ಶನಿವಾರ, 24 ಅಕ್ಟೋಬರ್ 2026

ಮುಲ್ಕಿ: ಕೊಲ್ನಾಡು ಬಳಿ ಶಾಲಾ ಬಸ್‌ ಅಪಘಾತ, ಇಬ್ಬರು ಮಕ್ಕಳಿಗೆ ಗಂಭೀರ ಗಾಯ

ಮುಲ್ಕಿ: ಶಾಲಾ ಬಸ್ಸೊಂದಕ್ಕೆ ಟೂರಿಸ್ಟ್‌ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್‌ ಕಮರಿಗೆ ಬಿದ್ದ ಘಟನೆ ಮೂಲ್ಕಿ ಸಮೀಪದ ಕೊಲ್ನಾಡುವಿನಲ್ಲಿ ನಡೆದಿದೆ. ಶುಕ್ರವಾರ (ಅ.3) ಸಂಜೆ ಈ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ಕೊಲ್ನಾಡುಗುತ್ತು ಬಳಿ ನಡೆದಿದೆ. ಮಂಗಳೂರಿನ ಕುಳಾಯಿ ಮೂಲದ ಖಾಸಗಿ ಶಾಲೆಯ ಬಸ್‌ ಅಪಘಾತಗೊಂಡಿದೆ.

ಕೊಲ್ನಾಡುವಿನಲ್ಲಿ ಯೂ ಟರ್ನ್‌ ತೆಗೆದು ವಿದ್ಯಾರ್ಥಿನಿಯನ್ನು ಇಳಿಸಿ ಮುಂದಕ್ಕೆ ಹೋಗುವ ವೇಳೆ ಹಿಂಬದಿಯಿಂದ ಟೂರಿಸ್ಟ್‌ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್‌ ರಸ್ತೆ ಬದಿಯ ಕಮರಿಗೆ ಉರುಳಿದೆ. ಶಾಲಾ ಬಸ್‌ನಲ್ಲಿ ಒಟ್ಟು 17 ಮಂದಿ ವಿದ್ಯಾರ್ಥಿಳಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ. ಟೂರಿಸ್ಟ್‌ ವಾಹನದ ಚಾಲಕನಿಗೂ ಗಾಯವಾಗಿದೆ. ಗಾಯಾಳುಗಳನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.