DL Smart Card: ವಾಹನ ಸವಾರರೇ, ನಿಮಗಿದೋ ಮಹತ್ವದ ಸುದ್ದಿ! DL ಗೆ ಸಂಬಂಧಪಟ್ಟಂತೆ ಬಂತು ನೋಡಿ ಮಹತ್ವದ ಘೋಷಣೆ!!!

latest news DL Smart card Vehicle riders Imporant information about DL

DL Smart card: ನೀವು ದ್ವಿಚಕ್ರ (two wheeler) ಅಥವಾ ನಾಲ್ಕು ಚಕ್ರದ (Four wheeler vehicle) ವಾಹನವನ್ನು ಓಡಿಸಲು ಬೇಕೇ ಬೇಕಾಗಿರುವ ಡ್ರೈವಿಂಗ್ ಲೈಸೆನ್ಸ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸುದ್ದಿಯೊಂದಿದೆ. ಕೇಂದ್ರ ಸರ್ಕಾರವು DLಗೆ ಸಂಬಂಧಪಟ್ಟಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಇಲ್ಲಿಯವರೆಗೆ ಡ್ರೈವಿಂಗ್ ಲೈಸೆನ್ಸ್ ಗಳನ್ನು ಸ್ಮಾರ್ಟ್ ಕಾರ್ಡ್ (DL Smart card) ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ, ಲ್ಯಾಮಿನೇಟೆಡ್ ಪ್ರತಿಯಲ್ಲಿ ನೀಡುವಂತೆ ಸರಕಾರ ಸೂಚಿಸಿದೆ.

ಹೌದು, ಕೆಲವು ರಾಜ್ಯಗಳಲ್ಲಿ ವಾಹನಗಳ ನೋಂದಣಿ ( Vehicle Registration Certificate – RC ) ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ನೀಡುತ್ತಿದ್ದರು. ಇದೀಗ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಇದಕ್ಕೆ ಬ್ರೇಕ್ ಹಾಕಿದ್ದು, ಇನ್ಮುಂದೆ ಲ್ಮಾಮಿನೇಟೆಡ್ ಪ್ರತಿಯ ರೂಪದಲ್ಲಿ ನೀಡುವಂತೆ ಆದೇಶಿಸಿದೆ.

ಕೇಂದ್ರ ಮೋಟಾರು ವಾಹನ ನಿಯಮ 1989(CMVR) ಪ್ರಕಾರ ಡಿಎಲ್ ಹಾಗೂ ಆರ್ ಸಿ ಕಾರ್ಡ್ ವಿತರಣೆ ಮಾಡುತ್ತಿಲ್ಲ. ನಿಯಮದ ಅನ್ವಯ ಲ್ಯಾಮಿನೇಟೆಡ್ ಕಾರ್ಡ್ ರೂಪದಲ್ಲೇ ಕೊಡಬೇಕು. ಚಿಪ್ ಆಧಾರಿತ ಅಥವಾ ಸ್ಮಾರ್ಟ್ ಕಾರ್ಡ್ (smart card) ರೂಪದಲ್ಲಿ ವಿತರಣೆಗೆ ಅವಕಾಶವಿಲ್ಲ. ಆದರೂ ಕೆಲ ರಾಜ್ಯಗಳು, ಕೇಂದ್ರ ಮೋಟಾರು ವಾಹನ ನಿಯಮ ಪಾಲಿಸದೇ, ಸ್ಮಾರ್ಟ್ ಕಾರ್ಡ್ ವಿತರಿಸುತ್ತಿವೆ. ಈ ಹಿನ್ನಲೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಲಿಖಿತ ರೂಪದಲ್ಲಿ ಆದೇಶ ಹೊರಡಿಸಿದೆ.

ವಾಹನಗಳ ನೋಂದಣಿ(RC) ಹಾಗೂ ಡ್ರೈವಿಂಗ್ ಲೈಸೆನ್ಸ್ ( DL)ಗೆ ಚಿಪ್ ಆಧಾರಿತ ಅಥವಾ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವಂತಿಲ್ಲ. ಬದಲಿಗೆ ಲ್ಯಾಮಿನೇಟೆಡ್ ಪ್ರತಿ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಕೇಂದ್ರ ಸರ್ಕಾರದ ಸೂಚನೆಯ ಹಿನ್ನಲೆಯಲ್ಲಿ ಕರ್ನಾಟಕದಲ್ಲೂ ಚಿಪ್ ಆಧಾರಿತ ಸ್ಮಾರ್ಟ್ ಕಾರ್ಡ್ ವಿತರಣೆ ಪದ್ಧತಿ ರದ್ದುಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಇನ್ಮುಂದೆ ಹೈಪೋಥಿಕೇಷನ್ ರದ್ದತಿಗೂ 200ರೂ ಶುಲ್ಕ ವಾಪತಿಸುವ ವ್ಯವಸ್ಥೆಯೂ ಇರುವುದಿಲ್ಲ.

 

ಇದನ್ನು ಓದಿ: Siddaramaiah: ಗಣಿ ಕಂಪನಿಗಳು ಇನ್ನು ಮುಂದೆ ರೈತರ ಭೂಮಿ ಖರೀದಿಸುತ್ತಾರೆ – ಸಿಎಂ 

Leave A Reply

Your email address will not be published.