ಬಂಟ್ವಾಳ: ಮಂಚಿ ಬಿಎಸ್‌ಎನ್‌ಎಲ್ ಎಕ್ಸ್‌ಚೇಂಜ್‌ಗೆ ಕನ್ನ, ತಾಮ್ರದ ಕೇಬಲ್‌ಗಳ ಕಳವು
ಬಂಟ್ವಾಳ: ಮಂಚಿ ಗ್ರಾಮದ ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೇಂಜ್‌ನ ಬಾಗಿಲು ಒಡೆದು ತಾಮ್ರದ ಕೇಬಲ್‌ಗಳನ್ನು ಕಳವು ಮಾಡಿರುವ ಘಟನೆ ನಡೆದಿದ್ದು, ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sponsoredಈ ಟವರ್‌ಗಳು ಮಂಚಿ ಗ್ರಾಮದ ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌ಚೇಂಜ್‌ಗೆ ಸಂಪರ್ಕ ಹೊಂದಿರುವುದರಿಂದ ಅನುಮಾನಗೊಂಡ ತಂತ್ರಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದು, ಆಗ ಎಕ್ಸ್‌ಚೇಂಜ್‌ನ ಕೊಠಡಿಯ ಬಾಗಿಲು ಒಡೆದು ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
ಕಳವು ಬ್ಯಾಟರಿಯಿಂದ ಉಪಕರಣಗಳಿಗೆ ಸಂಪರ್ಕ ಮಾಡಿದ್ದ ಸುಮಾರು 20 ಮೀ. ಉದ್ದದ ಎರಡು ತಾಮ್ರದ ಕೇಬಲ್‌ಗಳು ಹಾಗೂ 6 ಮೀಟರ್ ಉದ್ದದ ಎರಡು ಕೇಬಲ್‌ಗಳನ್ನು ತುಂಡರಿಸಿ ಕಳವು ಮಾಡಿದ್ದಾರೆ. ಇದರಿಂದ ಸುತ್ತಮುತ್ತಲಿನ ಮೊಬೈಲ್ ಟವರ್‌ಗಳ ಸೇವೆ ಸ್ಥಗಿತಗೊಂಡು ಗ್ರಾಹಕರಿಗೆ ತೊಂದರೆಯಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.



