Health

ಕೋವಿಡ್ ನಿಯಮಾವಳಿಗಳ ಸಡಿಲಿಕೆ ಸಾಧ್ಯವಿಲ್ಲ -ಕೇಂದ್ರ ಸರಕಾರ

ಕೋವಿಡ್ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರಬಹುದು ಆದರೇ, ಕೋವಿಡ್ ಸೋಂಕಿನ ಎರಡನೇ ಅಲೆ ಇನ್ನೂ ಮುಗಿದಿಲ್ಲವಾದ್ದರಿಂದ ಸಂಪೂರ್ಣವಾಗಿ ನಿಯಮಗಳನ್ನು ಸಡಿಲಿಕೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಜೂನ್ 23 ರಿಂದ 29ರ ನಡುವೆ ದೇಶದ ಸುಮಾರು 71 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ರೇಟ್ ಶೇಕಡಾ 10 ಕ್ಕಿಂತ ಹೆಚ್ಚು ವರದಿಯಾಗಿದೆ. ಹಾಗಾಗಿ ಸೋಂಕನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಿಯಮಗಳು ಸ್ವಲ್ಪ ಸಡಿಲಿಕೆಯಾಗಿವೆ ಎಂದ ಮಾತ್ರಕ್ಕೆ ಸೋಂಕು ಮುಗಿದಿದೆ ಎಂದರ್ಥವಲ್ಲ. ದೇಶದ ಪ್ರತಿಯೊಬ್ಬ …

ಕೋವಿಡ್ ನಿಯಮಾವಳಿಗಳ ಸಡಿಲಿಕೆ ಸಾಧ್ಯವಿಲ್ಲ -ಕೇಂದ್ರ ಸರಕಾರ Read More »

ನೈಟ್ ಕರ್ಫ್ಯೂ ಉಲ್ಲಂಘಿಸಿ ರಸ್ತೆಗಿಳಿದ ಜನತೆ | ಮಧ್ಯರಾತ್ರಿಯೇ ಠಾಣೆಗೆ ಕರೆದೊಯ್ದ ಪೊಲೀಸರು

ಕೋವಿಡ್ 19 ಸೋಂಕು ಪ್ರಸರಣ ತಡೆಯಲು ಸರ್ಕಾರ ವಿಧಿಸಿರುವ ಕರ್ಫ್ಯೂವನ್ನು ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುವವರಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಶನಿವಾರ ಮಧ್ಯರಾತ್ರಿ ಶಿವಮೊಗ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ವೀಕೆಂಡ್ ಕರ್ಪ್ಯೂ ಉಲ್ಲಂಘಿಸಿ ಮನೆಯಿಂದ ಹೊರಬಂದವರನ್ನು ಮಧ್ಯರಾತ್ರಿಯೇ ಠಾಣೆಗೆ ಕರೆತಂದರು. ಕಾನೂನು ಕ್ರಮದ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.

ಶಾಲೆಗಳನ್ನು ಪ್ರಾರಂಭಿಸಲು ತಜ್ಞರ ಸೂಚನೆ | ಮೊದಲ ಹಂತದಲ್ಲಿ ಶುರುವಾಗಲಿವೆ ಸರ್ಕಾರಿ ಶಾಲೆಗಳು

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೊದಲ ಹಂತಗಳಲ್ಲಿ ಸರ್ಕಾರಿ ಶಾಲೆಗಳನ್ನು ತೆರೆಯುವ ನಿಟ್ಟಿನಲ್ಲಿ ತಯಾರಿಆರಂಭಿಸುವಂತೆ ತಜ್ಞರ ಸಮಿತಿ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ರಾಜ್ಯದಲ್ಲಿ 50 ಕ್ಕಿಂತ ಕಡಿಮೆ ಮಕ್ಕಳಿರುವ 22 ಸಾವಿರ ಸರ್ಕಾರಿ ಶಾಲೆಗಳಿವೆ. ಅವುಗಳಲ್ಲಿ 5-6 ಕೊಠಡಿಗಳಿದ್ದು ಒಂದೊಂದು ಕೊಠಡಿಗಳಲ್ಲಿ 8-10 ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವಂತೆ ಸೂಚಿಸಲಾಗಿದೆ. ಹಾಗೂ ದೈಹಿಕ ಅಂತರ, ಮಾಸ್ಕ್ ಕಡ್ಡಾಯವಾಗಿದ್ದು, ಸುರಕ್ಷಿತವಾಗಿ ಶಾಲೆಗಳನ್ನು ಆರಂಭಿಸಬೇಕು ಎಂದು ಸಲಹೆ ನೀಡಿದೆ. ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ …

