Madhya pradesh women murder: ಮಹಿಳೆಯೋರ್ವಳ ಮೇಲೆ ಭೀಭತ್ಸ್ಯ ಕೃತ್ಯ; ದೇಹದ ಎಲ್ಲಾ ಭಾಗ ಸುಲಿದು ಬಿಟ್ಟ ದುಷ್ಕರ್ಮಿಗಳು!

Latest news Madhya pradesh women murder All parts of a woman's body were peeled off by criminals

Madhya pradesh women murder: ವಿಚಿತ್ರ ಹಾಗೂ ನಿಗೂಢ ರೀತಿಯಲ್ಲಿ ಮಹಿಳೆಯೊಬ್ಬರ ಬರ್ಬರ ಹತ್ಯೆ ನಡೆದಿದ್ದು, ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಮೃತದೇಹದ ಕಣ್ಣು, ಮೂಗು, ಕಿವಿ ಮತ್ತು ನಾಲಿಗೆಯನ್ನೂ ಕಿತ್ತು ಹಾಕಿ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಈ ಭೀಕರ ಕೊಲೆ ನಡೆದಿರುವುದು ಮಧ್ಯ ಪ್ರದೇಶದ (Madhya pradesh) ಶಹದೋಲ್(Shahdol) ಜಿಲ್ಲೆಯಲ್ಲಿ.

ಶಹದೋಲ್ ಜಿಲ್ಲೆಯ ಜೈತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಟಪರಿಹ ಟೋಳದ 55 ವರ್ಷದ ಜುನಿ ಬಾಯಿ ಗೊಂಡ್ ಎಂಬ ಮಹಿಳೆಯ ಮೃತದೇಹ ಇದಾಗಿದೆ. ಇವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರಂತೆ. ದುಷ್ಕರ್ಮಿಗಳು ಕಳೆದ ಎರಡು ದಿನದ ಹಿಂದೆ ಘೋರ ಕೃತ್ಯ (Madhya pradesh women murder) ಎಸಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೊಲೆಗಾರರು ಮೃತದೇಹವನ್ನು ವಿಕಾರಗೊಳಿಸಿದ್ದು, ಕುತ್ತಿಗೆಯ ಮೇಲಿನ ಯಾವುದೇ ಅಂಗಾಂಗಗಳು ಇರಲಿಲ್ಲ. ತಲೆ ಕೂದಲು ಕತ್ತರಿಸಿದ್ದಾರೆ. ಕಣ್ಣು, ಮೂಗು, ಕಿವಿ, ನಾಲಿಗೆಯಲ್ಲಿ ಕಿತ್ತು ಹಾಕಿದ್ದಲ್ಲದೆ, ಆಕೆಯ ಮುಖದ ಮೇಲ್ಮೈ ಚರ್ಮವನ್ನೂ ಸುಲಿದಿದ್ದಾರೆ. ಮಹಿಳೆಯ ತಲೆಭಾಗದ ಹೊರತಾಗಿ ಬೇರಾವುದೇ ಭಾಗದಲ್ಲಿ ಗಾಯದ ಗುರುತುಗಳಿಲ್ಲ. ಮೃತ ದೇಹವು ಮನೆಯ ಮಂಚದ ಕೆಳಗೆ ದೊರೆತಿದೆ. ಮೃತದೇಹದ ಬಳಿ ಕಿತ್ತು ಹಾಕಿದ ಹಲ್ಲುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

image source: ETV Bharat

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹದೋಲ್ ಹೆಚ್ಚುವರಿ ಎಸ್ಪಿ ಮುಖೇಶ್ ವೈಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ,’ನಿಗೂಢ ರೀತಿಯಲ್ಲಿ ಮಹಿಳೆಯ ಮೃತದೇಹ ಕಂಡುಬಂದಿದ್ದು,ಮೃತದೇಹವು ಆಕೆ ಮಲಗುವ ಮಂಚದ ಕೆಳಗಡೆ ದೊರೆತಿದೆ. ಕೊಲೆ ನಡೆದು ಎರಡು ದಿನಗಳಾಗಿರಬಹುದು. ಈ ಕೃತ್ಯಕ್ಕೆ ಕಾರಣವೇನು ಗೊತ್ತಿಲ್ಲ. ಮುಖದ ಮೇಲಿನ ಪ್ರಮುಖ ಅಂಗಾಂಗಗಳು ಕಾಣೆಯಾಗಿವೆ. ಚರ್ಮವನ್ನೂ ಸುಲಿದಿದ್ದಾರೆ. ಆರೋಪಿಗಳು ಭೀಕರವಾಗಿ ಕೊಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಮೃತದೇಹದ ಪ್ರಮುಖ ಅಂಗಾಂಗಳು ಕಾಣೆಯಾಗಿದ್ದರಿಂದ ಪ್ರಕರಣದ ತನಿಖೆ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ನಿಗೂಢ ಕೊಲೆ ಪ್ರಕರಣದ ಹಿಂದೆ ಬಿದ್ದಿರುವ ಪೊಲೀಸರು, ಆರೋಪಿಗಳಿಗೆ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.ಈ ಭೀಕರ ಹತ್ಯೆ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

 

ಇದನ್ನು ಓದಿ: Washing machine tips: ಬಟ್ಟೆ ಒಗೆದ ಮೇಲೆ ವಾಷಿಂಗ್ ಮಷೀನ್ ಮುಚ್ಚಳ ತೆರೆದಿಡಬೇಕು! ಯಾಕೆ? 

Leave A Reply

Your email address will not be published.