Nishan Bangera

ಬೆಳ್ತಂಗಡಿ:ಮೊಗೆರಡ್ಕ ಬಳಿ ಕಾರು ಪಲ್ಟಿ|ತಪ್ಪಿದ ಬಾರಿ ಅನಾಹುತ

ಬೆಳ್ತಂಗಡಿ:ಗರ್ಡಡಿ ಮೊಗೆರಡ್ಕ ಬಳಿ ಕಾರು ಪಲ್ಟಿ ಆದ ಘಟನೆ ಸಂಜೆವೇಳೆ ಸಂಭವಿಸಿದೆ. ಕಾರು ಅತಿಯಾದ ವೇಗದಲ್ಲಿ ಚಲಾಯಿಸುತಿದ್ದರಿಂದ ಈ ಘಟನೆ ಸಂಭವಿಸಿದೆ.ಅಲ್ಪ ಸ್ವಲ್ಪ ಗಾಯಗಳಾಗಿದ್ದು,ಚಾಲಕ ಯಾರೆಂಬುದು ತಿಳಿದು ಬಂದಿಲ್ಲ.

ಉಪ್ಪಿನಂಗಡಿ :ಲಾಡ್ಜ್ ನಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ

ಉಪ್ಪಿನಂಗಡಿ: ವ್ಯಕ್ತಿಯೋರ್ವ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ವಿಟ್ಲ ಮಾಡೂರು ನಿವಾಸಿ ಮಹಮ್ಮದ್ ಶರೀಫ್(37)ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಬೆಳಿಗ್ಗೆ 11:30 ಕ್ಕೆ ಲಾಡ್ಜ್ ನಲ್ಲಿ ರೂಂ ಪಡೆದಿದ್ದರು.ಆದರೆ ಇಂದು ಮಧ್ಯಾಹ್ನ ತನಕ ರೂಮ್ ಖಾಲಿ ಮಾಡದೇ ಇರುವ ಕಾರಣ ಹೋಟೆಲ್ ಮ್ಯಾನೇಜರ್ ಈ ಕುರಿತು ಪೊಲೀಸರಿಗೆ ವಿಷಯತಿಳಿಸಿದ್ದಾರೆ. ರೂಮ್ ಬಾಗಿಲು ತೆರೆದು ನೋಡಿದಾಗ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಕಾರ್ಕಳ:ಕಾರು ಹಾಗೂ ಆಟೋ ನಡುವೆ ಭೀಕರ ಅಪಘಾತ|ಆಟೋ ಚಾಲಕ ಸ್ಥಳದಲ್ಲೇ ಸಾವು

ಕಾರ್ಕಳ: ಮಿಯ್ಯಾರು ಚರ್ಚಿನ ಬಳಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಓರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರು ಘಟನೆಯಲ್ಲಿ ಆಟೋ ಚಾಲಕ ಚಂದ್ರಶೇಖರ ಸಾವನ್ನಪ್ಪಿದ್ದು,ಅವರ ಸಹೋದರ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರ ಸಹೋದರರಿಗೆ ಅನಾರೋಗ್ಯ ಇದ್ದ ಕಾರಣ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು,ಅಪಘಾತದ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು,ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

ಕಾರ್ಕಳ:ಕಾರು ಹಾಗೂ ಆಟೋ ನಡುವೆ ಭೀಕರ ಅಪಘಾತ|ಆಟೋ ಚಾಲಕ ಸ್ಥಳದಲ್ಲೇ ಸಾವು Read More »

ಸರ್ಕಾರಿ ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿದ ಪ್ರಕರಣ|ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ

ಕೋಲಾರ : ಸರ್ಕಾರಿ ಶಾಲೆ ಕೊಠಡಿಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದ ಬಳೆ ಚಂಗಪ್ಪ ಸರ್ಕಾರಿ ಶಾಲೆ ಕೊಠಡಿಯಲ್ಲಿ ಜನವರಿ 21 ರಂದು ವಿದ್ಯಾರ್ಥಿಗಳು ನಮಾಜ್ ಮಾಡಿದ್ದರು. ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕಿ ಉಮಾದೇವಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬೆಳ್ತಂಗಡಿ:ಗುರುವಾಯನಕೆರೆ-ಕಾರ್ಕಳ ರೋಡ್ ಬಳಿ ಹೊಂಡಕ್ಕೆ ಬಿದ್ದ ಕಾರು|ಪ್ರಯಾಣಿಕರು ಅಪಾಯದಿಂದ ಪಾರು

ಬೆಳ್ತಂಗಡಿ: ಗುರುವಾಯನಕೆರೆ-ಕಾರ್ಕಳ ರೋಡ್ ಹತ್ತಿರವಿರುವ ಹೊಂಡಕ್ಕೆ ಕಾರು ಬಿದ್ದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಗುರುವಾಯನಕೆರೆ ಕೆರೆಯ ಎದುರಿನ ಹೊಂಡಕ್ಕೆ ಕಾರು ಬಿದ್ದು ಪಲ್ಟಿಯಾಗಿದೆ.ಮದುವೆ ಹೋಗುವ ಕಾರು ಎಂದು ತಿಳಿದು ಬಂದಿದೆ. ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಕರಿದ್ದು,ಅಲ್ಪ ಸ್ವಲ್ಪ ಗಾಯಗಳಾಗಿದೆ.