ಶಾಲೆಗಳನ್ನು ಪ್ರಾರಂಭಿಸಲು ತಜ್ಞರ ಸೂಚನೆ | ಮೊದಲ ಹಂತದಲ್ಲಿ ಶುರುವಾಗಲಿವೆ ಸರ್ಕಾರಿ ಶಾಲೆಗಳು Read More »

ದಕ್ಷಿಣ ಕನ್ನಡ ಕೊರೊನಾ ರಣಕೇಕೆ | ಒಂದೇ ದಿನ 1006 ಮಂದಿಗೆ ಪಾಸಿಟಿವ್,15 ಮಂದಿ ಸಾವು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಂದು 1006 ಮಂದಿಗೆ ಕೊರೊನಾ ದೃಢಪಟ್ಟಿದೆ. ಕೊರೊನಾದಿಂದಾಗಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದು ದಿನದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಜೂ.18ರ ಶುಕ್ರವಾರದಂದು 665 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 1024 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರದಂದು ಶೇ.10.07 ಪಾಸಿಟಿವಿಟಿ ದರ ದಾಖಲಾಗಿದೆ. 23 ಕಡೆ ಕಂಟೈನ್‌ಮೆಂಟ್‌ ವಲಯದಕ್ಷಿಣ ಕನ್ನಡ ಜಿಲ್ಲೆಯ 23 ಕಡೆಗಳಲ್ಲಿ ಶುಕ್ರವಾರ ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಮಂಗಳೂರಿನ 7, ಬೆಳ್ತಂಗಡಿ …

ದಕ್ಷಿಣ ಕನ್ನಡ ಕೊರೊನಾ ರಣಕೇಕೆ | ಒಂದೇ ದಿನ 1006 ಮಂದಿಗೆ ಪಾಸಿಟಿವ್,15 ಮಂದಿ ಸಾವು Read More »

5 ದಿನದ ಬಾಣಂತಿ ಕೋವಿಡ್ ಗೆ ಬಲಿ | ಮೂರು ಮಕ್ಕಳನ್ನು ತಬ್ಬಲಿಯಾಗಿಸಿದ ಮಹಾಮಾರಿ

ಕೋವಿಡ್ ಅಟ್ಟಹಾಸಕ್ಕೆ ಹಲವರು ತಮ್ಮ ಜೀವ ಕಳೆದುಕೊಂಡಿದ್ದಾರೆ.ಹಲವು ಮಂದಿ ಅನಾಥರಾಗಿದ್ದಾರೆ.ಹಲವು ಮಂದಿ ತಂದೆ ತಾಯಿ ಬಂಧು ಗಳನ್ನು ಕಳೆದುಕೊಂಡಿದ್ದಾರೆ. ಹೀಗೆ ಬಾಣಂತಿಯೊಬ್ಬರು 5 ನೇ ದಿನಕ್ಕೆ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀ ಅವರು ಹೆರಿಗೆಯಾಗಿ 4 ದಿನವಾಗಿತ್ತು. 5ನೇ ದಿನಕ್ಕೆ ಕೊರೊನಾದಿಂದ ಬಾಣಂತಿ ಶಿಲ್ಪಶ್ರೀ ಮೃತಪಟ್ಟಿದ್ದಾರೆ‌. ಶಿಲ್ಪಶ್ರೀ ಅವರ ಪತಿ ಜಿ.ಟಿ.ವೀರೇಶ್​ ಅವರು ಬೆಂಗಳೂರಿನ ರಕ್ತನಿಧಿ ಕೇಂದ್ರದ ನೌಕರ. ದಂಪತಿ ಇಬ್ಬರೂ ಬೆಂಗಳೂರಿನಲ್ಲೇ ವಾಸವಿದ್ದರು. ಈಗಾಗಲೇ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, …

5 ದಿನದ ಬಾಣಂತಿ ಕೋವಿಡ್ ಗೆ ಬಲಿ | ಮೂರು ಮಕ್ಕಳನ್ನು ತಬ್ಬಲಿಯಾಗಿಸಿದ ಮಹಾಮಾರಿ Read More »

ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಕೋವಿಡ್‌ಗೆ ಬಲಿ | ದಲಿತ ಚಳವಳಿಗೆ ಹೊಸ ವೇಗ, ಹೊಸ ಸ್ಪರ್ಶ ಕೊಟ್ಟವರು ಡಾ.ಸಿದ್ದಲಿಂಗಯ್ಯ

