ನಾಳೆಯಿಂದ ತನ್ನ ಎಟಿಎಂ ಸೇವೆ ನಿಲ್ಲಿಸಲಿದೆ ಈ ಬ್ಯಾಂಕ್ |ಇದಕ್ಕೆ ಕಾರಣವಾದರೂ ಏನು??

ಈಗಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಟೆಕ್ನಾಲಜಿಗೆ ಅವಲಂಬಿತರಾಗುತ್ತಾರೆ. ಎಲ್ಲಿ? ಹೇಗೆ? ಸಮಯ ಉಳಿತಾಯ ಮಾಡುವುದು ಎಂದು ನೋಡುತ್ತಿರುವ ಕಾಲಘಟ್ಟವಾಗಿದೆ.

ಬ್ಯಾಂಕ್​​ ಗ್ರಾಹಕರಿಗೆ ಎಟಿಎಂ ಕೇಂದ್ರಗಳು ಅತ್ಯಾಪ್ತ ಸ್ನೇಹಿತನಾಗಿ ಯಾವುದೋ ಕಾಲವಾಗಿದೆ. ಅದಿಲ್ಲದೆ ಬ್ಯಾಂಕ್​ ವಹಿವಾಟು ಕಷ್ಟ ಎನ್ನುವಂತಾಗಿದೆ ಪರಿಸ್ಥಿತಿ. ಹೀಗಿರುವಾಗ ಒಂದು ಬ್ಯಾಂಕ್ ತನ್ನ ಎಟಿಎಂ ಯಂತ್ರಗಳ ಸೇವೆಯನ್ನು ಬಂದ್ ಮಾಡಲು ಹೊರಟಿದೆ.

ಹೌದು ನಾಳೆ ಅಕ್ಟೋಬರ್​ 1ರಿಂದ ಸೂರ್ಯೋದಯ್ ಸ್ಮಾಲ್​ ಫಿನಾನ್ಸ್ ಬ್ಯಾಂಕ್ (Suryoday Small Finance Bank) ತನ್ನ ಎಟಿಎಂ ಯಂತ್ರಗಳು (ATMs) ಮೂಲಕ ಡೆಬಿಟ್​ ಕಾರ್ಡ್​ ಮತ್ತು ಕ್ರೆಡಿಟ್​ ಕಾರ್ಡ್​ಗಳ ವಹಿವಾಟನ್ನು ಸ್ಥಗಿತಗೊಳಿಸಲಿದೆ.

ಕೋವಿಡ್​ 19 ಅವಕೃಪೆಯಿಂದಾಗಿ 2021 ಜೂನ್​ 30 ರ ತ್ರೈಮಾಸಿಕ ವರದಿಯಲ್ಲಿ 48 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು,ಅದಕ್ಕೂ ಮುನ್ನ ವರ್ಷದ ಹಿಂದೆ 27 ಕೋಟಿ ರೂಪಾಯಿ ನಷ್ಟಕ್ಕೊಳಗಾಗಿತ್ತು.

ಸೂರ್ಯೋದಯ್ ಸ್ಮಾಲ್​ ಫಿನಾನ್ಸ್ ಬ್ಯಾಂಕ್ (SSF Bank) ಷೆಡ್ಯೂಲ್ಡ್​ ಕಮರ್ಷಿಯಲ್​ ಬ್ಯಾಂಕ್​ ಆಗಿದ್ದು 2017ರಿಂದ ಸೇವೆ ಒದಗಸುತ್ತಿದೆ. 13 ರಾಜ್ಯಗಳಲ್ಲಿ ಇದರ ಕಾರ್ಯಚಟುವಟಿಕೆ ವಿಸ್ತರಿಸಿದೆ. 555 ಬ್ಯಾಂಕ್​ ಬ್ರಾಂಚ್​​ಗಳು ಸೇವೆ ಒದಗಿಸುತ್ತಿವೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ಹೆಚ್ಚಾಗಿ ಕಾರ್ಯಗತವಾಗಿದೆ.

ಕಾರ್ಯಕಾರಿ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಆದರೂ SSF Bank ಬ್ಯಾಂಕ್​​ ಗ್ರಾಹಕರು ತಮ್ಮ ATM/Debit card ಗಳನ್ನು ಇತರೆ ಬ್ಯಾಂಕ್​​ಗಳ ATM ಕೇಂದ್ರಗಳಲ್ಲಿ ಬಳಕೆ ಮಾಡಬಹುದು ಎಂದು ಬ್ಯಾಂಕ್​ ತನ್ನ ವೆಬ್​ಸೈಟ್​​ನಲ್ಲಿ ತಿಳಿಸಿದೆ. ಆದರೂ SSF ಬ್ಯಾಂಕ್​ನ ಇತರೆ ಇಂಟರ್ನೆಟ್​ ಬ್ಯಾಂಕಿಂಗ್​ ಸೇವೆಗಳು ಅಬಾಧಿತವಾಗಿ ಮುಂದುವರಿಯಲಿದೆ.

SSF Bank ಬ್ಯಾಂಕ್ ಕಳೆದ ತಿಂಗಳು ತನ್ನ ಷೇರುದಾರರ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸುವಾಗ ಭವಿಷ್ಯದಲ್ಲಿ ತನ್ನ ಗ್ರಾಹಕರಿಗೆ ಇನ್ನೂ ಹೆಚ್ಚಿನ ಮೌಲ್ಯಯುತ ಸೇವೆ ಒದಗಿಸಿವಂತಾಗಲು ಈ ನಿರ್ಣಾಯ ಅನಿವಾರ್ಯ ಎಂದು ತಿಳಿಸಿತ್ತು.

Leave A Reply

Your email address will not be published.