‘UPTET’ಪರೀಕ್ಷೆ ಬರೆಯಲು ಹೊರಟ ಗರ್ಭಿಣಿ ಹೆಣ್ಣು ಮಗುವಿಗೆ ಜನನ|ಮಗುವಿಗೆ ‘TET’ ಎಂದು ನಾಮಕರಣ

ಉತ್ತರ ಪ್ರದೇಶ: ಗರ್ಭಿಣಿಯೋರ್ವಳು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ತೆರಳಿದ್ದ ವೇಳೆ ಮುದ್ದಾದ ಮಗುವಿಗೆ ಜನ್ಮ ನೀಡಿದ್ದು, ಅದಕ್ಕೆ TET ಎಂದು ನಾಮಕರಣ ಮಾಡಿದ ಅಪರೂಪದ ಘಟನೆ ಉತ್ತರ ಪ್ರದೇಶದ ಅಮ್ರೋಹ್​​​ದಲ್ಲಿ ನಡೆದಿದೆ. ಭಾನುವಾರ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ UPTET ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆ ಬರೆಯುತ್ತಿದ್ದಾಗ,ಗರ್ಭಿಣಿ ಮಹಿಳೆಯೋರ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಉತ್ತರ ಪ್ರದೇಶ ಗಜರೌಲಾದ ರಮಾಬಾಯಿ …

‘UPTET’ಪರೀಕ್ಷೆ ಬರೆಯಲು ಹೊರಟ ಗರ್ಭಿಣಿ ಹೆಣ್ಣು ಮಗುವಿಗೆ ಜನನ|ಮಗುವಿಗೆ ‘TET’ ಎಂದು ನಾಮಕರಣ Read More »

ಸುಳ್ಯ:25ಕ್ಕೂ ಹೆಚ್ಚು ದನಗಳನ್ನು ಲಾರಿಯಲ್ಲಿ ಸಾಗಾಟ|ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ವೇಳೆ ಪತ್ತೆ

ಸುಳ್ಯ: ಈಚರ್ ಲಾರಿಯೊಂದರಲ್ಲಿ 25ಕ್ಕೂ ಹೆಚ್ಚು ದನಗಳು,ಸುಳ್ಯ ಹಾಗೂ ಮಡಿಕೇರಿಯ ಗಡಿಪ್ರದೇಶವಾದ ಸಂಪಾಜೆ ಗೇಟಿನಲ್ಲಿ ವಾಹನತಪಾಸಣೆ ಸಂದರ್ಭ ಪತ್ತೆಯಾದ ಘಟನೆ ಇಂದು ನಡೆದಿದೆ. ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿದನಗಳನ್ನು ಸಾಗಿಸುತ್ತಿದ್ದು,ಸಂಪಾಜೆಗೇಟಿನಲ್ಲಿ ಸಿಬ್ಬಂದಿಗಳು ವಿಚಾರಣೆ ನಡೆಸಿದಾಗಇದು ದನದ ಫುಡ್ ಸಾಗಾಟ ಎಂದು ಚಾಲಕಹೇಳಿದ್ದಾನೆ. ಆದರೆ ಆತನ ಮಾತಿನಿಂದ ಅನುಮಾನಗೊಂಡು ಗೇಟಿನ ಸಿಬ್ಬಂದಿಗಳು ಲಾರಿಯ ಒಳಗೆ ಇಣುಕಿ ನೋಡಿದಾಗದನದ ಫುಡ್ ನ ಜತೆಗೆ 25 ಕ್ಕೂ ಹೆಚ್ಚು ದನಗಳುಕಂಡು ಬಂದಿವೆ. ಈ ವಿಚಾರವಾಗಿ ಚಾಲಕನನ್ನು ಮತ್ತಷ್ಟು ಪ್ರಶ್ನೆಮಾಡಿದಾಗ ಆತ …

ಸುಳ್ಯ:25ಕ್ಕೂ ಹೆಚ್ಚು ದನಗಳನ್ನು ಲಾರಿಯಲ್ಲಿ ಸಾಗಾಟ|ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ವೇಳೆ ಪತ್ತೆ Read More »

