಿ ವೇಳೆಯಲ್ಲಿ ಬಾದಾಮಿ ತಾಲೂಕಿನ ಕಾತರಕಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮ ಪಂಚಾಯತ್ ‌ನ ಕಟ್ಟಡ ಉದ್ಘಾಟನೆಗೆ ತೆರಳಿದ್ದರು. ಆ ವೇಳೆ ಅಭಿಮಾನಿಯೋರ್ವ ಕೇಸರಿ ಪೇಟ ತೊಡಿಸಲು ಬಂದಿದ್ದಾನೆ. ಸಿದ್ದರಾಮಯ್ಯನವರು ಬೇಡ ಎಂದು ನಿರಾಕರಿಸಿದ್ದಾರೆ. ಆದರೆ ಅಭಿಮಾನಿ ರುಮಾಲು ತಂದು ತಲೆಗೆ ಇಟ್ಟಿದ್ದಾನೆ. ಇದರಿಂದ ಸಿಟ್ಟುಗೊಂಡ ಸಿದ್ದರಾಮಯ್ಯನವರು ಅದನ್ನು ಕಿತ್ತೆಸೆದು ಅಭಿಮಾನಿ ವಿರುದ್ಧ ಗರಂ …

ಕೇಸರಿ ಪೇಟ ತೊಡಿಸಲು ಬಂದ ಅಭಿಮಾನಿಯನ್ನು ಗದರಿಸಿ, ಪೇಟ ಎಸೆದ ಮಾಜಿ ಸಿಎಂ ಸಿದ್ದರಾಮಯ್ಯ Read More »

ಖ್ಯಾತ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲ್ ನಿಧನ

ಕರೋಪಾಡಿ ಗ್ರಾಮದ ಬೇತ ನಿವಾಸಿ, ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್(83) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಜ.26ರಂದು ನಿಧನ ಹೊಂದಿದರು. ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಅವರು ಕುತ್ಯಾರು ಮೇಳ, ಸುಬ್ರಹ್ಮಣ್ಯ ಮೇಳ, ಇರಾ ಕುಂಡಾವು ಮೇಳ ಮತ್ತು ಬಪ್ಪನಾಡು ಮೇಳದಲ್ಲಿ ಸೇರಿ ಒಟ್ಟು 35 ವರ್ಷಗಳ ಕಾಲ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದರು. ಪರಂಪರೆಯ ದೇವೇಂದ್ರನ ಪಾತ್ರದಲ್ಲಿ ಎತ್ತಿದ ಕೈ ಆಗಿರುವ ಕುಂಞ ಕುಲಾಲ್ ಅವರನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಗೆನಾಡು ಶ್ರೀ …

ಖ್ಯಾತ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲ್ ನಿಧನ Read More »

ಚಾರ್ಮಾಡಿ : ಗುಡ್ಡಕ್ಕೆ ಬೆಂಕಿ ,ಸುಮಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ

ಗುಡ್ಡಕ್ಕೆ ಬೆಂಕಿ ತಗುಲಿ ಸುಮಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಮಲಯಮಾರುತ ಗುಡ್ಡದಲ್ಲಿ ನಡೆದಿದೆ. ಬಿರುಬಿಸಿಲಿಗೆ ಗುಡ್ಡಗಳೆಲ್ಲಾ ಒಣಗಿ ನಿಂತಿದೆ. ಮಲಯ ಮಾರುತ ಗುಡ್ಡ ವ್ಯೂ ಪಾಯಿಂಟ್ ಆಗಿರುವುದರಿಂದ ಪ್ರವಾಸಿಗರು ಯಾರೋ ಸಿಗರೇಟ್ ಸೇದಿ ಎಸೆದಿರುವುದರಿಂದ ಬೆಂಕಿ ತಗುಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಗುಡ್ಡಕ್ಕೆ ಬೆಂಕಿ ತಗುಲಿದೆ ಎಂದು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಅಧಿಕಾರಿಗಳು ಬೆಂಕಿಯನ್ನ ನಂದಿಸಿದ್ದಾರೆ. ರಸ್ತೆಯಿಂದ ಸುಮಾರು …

ಚಾರ್ಮಾಡಿ : ಗುಡ್ಡಕ್ಕೆ ಬೆಂಕಿ ,ಸುಮಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ Read More »

