Praveen Chennavara

ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಭೇಟಿ

ಕಡಬ : ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ರವಿವಾರ ಭೇಟಿ ನೀಡಿದರು. ಕುಟುಂಬದ ಜೊತೆ ಆಗಮಿಸಿದ ಪೊಲೀಸ್ ಮಹಾ ನಿರ್ದೇಶಕರು, ಪತ್ನಿ, ಮಗಳು ಹಾಗೂ ಅಳಿಯ ಕ್ರಿಕೆಟ್ ಆಟಗಾರ ಮಾಯಾಂಕ್ ಅಗರ್ವಾಲ್ ಜೊತೆ ಜತೆಗಿದ್ದರು. ದೇವರ ದರ್ಶನ ಪಡೆದು ಕ್ಷೇತ್ರದಲ್ಲಿ ಆಶ್ಲೇಷ ಪೂಜೆ, ನಾಗಪ್ರತಿಷ್ಟೆ, ಮಹಾಪೂಜೆ ಸೇವೆ ನೇರವೇರಿಸಿದರು.

ಸದ್ಯದಲ್ಲೇ ಬರಲಿದೆ ವಾಟ್ಸಪ್ ನ ಹೊಸ ಫೀಚರ್ಸ್!!|ಯಾವ ರೀತಿಯ ಬದಲಾವಣೆ ಬರಲಿದೆ ಎಂಬುದರ ಬಗೆಗಿದೆ ಡೀಟೇಲ್ಸ್

ಜನರ ಮೆಚ್ಚಿನ ಸೋಶಿಯಲ್ ಮೀಡಿಯಾ ಆಗಿರುವ ವಾಟ್ಸ್ ಆಪ್ ಮೆಸೆಂಜರ್ ವಿಶೇಷ ಫೀಚರ್ಸ್ ಗಳನ್ನು ಬಿಡುಗಡೆ ಮಾಡಲಿದ್ದು, ಸದ್ಯದಲ್ಲೇ ಎಲ್ಲಾ ಗ್ರಾಹಕರಿಗೂ ಈ ಫೀಚರ್ಸ್ ಗಳು ಕೆಲಸ ಮಾಡಲಿದೆ. ಅವುಗಳೆಂದರೆ: *ವಾಯ್ಸ್ ಮೆಸೇಜ್ ಗಳು ಚಾಟ್ ಮುಚ್ಚಿದರೂ ವಾಯ್ಸ್ ಪ್ಲೇ ಆಗಲಿದೆ.*ಇನ್ಮುಂದೆ ಬೇರೆ ಆಪ್ ಗಳಂತೆ ವಾಟ್ಸ್ ಆಪ್ ನಲ್ಲಿಯೂ ಮೆಸೇಜ್ ಗಳಿಗೆ ಪ್ರತ್ಯೇಕವಾಗಿ ಎಮೋಜಿಗಳ ಮುಖಾಂತರ ರಿಪ್ಲೈ ಮಾಡಬಹುದು.*ವಾಟ್ಸ್ ಆಪ್ ನ ಬ್ಯಾಗ್ ರೌಂಡ್ ಕಲರ್ ಬದಲಿಸಲು ಹಾಗೂ ಹಸಿರು ಬಣ್ಣದ ಹೊಸ ಶೇಡ್ ಗಳನ್ನು …

ಸದ್ಯದಲ್ಲೇ ಬರಲಿದೆ ವಾಟ್ಸಪ್ ನ ಹೊಸ ಫೀಚರ್ಸ್!!|ಯಾವ ರೀತಿಯ ಬದಲಾವಣೆ ಬರಲಿದೆ ಎಂಬುದರ ಬಗೆಗಿದೆ ಡೀಟೇಲ್ಸ್ Read More »

ಕಡಬ : ಕುಂತೂರಿನ ಪುರಾತನ ಕೆದ್ದೋಟೆ ಕೆರೆ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಲು ಸುಖೇಶ್ ಒತ್ತಾಯ

