ಮಂಗಳವಾರ, 27 ಅಕ್ಟೋಬರ್ 2026
Trending

ಎಸ್ಸಿ ಎಸ್ಟಿ, ಒಬಿಸಿ ಎಲ್ಲರಿಗೂ 2BHK ಮನೆ ಗ್ಯಾರಂಟಿ: 20 ವರ್ಷ ನಂತರ!

Pradeep Eshwar
Image Credit: Vijayakarnataka

ಬೆಂಗಳೂರು: ಎಸ್ಸಿ ಎಸ್ಟಿ, ಒಬಿಸಿ ಎಲ್ಲರಿಗೂ 2 BHK ಮನೆ ಗ್ಯಾರಂಟಿ ಸ್ಕೀಮ್ ಬಂದಿದೆ. ನಿಜವಾಗಿಯೂ ಅದು ಕಾಂಗ್ರೆಸ್ಸಿನಿಂದಲೇ ಜನರಿಗೆ ಘೋಷಣೆಯಾದ ಗ್ಯಾರಂಟಿ ಸ್ಕೀಮ್ ಇದಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಜನರಿಗೆ 2 BHK ಮನೆ ಕಟ್ಟಿಕೊಡುವುದಾಗಿ ಶಪಥ ಮಾಡಿದ್ದಾರೆ.

Sponsored

15-20 ವರ್ಷಗಳ ನಂತರ ನಾನು ಪವರ್ ಗೆ ಬರ್ತೀನಿ, ಆಗ ಎಸ್ಸಿ ಎಸ್ಟಿ, ಒಬಿಸಿ ಎಲ್ಲರಿಗೂ 2BHK ಮನೆ ಕಟ್ಟಿಸಿ ಕೊಡ್ತೀನಿ ಎಂದು ಪ್ರದೀಪ್ ಈಶ್ವರ್ ಆಸೆ ಹುಟ್ಟಿಸಿದ್ದಾರೆ. ನಾನು ಎಲ್ಲವನ್ನು ಲೆಕ್ಕ ಹಾಕಿ ಇಟ್ಟಿದ್ದೀನಿ. ರಾಜ್ಯದಲ್ಲಿ ಒಂದೂವರೆ ಕೋಟಿ ಮನೆಗಳು ಬೇಕು. ಎಲ್ಲಾ ಮನೆಗಳ ನಿರ್ಮಾಣಕ್ಕೆ 9 ಲಕ್ಷ ಕೋಟಿ ಬೇಕಾಗುತ್ತದೆ. ನಾಲ್ಕು ಬ್ಯಾಂಕುಗಳಿಂದ ಸಾಲ ತಂದು ಮನೆಗಳನ್ನು ಕಟ್ಟಿ ಕೊಡುತ್ತೇನೆ, ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.

Advertisement
Advertisement

ದುಡ್ಡಿದ್ರೆ ಮಾತ್ರ ಪ್ರಧಾನಿ, ಮುಖ್ಯಮಂತ್ರಿ ಆಗುವುದಾದರೆ ಅಂಬಾನಿ, ಅದಾನಿ ಪ್ರಧಾನಿ, ಸಿಎಂ ಆಗಬೇಕಿತ್ತು. ಆದರೆ ತಾಕತ್ತಿರೋನು ಸಿಎಂ, ಪಿಎಂ ಆಗ್ತಾರೆ. ತಾಕತ್ತಿರೋದಕ್ಕೆ ನಮ್ಮ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿಎಂ ಆಗಿದ್ದು. ಮುಂದೆ ನಾನೂ ಅದೇ ರೀತಿ ಪವರ್ ಗೆ ಬರ್ತಿನಿ ಎಂದು ಹೇಳಿದ್ದಾರೆ.

Advertisement