ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ, ಮಠ ಎಂಬಲ್ಲಿ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರು ಬೆಂಗರೆ ನಿವಾಸಿ ಖತೀಜಮ್ಮರವರು ನ.30ರಂದು ನಿಧನಹೊಂದಿದ್ದಾರೆ.
ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಆಟೋ ರಿಕ್ಷಾದಲ್ಲಿದ್ದ ವಿದ್ಯಾರ್ಥಿ ಅಲ್ತಾಫ್ ಮೃತಪಟ್ಟು ರಿಕ್ಷಾ ಚಾಲಕ ಸಹಿತ ಮೂವರು ಗಂಭೀರ ಗಾಯಗೊಂಡಿದ್ದರು.
ಮೃತ ಅಲ್ತಾಫ್ನ ತಾಯಿ ಖತೀಜಮ್ಮರವರು ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದವರು ಬಸ್ಸಿನಲ್ಲಿ ಬಂದು ಉಪ್ಪಿನಂಗಡಿಯಲ್ಲಿ ಬಸ್ನಿಂದ ಇಳಿದು ಆಟೋರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದರು.
ಈ ವೇಳೆ ಅಪಘಾತ ಸಂಭವಿಸಿತ್ತು.
You must log in to post a comment.