ಕಡಬ : ಬೆಳಂದೂರಿನಲ್ಲಿ ಮನೆಯಿಂದ ಕಳ್ಳತನ

ಬೆಳಂದೂರು ಸಮೀಪ ಗುಂಡಿನಾರು ಎಂಬಲ್ಲಿ ಹನೀಫ್ ಎಂಬವರ ಪುತ್ರಿ ಅಯಿಷತ್ ಹನ್ನತ್ ಮನೆಯಿಂದ ಕಳ್ಳತನ ನಡೆದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಬೆಳಂದೂರು ಗ್ರಾಮದ ಗುಂಡಿನಾರು ನಿವಾಸಿಯಾಗಿರುವ ಹನೀಫ್ ಎಂಬವರ ಪುತ್ರಿ ಅಯಿಷತ್ ಹನ್ನತ್ ಮನೆಯಲ್ಲಿ ಓರ್ವಳೆ ಇರುವ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು 12.30 ಗಂಟೆಗೆ ಹೆಲ್ಮೆಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ಬಂದು ಕುಡಿಯಲು ನೀರು ಕೇಳಿದ್ದು, ನೀರು ಕುಡಿದು ಅಲ್ಲಿಂದ ಅಪರಿಚಿತ ವ್ಯಕ್ತಿಯು ತೆರಳಿದ್ದ . ಬಳಿಕ ಅಯಿಷತ್ ಹನ್ನತ್ ಪಕ್ಕದ …

ಕಡಬ : ಬೆಳಂದೂರಿನಲ್ಲಿ ಮನೆಯಿಂದ ಕಳ್ಳತನ Read More »

ಮಾನವ ಕೂದಲು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ

ಮಾನವ ಕೂದಲಿನ ರಫ್ತಿನ ಮೇಲೆ ಕೇಂದ್ರ ಸರ್ಕಾರ ಮಂಗಳವಾರ ನಿರ್ಬಂಧಗಳನ್ನು ಹೇರಿದ್ದು, ಈ ಕ್ರಮವು ಭಾರತದಿಂದ ಕಳ್ಳಸಾಗಣೆ ಮಾಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೂದಲು ಉದ್ಯಮ ತಿಳಿಸಿದೆ. ಈ ಹಿಂದೆ ಯಾವುದೇ ನಿರ್ಬಂಧವಿಲ್ಲದೆ ಕೂದಲು ರಫ್ತಿಗೆ ಅವಕಾಶ ನೀಡಲಾಗಿತ್ತು. ಈಗ ರಫ್ತುದಾರರು ವಾಣಿಜ್ಯ ಸಚಿವಾಲಯದ ಅಡಿಯಲ್ಲಿರುವ ಡೈರೆಕರೇಟ್ ಜನರಲ್ ಆಫ್ ಫಾರಿನ್ ಟೇಡ್ (ಡಿಜಿಎಫ್‌ಟಿ) ನಿಂದ ಅನುಮತಿ ಅಥವಾ ಪರವಾನಗಿ ಪಡೆಯಬೇಕಾಗುತ್ತದೆ. ‘ಮಾನವ ಕೂದಲಿನ ರಫ್ತು ನೀತಿ, ತೊಳೆದಿರಲಿ ಅಥವಾ ತೊಳೆಯದಿರಲಿ ಮಾನವ ಕೂದಲಿನ ತ್ಯಾಜ್ಯ …

ಮಾನವ ಕೂದಲು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ Read More »

100 ರೂಪಾಯಿ ಖರೀದಿಸಿದ್ದ ವಿಮಾನದಿಂದ ಕೋಟಿಗಟ್ಟಲೆ ಆದಾಯ!

ಸಾಮಾನ್ಯವಾಗಿ ವಿಮಾನ ಪ್ರಯಾಣವನ್ನು ಎಂಜಾಯ್ ಮಾಡಲು ಬಯಸುತ್ತಾರೆ. ಹಾಗಾಗಿ ದುಬಾರಿಯಾದರು ಪರವಾಗಿಲ್ಲ ಉತ್ತಮ ವ್ಯವಸ್ಥೆಯನ್ನು ಹೊಂದಿರುವ ವಿಮಾನದಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಆದರೆ ಇಲ್ಲೊಂದು ವಿಮಾನವಿದೆ. ಈ ವಿಮಾನದಲ್ಲಿ ಪಾರ್ಟಿ ಮಾಡಲು ಅವಕಾಶವಿದೆ. ಬ್ರಿಟನ್‌ ಮೂಲದ ವ್ಯಕ್ತಿಯೊಬ್ಬರು ವಿಮಾನದಲ್ಲಿ ಬಾರ್‌ ತೆರೆದಿದ್ದಾರೆ. ಜೊತೆಗೆ ಎಂಜಾಯ್ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಬ್ರಿಟನ್ ಮೂಲದ ಸುಝನ್ನಾ ಹಾರ್ವೆ ಎಂಬ ವ್ಯಕ್ತಿ ಹಾಳಾದ ವಿಮಾನವನ್ನು ಖರೀದಿಸಿ ಈ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಬ್ರಿಟನ್ ಮೂಲದ ಸುಝಾ ಹಾರ್ವೆ ಎಂಬ ವ್ಯಕ್ತಿ ತ ಹಾಳಾದ …