ಕಡಬ: ಕುಂತೂರು ಗ್ರಾಮದಲ್ಲಿರುವ ಪುರಾತನ ಕೆದ್ದೋಟೆ ಕೆರೆಯ ಒತ್ತುವರಿ ಆಗಿದ್ದು ಇದನ್ನು ತೆರವುಗೊಳಿಸಿ ಕೆರೆ ಅಭಿವೃದ್ಧಿ ಹಾಗೂ ದೇವಸ್ಥಾನ ಅಭಿವೃದ್ಧಿಪಡಿಸಬೇಕೆಂದು ಕೆದ್ದೊಟ್ಟೆ ನಿವಾಸಿ ಸುಖೇಶ್ ಎಂಬವರು ಆಗ್ರಹಿಸಿದ್ದಾರೆ. ಅವರು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಐತಿಹಾಸಿಕ ಹಿನ್ನಲೆಯುಳ್ಳ ಕೆದ್ದೋಟೆ ಕೆರೆಯು ಸುಮಾರು 10 ಎಕ್ರೆ ಪ್ರದೇಶ ಇದ್ದು ಇದೀಗ ಕೆರೆ ಒತ್ತುವರಿ ಆಗಿ ಎರಡು ಮೂರು ಎಕ್ರೆ ಮಾತ್ರ ಇರಬಹುದು, ನಾನು ಈ ಬಗ್ಗೆ ಯಾವುದೇ ಶಾಸಕರಿಗೆ, ಸಚಿವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಬಳಿಕ ಪ್ರಧಾನಿಯವರ ಇ-ಸ್ಪಂಧನ ಆಪ್‌ನಲ್ಲಿ …

ಕಡಬ : ಕುಂತೂರಿನ ಪುರಾತನ ಕೆದ್ದೋಟೆ ಕೆರೆ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಲು ಸುಖೇಶ್ ಒತ್ತಾಯ Read More »

ಮಂಗಳೂರು : ದೈವಸ್ಥಾನ,ನಾಗನ ಬ್ರಹ್ಮಪೀಠಕ್ಕೆ ದುಷ್ಕರ್ಮಿಗಳಿಂದ ಹಾನಿ

ಮಂಗಳೂರು : ಬೈಕಂಪಾಡಿ ಕರ್ಕೇರ ಮೂಲ ಸ್ಥಾನ ಜರಂದಾಯ ದೈವಸ್ಥಾನ ಮತ್ತು ನಾಗನ ಬ್ರಹ್ಮ ಪೀಠವನ್ನು ದುಷ್ಕರ್ಮಿಗಳು ಹಾನಿಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಮುಂಜಾನೆ ದೈವಸ್ಥಾನಕ್ಕೆ ಭೇಟಿ ನೀಡಿದವರು ಇದನ್ನು ಗಮನಿಸಿ ಸಂಬಂಧಪಟ್ಟವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು,ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಂದು ನಾಗನ ಮೂರ್ತಿಯನ್ನು ಭಗ್ನ ಮಾಡಿದ್ದರೆ,ನಂದಿಯ ಕಲ್ಲಿನ ವಿಗ್ರಹಕ್ಕೂ ಹಾನಿ‌ಮಾಡಿದ್ದಾರೆ. ಕಪಾಟು ಒಡೆದು ಚೆಲ್ಲಾ ಪಿಲ್ಲಿ ಮಾಡಲಾಗಿದ್ದು, ಹಾಗೂ ಗೇಟುಗಳನ್ನು ಒಡೆದು ಹಾಕಿದ್ದಾರೆ.

ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರ ರಂಗಾಂತರಂಗ ಪುಸ್ತಕ ಬಿಡುಗಡೆ

ಕಾಸರಗೋಡು : ಎಡನೀರು ಮಠದಲ್ಲಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಬರೆದ , ಐದು ದಶಕಗಳ ಯಕ್ಷಗಾನ ತಿರುಗಾಟದ ಅನುಭವ ಇರುವ ಯಕ್ಷಗಾನದ ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ಕಲಾಪಯಣದ ಪುಸ್ತಕ “ರಂಗಾಂತರಂಗ”ವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಅನಾವರಣಗೊಳಿಸಿದರು. ತಮ್ಮ ಪೂರ್ವಾಶ್ರಮದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯರ ಬಳಿ ಕೆಲ ಸಮಯ ಚೆಂಡೆ ಮದ್ದಳೆ ಕಲಿತ ಸಂದರ್ಭವನ್ನು ನೆನಪಿಸಿ, ವಿಜಯದಶಮಿಯ ಈ ಪರ್ವ ಕಾಲದಲ್ಲಿ ಪುಸ್ತಕ ಬಿಡುಗಡೆಗೊಂಡದ್ದು ಸುಯೋಗವೆಂದರು. ಲಕ್ಷ್ಮೀಶ ಅಮ್ಮಣ್ಣಾಯರ ಮಠದ ಜತೆಗಿನ ದೀರ್ಘ ಕಾಲಿಕ …

ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರ ರಂಗಾಂತರಂಗ ಪುಸ್ತಕ ಬಿಡುಗಡೆ Read More »

ವಾಯುಭಾರ ಕುಸಿತ : ಕರಾವಳಿ,ಮಲೆನಾಡು ಸಹಿತ ಕರ್ನಾಟಕ,ಕೇರಳದಲ್ಲಿ ಭಾರಿ ಮಳೆ ಸಾಧ್ಯತೆ

ಕರ್ನಾಟಕದ ಮಲೆನಾಡು, ಕರಾವಳಿ, ಕೊಡಗು, ಬೆಂಗಳೂರು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲಿ ಮಳೆ ಹೆಚ್ಚಾಗಿದೆ. ಕರ್ನಾಟಕದ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಉತ್ತರ ಒಳನಾಡಿನಲ್ಲಿ ಇಂದು ಭಾರೀ ಮಳೆಯಾಗಲಿದೆ. ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ಹಾವೇರಿ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆ ಮುಂದುವರೆಯುವ …

ವಾಯುಭಾರ ಕುಸಿತ : ಕರಾವಳಿ,ಮಲೆನಾಡು ಸಹಿತ ಕರ್ನಾಟಕ,ಕೇರಳದಲ್ಲಿ ಭಾರಿ ಮಳೆ ಸಾಧ್ಯತೆ Read More »

ಪುತ್ತೂರು : ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕೋಳಿ ಸಾಗಾಟದ ಲಾರಿ | ರಸ್ತೆಯ ತುಂಬಾ ಕೋಳಿಗಳ ರಾಶಿ

ಪುತ್ತೂರು: ಬೆಳ್ಳಂಬೆಳಗ್ಗೆ ಕೋಳಿ ಸಾಗಾಟದ ಲಾರಿಯೊಂದು ಹೆಚ್.ಟಿ ವಿದ್ಯುತ್ ಲೈನಿಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಪುತ್ತೂರಿನ ಬೈಪಾಸ್ ನಲ್ಲಿ ಅ.17ರಂದು ನಡೆದಿದೆ. ಪುತ್ತೂರಿನ ಬೈಪಾಸ್ ನ ತೆಂಕಿಲದ ಬೈಪಾಸ್ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಅಪಘಾತದಿಂದ ನೂರಾರು ಕೋಳಿಗಳು ಮೃತಪಟ್ಟಿವೆ. ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಕೋಳಿಗಳನ್ನು ತುಂಬಿಸಿಕೊಂಡು ಬರುತಿದ್ದ ಲಾರಿ ತೆಂಕಿಲ-ಬಪ್ಪಳಿಗೆ ಕ್ರಾಸ್ ಬಳಿ ಲಾರಿ ಹೆಚ್.ಟಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಕೆಲವು ಕೋಳಿಗಳು ಮೃತಪಟ್ಟಿದ್ದು, ಜೀವಂತ ಕೋಳಿಗಳೆಲ್ಲ ರಸ್ತೆಯಲ್ಲಿ ತುಂಬಿ ಹೋಗಿತ್ತು. …

ಪುತ್ತೂರು : ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕೋಳಿ ಸಾಗಾಟದ ಲಾರಿ | ರಸ್ತೆಯ ತುಂಬಾ ಕೋಳಿಗಳ ರಾಶಿ Read More »

