ನ.1 ರಿಂದ ಅಯೋಧ್ಯೆ ರಾಮಮಂದಿರ ದರ್ಶನ ಸೇವೆ ವೇಳಾಪಟ್ಟಿಯಲ್ಲಿ ಬದಲಾವಣೆ
ಅಯೋಧ್ಯೆ: ಚಳಿಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ದರ್ಶನ ಹಾಗೂ ಸೇವೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ನ.1 ರಿಂದ ಈ ನೂತನ ವೇಳಾಪಟ್ಟಿ ಅನ್ವಯವಾಗಲಿದ್ದು, ಅಂದಿನಿಂದ ದೇವಾಲಯವು ಬೆಳಗ್ಗೆ 4 ಗಂಟೆಗೆ ತೆರೆಯಲಿದ್ದು, ರಾತ್ರಿ 10ಕ್ಕೆ ಮುಚ್ಚಲಿದೆ.
Sponsoredಪ್ರಸ್ತುತ ಬೆಳಗ್ಗೆ 3.45ಕ್ಕೆ ತೆರೆಯಲಿರುವ ದೇವಾಲಯ ರಾತ್ರಿ 10.30ಕ್ಕೆ ಮುಚ್ಚಲ್ಪಡುತ್ತಿದೆ. ಪ್ರಮುಖ ಆರತಿಗಳು ಬೆಳಗ್ಗೆ 4.30ರಿಂದ 4.40ರವರೆಗೆ, ಮಧ್ಯಾಹ್ನ 12ಗಂಟೆಗೆ, ಸಂಜೆ 7ಕ್ಕೆ, ರಾತ್ರಿ 9.30ಕ್ಕೆ ನಡೆಯಲಿದೆ ಎಂದು ದೇವಾಲಯ ಟ್ರಸ್ಟ್ ತಿಳಿಸಿದೆ.




