ಮಂಗಳೂರು: ನಿನ್ನ ಮಗಳೊಂದಿಗೆ ರಸ್ತೆಯಲ್ಲಿ ಸಿಗು, ನಿನಗೂ ಹೊಡೆಯುತ್ತೇವೆ!!| ಖಾಸಗಿ ಮಾಧ್ಯಮ ನಡೆಸಿದ ಕಾರ್ಯಕ್ರಮವೊಂದರಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರೆಗೆ ಸಾರ್ವಜನಿಕವಾಗಿ ಬೆದರಿಕೆ
ಖಾಸಗಿ ಮಾಧ್ಯಮವೊಂದು ನಡೆಸಿದ ಡಿಬೇಟ್ ಕಾರ್ಯಕ್ರಮ ಒಂದಕ್ಕೆ ಕರೆ ಮಾಡಿದ ವ್ಯಕ್ತಿಯೊರ್ವ ಅತಿಥಿಯಾಗಿ ಚರ್ಚೆಯಲ್ಲಿ ಭಾಗವಹಿಸಿದ್ದ ರಾಜ್ಯ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಗೆ ನಡುರಸ್ತೆಯಲ್ಲಿ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲಿನ ಹಿಂದೂ ಸಂಘಟನೆಯ ಕಾರ್ಯಕರ್ತರ ನೈತಿಕ ಪೊಲೀಸ್ ಗಿರಿಯ ಬಗೆಗೆ ಖಾಸಗಿ ಮಾಧ್ಯಮ ನಡೆಸಿದ ಚರ್ಚಾ ಕೂಟದಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಪ್ರಶ್ನೆ ಕೇಳಲು ಮುಕ್ತ ಅವಕಾಶ ಮಾಡಿಕೊಡಲಾಗಿತ್ತು. ಈ ಕಾರ್ಯಕ್ರಮದಲ್ಲಿ …