ಕಾರ್ಕಳ : ಕಲ್ಲಿನ ಕೋರೆಯಲ್ಲಿ ಸ್ಪೋಟ ,ಇಬ್ಬರು ಕಾರ್ಮಿಕರು ಗಂಭೀರ

ಕಾರ್ಕಳ:ಇಲ್ಲಿನ ಜಾರ್ಕಳದ ಕಲ್ಲಿನ ಕ್ವಾರೇಯಲ್ಲಿ ಸ್ಫೋಟ ಸಂಭವಿಸಿ, ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ.

ಗಾಯಾಳುಗಳನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಕಾರ್ಮಿಕರಾದ ತಮಿಳುನಾಡು ಮೂಲದ ಮಂಜುನಾಥ (44), ರಾಘವೇಂದ್ರ(40) ಎಂದು ಗುರುತಿಸಲಾಗಿದೆ.

ಮಂಗಳವಾರ ಈ ಘಟನೆ ನಡೆದಿದೆ.ಕ್ವಾರೆಯ ಕಾಮಗಾರಿಯಲ್ಲಿ ಕಲ್ಲು ಒಡೆಯಲು ಸ್ಪೋಟಕಗಳನ್ನು ಬಳಸಲಾಗುತ್ತಿದ್ದು, ರಾಸಾಯನಿಕ ವಸ್ತುಗಳ ಬಳಕೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸದೇ ಹೋಗಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸ್ಫೋಟದ ಶಬ್ದ ಕೇಳಿ ಘಟನಾ ಸ್ಥಳಕ್ಕೆ ಸ್ಥಳೀಯರು ಆಗಮಿಸಿ,ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.