ಸುಳ್ಯ:ಬೈಕ್ ಹಾಗೂ ಸ್ಕೂಟರ್ ನಡುವೆ ಅಪಘಾತ|ಬೈಕ್ ಸವಾರನಿಗೆ ಗಾಯ

ಸುಳ್ಯ: ಬೈಕ್ ಹಾಗೂ ಸ್ಕೂಟರ್ ನಡುವೆ ಅಪಘಾತವಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಪ್ರೀತೇಶ್ ಕಾಡುಸೊರಂಜ ಎಂಬುವವರು ಗಾಯಗೊಂಡ ಬೈಕ್ ಸವಾರಎಂದು ಗುರುತಿಸಲಾಗಿದೆ.ಇವರು ಸುಳ್ಯದಿಂದ ಹಳೆಗೇಟು ಕಡೆಗೆ ತೆರಳುತ್ತಿದ್ದ ಸಂದರ್ಭ ವಿರುದ್ಧ ದಿಕ್ಕಿನಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಬೆಳ್ತಂಗಡಿ:ಕಾಸರಗೋಡಿನ ವ್ಯಕ್ತಿ ಉಜಿರೆ ಕಡೆ ಬಂದವರು ನಾಪತ್ತೆ

ಕಾಸರಗೋಡು:ಕೇರಳದ ವ್ಯಕ್ತಿಯೊಬ್ಬರು ಬೆಳ್ತಂಗಡಿ, ಉಜಿರೆಗೆ ಹೋಗಿ ಬರುತ್ತೇನೆಂದು ತೆರಳಿದವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ. ಕಾಣೆಯಾದ ವ್ಯಕ್ತಿ ಮೂಲತಃ ಕಾಸರಗೋಡಿನ ವಿಲ್ಸನ್(60) ಎಂದು ತಿಳಿದು ಬಂದಿದ್ದು,ಕಳೆದ ಮೂರು ದಿನಗಳ ಹಿಂದೆ ಕಾಸರಗೋಡಿನಿಂದ ಹೊರಟಿದ್ದು, ಇತ್ತ ಬೆಳ್ತಂಗಡಿಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ವ್ಯಕ್ತಿಯ ಮನೆಯವರು ಇವರು ಉಜಿರೆ,ಧರ್ಮಸ್ಥಳಕಡೆ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಸಾರ್ವಜನಿಕರು ಈ ವ್ಯಕ್ತಿ ಕಂಡು ಬಂದರೆ ತಕ್ಷಣಹತ್ತಿರದ ಪೊಲೀಸ್ ಠಾಣೆಗೆ ಅಥವಾ ಮನೆಯವರ9847116660 ಈ ನಂಬರಿಗೆ ಕರೆ ಮಾಡಬೇಕಾಗಿ ಕೇಳಿ ಕೊಂಡಿದ್ದಾರೆ.ಈಗಾಗಲೇ …

ಬೆಳ್ತಂಗಡಿ:ಕಾಸರಗೋಡಿನ ವ್ಯಕ್ತಿ ಉಜಿರೆ ಕಡೆ ಬಂದವರು ನಾಪತ್ತೆ Read More »

ಪತ್ನಿ ಮತಾಂತರಕ್ಕೆ ಪತಿಯಿಂದಲೇ ಒತ್ತಾಯ|ಆಕೆ ನಿರಾಕರಿಸಿದ್ದಕ್ಕೆ ಕಿರುಕುಳ ನೀಡಿದ ಪತಿ |ನೊಂದ ಮಹಿಳೆಯಿಂದ ಪೊಲೀಸರಿಗೆ ದೂರು

ಶಿವಮೊಗ್ಗ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಪತ್ನಿಗೆ ಒತ್ತಾಯಿಸಿದ್ದು, ಆಕೆ ನಿರಾಕರಿಸಿದ್ದರಿಂದ ಪತಿಯೇ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿತ್ಲ ಸಮೀಪದ ಮಾಡ್ರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಗಂಡನ ವಿರುದ್ಧ ನೊಂದ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ಗ್ರಾಮದ ದೇವಾಲಯದಲ್ಲಿ ಪೂಜೆ ಮಾಡಿಕೊಂಡಿದ್ದ, ಬಳಿಕ ಆಮಿಷಕ್ಕೆ ಒಳಗಾಗಿ ಮೂರು ತಿಂಗಳ ಹಿಂದೆ ಮತಾಂತರವಾಗಿದ್ದಾರೆ.ಇದೀಗ ಮನೆಯವರಿಗೂ ಮತಾಂತರವಾಗುವಂತೆಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ‘ಕಳೆದ ಮೂರು ತಿಂಗಳಿನಿಂದ ಪತಿ ಮತಾಂತರಕ್ಕೆ ಕಿರುಕುಳ ನೀಡುತ್ತಿದ್ದಾನೆ. ಮತಾಂತರವಾಗದಿದ್ದರೆ …

ಪತ್ನಿ ಮತಾಂತರಕ್ಕೆ ಪತಿಯಿಂದಲೇ ಒತ್ತಾಯ|ಆಕೆ ನಿರಾಕರಿಸಿದ್ದಕ್ಕೆ ಕಿರುಕುಳ ನೀಡಿದ ಪತಿ |ನೊಂದ ಮಹಿಳೆಯಿಂದ ಪೊಲೀಸರಿಗೆ ದೂರು Read More »

error: Content is protected !!
Scroll to Top