ಹಿರಿಯ ಕವಿ, ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಿದ್ದಲಿಂಗಯ್ಯ ಅವರನ್ನು ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶುಕ್ರವಾರ ನಿಧನರಾಗಿದ್ದಾರೆ. ದಲಿತ ಚಳವಳಿಗೆ ಹೊಸ ವೇಗ, ಹೊಸ ಸ್ಪರ್ಶ ಕೊಟ್ಟವರು ಡಾ.ಸಿದ್ದಲಿಂಗಯ್ಯ. ಸಿದ್ದಲಿಂಗಯ್ಯ ಬರೆದ ಕ್ರಾಂತಿಗೀತೆ ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’ ರಾಜ್ಯವ್ಯಾಪಿ ಜನಪ್ರಿಯವಾಗಿತ್ತು. ದಲಿತ ಸಂವೇದನೆಗಳನ್ನು ಸಶಕ್ತವಾಗಿ, ಆಕ್ರೋಶವನ್ನು ಅಕ್ಷರಗಳಾಗಿ ಸಾರಿ ಹೇಳಿದ ಗೀತೆಯಿದು. ಕ್ರಾಂತಿಗೀತೆ, ನೊಂದವರ ಪಾಡುಗಳನ್ನೇ ಹಾಡಾಗಿಸುತ್ತಿದ್ದ …

ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಕೋವಿಡ್‌ಗೆ ಬಲಿ | ದಲಿತ ಚಳವಳಿಗೆ ಹೊಸ ವೇಗ, ಹೊಸ ಸ್ಪರ್ಶ ಕೊಟ್ಟವರು ಡಾ.ಸಿದ್ದಲಿಂಗಯ್ಯ Read More »

ಸ್ವಾಮಿ ನಿತ್ಯಾನಂದ ಕಾಲಿಟ್ಟರೆ ಭಾರತದಲ್ಲಿ ಕೋರೊನಾ ಖಲಾಸ್ !

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಆವಾಗವಾಗ ಸುದ್ದಿಯಲ್ಲಿರುವ ವ್ಯಕ್ತಿ.ಕೊರೊನಾ ಕರಿಛಾಯೆಯಲ್ಲಿ ಬಳಲುತ್ತಿರುವ ನಮ್ಮ ಭಾರತಕ್ಕೆ ನಿತ್ಯಾನಂದನ ಪಾದಸ್ಪರ್ಶವಾದರೆ ಕೊರೊನಾ ದೇಶ ಬಿಟ್ಟು ಓಡಿ ಹೋಗುತ್ತದೆಯಂತೆ. ಹಾಗಂತ ಈ ವಿಚಾರವನ್ನು ಬೇರೆ ಯಾರೋ ಹೇಳಿದ್ದಲ್ಲ,ಮಾಡ ಬಾರದ್ದನ್ನು ಮಾಡಿ ದೇಶ ಬಿಟ್ಟು ಹೋಗಿರುವ ಸ್ವ ಘೋಷಿತ ದೇವಮಾನವ ಲಾಫಿಂಗ್ ಸ್ವಾಮಿ ಬಿಡದಿ ನಿತ್ಯಾನಂದ. ಭಾರತದಲ್ಲಿ ಕೊರೋನಾ ಕೊನೆಗಾಣಬೇಕಾದರೆ, ನಾನೊಬ್ಬನೇ ಪರಿಹಾರ ಎಂಬ ಈತನ ಉವಾಚ ಎಲ್ಲೆಡೆ ಭಾರೀ ವೈರಲ್ ಆಗಿದೆ. ನನ್ನ ಪಾದ ಸ್ಪರ್ಶದಿಂದ ಭಾರತದಲ್ಲಿ ಕೊರೋನಾ ಅಂತ್ಯವಾಗುತ್ತದೆ ಎಂದು …

ಸ್ವಾಮಿ ನಿತ್ಯಾನಂದ ಕಾಲಿಟ್ಟರೆ ಭಾರತದಲ್ಲಿ ಕೋರೊನಾ ಖಲಾಸ್ ! Read More »

ದೇಶದಲ್ಲಿ ಇಳಿಕೆಯ ಹಾದಿಯಲ್ಲಿ ಕೊರೋನಾ | ಲಕ್ಷ ದಿಂದ ಸಾವಿರಕ್ಕೆ ಕುಸಿದ ಸಾವಿನ ಸಂಖ್ಯೆ

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಕೆಯ ಹಾದಿಯಲ್ಲಿ ದಾಪುಗಾಲು ಹಾಕುತ್ತಾ ಮುಂದುವರೆದಿದ್ದು, ಇಂದು ಮಂಗಳವಾರ ಬೆಳಿಗ್ಗೆ ಸಮಯಕ್ಕೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಕೇವಲ 86,498 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ 62 ದಿನಗಳ ಕನಿಷ್ಠ ಪ್ರಮಾಣವಾಗಿದೆ. ಅದೇ ರೀತಿ ದೇಶದಲ್ಲಿ ಕೊಂಡು ಬಂದ ಸಾವಿನ ಸಂಖ್ಯೆಯನ್ನು ಕೂಡ ಗಣನೀಯವಾಗಿ ಇಳಿಕೆ ಕಂಡಿದೆ. ಇದೇ ಅವಧಿಯಲ್ಲಿ ಅಂದರೆ ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 2123 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಪ್ರಮಾಣವು ಕಳೆದ 46 …

