ಕಡಬ: ಹೊಸಮಠ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದ ಮೇರಿ ಇ.ಟಿ ಅವರಿಗೆ ಸೇವಾ ನಿವೃತ್ತಿ-ವಿದಾಯ ಕೂಟ
ಕಡಬ: ತಾಲೂಕಿನ ಹೊಸಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 19 ವರ್ಷಗಳಿಂದ ಪ್ರಭಾರ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮೇರಿ ಇ.ಟಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಫೆ.28 ರಂದು ಬೀಳ್ಕೊಡುಗೆ ಕಾರ್ಯಕ್ರಮ ಹೊಸಮಠ ಶಾಲೆಯಲ್ಲಿ ನೆರವೇರಿತು. 2003 ರಲ್ಲಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆಗೊಂಡಿದ್ದ ಮೇರಿ ಇ.ಟಿ ಅವರು ಸತತವಾಗಿ 19 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಶಾಲೆಯನ್ನು ಮೇಲ್ದರ್ಜೆಗೇರಿಸುವಲ್ಲಿ ಉತ್ತಮ ಪಾತ್ರ ವಹಿಸಿದ್ದು, ವಿದಾಯ ಸನ್ಮಾನ ಮಾಡುವ ಮೂಲಕ ಅವರ ಕಾರ್ಯವೈಖರಿಯನ್ನು ಈ …