ಮತ್ತೆ ಗುಟುರು ಹಾಕಲಿದೆ ಒಂದು ಕಾಲದ ರಸ್ತೆಯ ರಾಜ ಅಂಬಾಸಿಡರ್ | ಜನತೆಯ ಜೀವನಾಡಿಯಾಗಿದ್ದ ಆ್ಯಂಬಿ ವರ್ಶನ್ 2.0 ಬರ್ತ್ತಾವ್ನೆ ಸೈಡ್ ಪ್ಲೀಸ್
ಅಣ್ಣ ಮತ್ತೆ ಬತ್ತಾವ್ನೆ. ತನ್ನ ಗಟ್ಟಿ ದೇಹದಿಂದ, ರಸ್ತೆಯ ಆಳ ಅಗಲಗಳ ಹಳೆಯ ಅನುಭವಗಳಿಂದ ಕಾರು ಮಾರುಕಟ್ಟೆಯಲ್ಲಿ ಕೆಲವು ದಶಕಗಳ ಕಾಲ ಆಳಿ ಈಗ ಮರೆಗೆ ಸರಿದಿರುವ ಅಂಬಾಸಡರ್ ಕಾರು ಮತ್ತೆ ಹೊಸ ರೂಪದಲ್ಲಿ ಬರಲಿದೆ. ವರ್ಷನ್-2.0 ರಸ್ತೆಗೆ ಇಳಿಯಲು ಸಜ್ಜಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಕಾರು ರಸ್ತೆಗೆ ಇಳಿಯಲಿದೆ ಎನ್ನಲಾಗಿದೆ. ಹಿಂಡ್ ಮೋಟಾರ್ ಫೈನಾನ್ಶಿಯಲ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಚ್ಎಂಎಫ್ಸಿಐ) ಮತ್ತು ಫ್ರೆಂಚ್ ಕಾರು ಕಂಪೆನಿ ಪಝೋಟ್ “ಆ್ಯಂಬಿ’ಯ ಹೊಸ ನೂತನ ವಿನ್ಯಾಸ ಮತ್ತು …