ದೇಶದಲ್ಲಿ ಇಳಿಕೆಯ ಹಾದಿಯಲ್ಲಿ ಕೊರೋನಾ | ಲಕ್ಷ ದಿಂದ ಸಾವಿರಕ್ಕೆ ಕುಸಿದ ಸಾವಿನ ಸಂಖ್ಯೆ Read More »

ಜೂನ್ 14ರವರೆಗೆ ಲಾಕ್ ಡೌನ್ ವಿಸ್ತರಣೆ: ಯಡಿಯೂರಪ್ಪ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕು ನಿಯಂತ್ರಿಸುವ ಕಾರಣದಿಂದ ಈ ಹಿಂದೆ ಜಾರಿಮಾಡಿದ್ದ ಲಾಕ್ ಡೌನ್ ನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಬಿ ಎಸ್ ವೈ ಹೇಳಿದರು. ಇದೇ ವೇಳೆ ಅವರು ಪ್ಯಾಕೇಜ್ ಘೋಷಣೆ ಮಾಡಿದರು. ಪವರ್ ಲೂಮ್ ೨ ಜನರಿಗೆ ತಲಾ ೩೦೦೦ ೫೦೦ ಕೋಟಿ ಒಟ್ಟು ಪ್ಯಾಕೇಜ್ ಚಲನಚಿತ್ರದ್ಯೋಮ, ದೂರದರ್ಶನ ಮಾಧ್ಯಮ ತಲಾ ೩೦೦೦ ಮೀನುಗಾರರಿಗೆ ೩೦೦೦ ಇನ್ ಲ್ಯಾಂಡ್ ದೋಣಿ ಮಾಲೀಕರಿಗೆ ತಲಾ ೩೦೦೦ ಕಾಂಟ್ರಾಕ್ಟ್ ಫೀಸ್ ಶೆ. ೨೦ ರಿಯಾಯಿತಿ ಸಿ …

ಜೂನ್ 14ರವರೆಗೆ ಲಾಕ್ ಡೌನ್ ವಿಸ್ತರಣೆ: ಯಡಿಯೂರಪ್ಪ ಘೋಷಣೆ Read More »

ಆನ್ ಲೈನ್ ನಲ್ಲಿ ಶೀಘ್ರದಲ್ಲೇ ದೊರೆಯಲಿದೆ ಆನಂದಯ್ಯ ಆಯುರ್ವೇದ ಔಷಧ | ಜನಸಂದಣಿ ಹಾಗೂ ಭದ್ರತಾ ದೃಷ್ಟಿಯಿಂದ ಆನಂದಯ್ಯ ಬೇರೆಡೆಗೆ ಶಿಫ್ಟ್

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ನಲ್ಲಿ ನಾಟಿ ಔಷಧ ತಜ್ಞ ಆನಂದಯ್ಯ ಇಂದಿನಿಂದ(ಜೂ.3) ಮತ್ತೆ ಔಷಧ ಉತ್ಪಾದನೆಯನ್ನು ಆರಂಭಿಸಿದ್ದಾರೆ. ಸೋಮವಾರದಿಂದ(ಜೂ.7) ಔಷಧ ವಿತರಣೆ ಆರಂಭಗೊಳ್ಳಲಿದೆ. ಶೀಘ್ರದಲ್ಲೇ ಆನ್ ಲೈನ್ ನಲ್ಲೂ ಔಷಧ ಪೂರೈಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಮರೀನಾ ಕೃಷ್ಣಪಟ್ಟಣಂ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಗ್ರಾಮಕ್ಕೆ ಪ್ರವೇಶಿಸಲು ಯಾರಿಗೂ ಅನುಮತಿ ನೀಡುತ್ತಿಲ್ಲ. ಹಾಗೆಯೇ ಆಧಾರ್ ಕಾರ್ಡ್ ತಂದವರಿಗಷ್ಟೇ ಔಷಧಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಔಷಧ ನೀಡಿಕೆ ವಿಚಾರ ತಿಳಿದ ಜನ ದೇಶದ …

ಆನ್ ಲೈನ್ ನಲ್ಲಿ ಶೀಘ್ರದಲ್ಲೇ ದೊರೆಯಲಿದೆ ಆನಂದಯ್ಯ ಆಯುರ್ವೇದ ಔಷಧ | ಜನಸಂದಣಿ ಹಾಗೂ ಭದ್ರತಾ ದೃಷ್ಟಿಯಿಂದ ಆನಂದಯ್ಯ ಬೇರೆಡೆಗೆ ಶಿಫ್ಟ್ Read More »

error: Content is protected !!
Scroll to Top