ಇಂದಿನಿಂದ ಕುಕ್ಕೇ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವ!! ಪ್ರತೀ ವರ್ಷವೂ ಕುಕ್ಕೇ ಜಾತ್ರೆಗೆ ಬರುವ ವಿಶೇಷ ಅತಿಥಿಗಳು ಯಾರು-ಮೊದಲು ಪೂಜೆ ಸಲ್ಲಿಸುವುದೆಲ್ಲಿ!?
ಇಂದಿನಿಂದ ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ, ಸರ್ಪಸಂಸ್ಕಾರಕ್ಕೆ ಹೆಸರುವಾಸಿಯಾದ, ಅನಾದಿ ಕಾಲದಿಂದಲೂ ತುಳುನಾಡನ್ನು ಸಲಹುತ್ತ, ಅತೀ ಹೆಚ್ಚು ಆದಾಯ ತಂದುಕೊಡುವ ಶ್ರೀಮಂತ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಮಹೋತ್ಸವದ ಸಂಭ್ರಮ. ವಿದ್ಯುತ್ ಅಲಂಕಾರದಿಂದ ಕೂಡಿದ ರಥಬೀದಿ, ಭಕ್ತರನ್ನು ತನ್ನೆಡೆಗೆ ಆಕರ್ಷಸಲು ಸಾಲು ಸಾಲು ವೈವಿಧ್ಯಮಯ ಆಕರ್ಷಣೆಗಳು.ನಿನ್ನೆಯ ದಿನ ಅಂದರೆ ನವೆಂಬರ್ 30 ರಂದು ಮೂಲವೃತ್ತಿಕೆ ಪ್ರಸಾದ ತೆಗೆದು,ಇಂದಿನಿಂದ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ.ಇಂದು ಕೊಪ್ಪರಿಗೆ ಏರಿ ರಾತ್ರಿ ಶೇಷಷಯನಯುಕ್ತ ಬಂಡಿ ಉತ್ಸವ. …