100 ರೂಪಾಯಿ ಖರೀದಿಸಿದ್ದ ವಿಮಾನದಿಂದ ಕೋಟಿಗಟ್ಟಲೆ ಆದಾಯ! Read More »

ಕಡಬ: ಒಂದೇ ದಿನ ಐದು ಕಡೆ ನಡೆದ ಗ್ರಾಮ ಸಭೆ!|ಇಲಾಖಾಧಿಕಾರಿಗಳ ಭಾಗವಹಿಸುವಿಕೆಗೆ ಅಡ್ಡಿ

ಕಡಬ : ಕಡಬ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಒಂದೇ ದಿನ ಐದು ಕಡೆ ಗ್ರಾಮ ಸಭೆ ನಡೆದಿದ್ದು ಇಲಾಖಾಧಿಕಾರಿಗಳು ಬಹುತೇಕ ಕಡೆ ಭಾಗವಹಿಸಲು ಅಡ್ಡಿಯಾದ ಬಗ್ಗೆ ವರದಿಯಾಗಿದೆ.ಕಡಬ ತಾಲೂಕಿನ ಪೆರಾಬೆ, ಮರ್ದಾಳ, ಬಿಳಿನೆಲೆ, ಎಡಮಂಗಲ ಹಾಗೂ ಸುಬ್ರಹ್ಮಣ್ಯ ಗ್ರಾ.ಪಂ.ಗಳಲ್ಲಿ ಜ.೨೫ರಂದು ಒಂದೇ ದಿನ ಗ್ರಾಮಸಭೆ ನಡೆದಿದೆ. ಕೆಲವೆಡೆ ಇಲಾಖಾಧಿಕಾರಿಗಳು ಗೈರಾಗಿದ್ದು, ಒಂದೇ ದಿನ ಹಲವೆಡೆ ಗ್ರಾಮಸಭೆ ನಡೆಸಿರುವುದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಕೆಲವೆಡೆ ಅಧಿಕಾರಿಗಳು ಒಂದು ಕಡೆ ತಮ್ಮ ಮಾಹಿತಿ, ಪ್ರಶ್ನೋತ್ತರ ಮುಗಿಸಿ …

ಕಡಬ: ಒಂದೇ ದಿನ ಐದು ಕಡೆ ನಡೆದ ಗ್ರಾಮ ಸಭೆ!|ಇಲಾಖಾಧಿಕಾರಿಗಳ ಭಾಗವಹಿಸುವಿಕೆಗೆ ಅಡ್ಡಿ Read More »

ಕಡಬ: ಮದ್ಯದ ಅಮಲಿನಲ್ಲಿ ನಡು ರಸ್ತೆಯಲ್ಲಿ ಮಲಗಿದ ಯುವಕ: ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ

ಕಡಬ: ಅಮಲು ಪದಾರ್ಥ ಸೇವಿಸಿ ಯುವಕನೊಬ್ಬ ನಡು ರಸ್ತೆಯಲ್ಲಿ ಕೆಲ ಹೊತ್ತು ಮಲಗಿದ್ದು ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ ಘಟನೆ ಇಂದು ಕಡಬ ಪೇಟೆಯಲ್ಲಿ ನಡೆದಿದೆ.ಮುಖ್ಯ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲೇ ಮಲಗಿದ ಕಾರಣ ಸಾರ್ವಜನಿಕರು ,ವಾಹನ ಸವಾರರು ಗುಂಪು ಸೇರಿದ್ದರು.ಬಳಿಕ ಆಟೋಚಾಲಕರು ಆತನ ಮುಖಕ್ಕೆ ನೀರು ಹಾಕಿ ಎಬ್ಬಿಸಿ ಬೇರೆ ಕಡೆಗೆ ಶಿಪ್ಟ್ ಮಾಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿದ್ದರು. ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ದಿ ಉಂಟಾಗಿತ್ತು.

error: Content is protected !!
Scroll to Top