ಚಿಕ್ಕಪ್ಪನ ಮಗ ,ಪತ್ನಿಯ ಗುಂಡಿಟ್ಟು ಕೊಂದು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕ್ಷುಲ್ಲಕ ಕಾರಣಕ್ಕಾಗಿ ತನ್ನ ಚಿಕ್ಕಪ್ಪನ ಮಗ ಹಾಗೂ ತನ್ನ ಹೆಂಡತಿಯನ್ನು ಬಂದೂಕಿನಿಂದ ಗುಂಡಿಟ್ಟು ಕೊಂದು ನಂತರ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಕೊಡಗಿನ ಪೊನ್ನಂಪೇಟೆಯಲ್ಲಿ ನಡೆದಿದೆ. ಪೊನ್ನಂಪೇಟೆ ತಾಲೂಕು ಕಿರುಗೂರು ಗ್ರಾಮದ ಮಧು ಹಾಗೂ ಯಶೋದಾ ಗುಂಡೇಟಿನಿಂದ ಮೃತಪಟ್ಟ ದುರ್ದೈವಿಗಳು.ಬಳಿಕ ಆರೋಪಿ ಸಾಗರ್ ಕೆರೆಗೆ ಹಾರಿ ಪ್ರಾಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಈ ಕೃತ್ಯ ನಡೆದಿದ್ದು, ಎರಡು ಕುಟುಂಬಗಳ ಮಧ್ಯೆ ಅಡಿಕೆ ತೋಟಕ್ಕೆ ಸಂಬಂಧಪಟ್ಟಂತೆ ಹಲವಾರು ತಿಂಗಳುಗಳಿಂದ ವ್ಯಾಜ್ಯವಿತ್ತು. ಈ ವಿಷಯ …

ಚಿಕ್ಕಪ್ಪನ ಮಗ ,ಪತ್ನಿಯ ಗುಂಡಿಟ್ಟು ಕೊಂದು ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ Read More »

ಶಿರಾಡಿ : ರಸ್ತೆ ಬದಿಯ ಧರೆಗೆ ಲಾರಿ ಡಿಕ್ಕಿ | ಚಾಲಕ ಸಾವು

ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಲಾರಿಯೊಂದು ರಸ್ತೆ ಬದಿಯ ಗೋಡೆಗೆ ಬಡಿದು ಚಾಲಕ ಸಾವನ್ನಪಿದ ಘಟನೆ ಶನಿವಾರ ಮುಂಜಾನೆ ನಡೆದಿದೆ. ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ. ಮೃತ ಚಾಲಕನನ್ನು ಗೌರಿಬಿದನೂರಿನ ಮಂಜುನಾಥ ಎಂದು ಗುರುತಿಸಲಾಗಿದೆ. ಕ್ರೇನ್ ಸಹಾಯದಿಂದ ವಾಹನ ತೆರವು ಕಾರ್ಯ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಅನ್ಯಕೋಮಿನ ವ್ಯಕ್ತಿಯಿಂದ ಯುವಕನ ಮೇಲೆ ಬಲಾತ್ಕಾರ | ಸಲಿಂಗಕಾಮಿ ಹನೀಫ್ ಬಂಧನ

ಪುತ್ತೂರು : ಅನ್ಯಕೋಮಿನ ವ್ಯಕ್ತಿಯಿಂದ ಯುವಕನ ಮೇಲೆ ಅತ್ಯಾಚಾರ ನಡೆದ ಘಟನೆ ಪುತ್ತೂರಿನ ಮುರದಲ್ಲಿ ಬೆಳಕಿಗೆ ಬಂದಿದೆ. 20 ವರುಷದ ಯುವಕನೊಬ್ಬನ ಮೇಲೆ ಮುರ ನಿವಾಸಿ ಮಹಮ್ಮದ್ ಹನೀಫ್ (67ವ) ಬಲಾತ್ಕಾರ ಮಾಡಿ ಅತ್ಯಾಚಾರ ನಡೆಸಿದ ಘಟನೆ ತಿಳಿದು ಬಂದಿದೆ. ನಿತ್ಯವೂ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದ ಪ್ರಕರಣಗಳು ಕೇಳುತ್ತಲೇ ಇರುತ್ತೇವೆ. ಇದೀಗ ಇದಕ್ಕೆ ವಿರುದ್ಧವಾಗಿ ವ್ಯಕ್ತಿಯೋರ್ವ ತನ್ನದೇ ಲಿಂಗಕ್ಕೆ ಸೇರುವವರ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ಎಲ್ಲರಲ್ಲೂ ಆತಂಕವನ್ನು ಉಂಟುಮಾಡುವಂತಿದೆ. ಈ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಯುವಕನ …

ಅನ್ಯಕೋಮಿನ ವ್ಯಕ್ತಿಯಿಂದ ಯುವಕನ ಮೇಲೆ ಬಲಾತ್ಕಾರ | ಸಲಿಂಗಕಾಮಿ ಹನೀಫ್ ಬಂಧನ Read More »

error: Content is protected !!
Scroll to Top