Belthangady news

ಚಾರ್ಮಾಡಿ ಗ್ರಾಮ ಪಂಚಾಯತ್ ನಲ್ಲಿ ಜನ ಸಂಪರ್ಕ ಸಭೆ

ಬೆಳ್ತಂಗಡಿ : ಚಾರ್ಮಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಜನ ಸಂಪಕ೯ ಸಭೆ ನಡೆದಿದ್ದು, ಅಧ್ಯಕ್ಷತೆಯನ್ನು K.V ಪ್ರಸಾದ್ ರವರು ವಹಿಸಿದ್ದರು. ಧರ್ಮಸ್ಥಳ ಫೋಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷರಾದಂತಹ ಅನಿಲ ಕುಮಾರ ಡಿ ರವರು ಕಾನೂನು ಅರಿವು ಮೂಡಿಸಿದ್ದು, ಸಾರ್ವಜನಿಕರು ಕಾನೂನು ಅರಿವಿನ ಸದುಪಯೋಗ ಪಡೆದುಕೊಂಡಿರುತ್ತಾರೆ.ಪಂಚಾಯತ್ ಕಾರ್ಯದರ್ಶಿ ಕುಂಞ ಬೀಟ್ ಸಿಬ್ಬಂದ್ದಿ ಅಸ್ಲಾಂ ಅಭಿಜಿತ್ ಹಾಗೂ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.

ಜನರ ಸಮಸ್ಯೆಗೆ ಮುಕ್ತಿ ನೀಡಿದ ‘ಯುವ ತೇಜಸ್ಸು ಟ್ರಸ್ಟ್ ‘ | ಅಡಿಕೆ ಮರದ ಕಾಲುಸಂಕ ತೆರವುಗೊಳಿಸಿ ಕಬ್ಬಿಣದ ಕಾಲುಸಂಕ ನಿರ್ಮಿಸಿಕೊಟ್ಟ ತಂಡ

ಬೆಳ್ತಂಗಡಿ : ಅಪಾಯದ ಪರಿಸ್ಥಿತಿಯಲ್ಲಿದ್ದಅಡಿಕೆ ಮರದ ಕಾಲುಸಂಕವನ್ನು ತೆಗೆದು ಕಬ್ಬಿಣದ ಕಾಲುಸಂಕವನ್ನು ನಿರ್ಮಿಸಿಕೊಡುವ ಮೂಲಕ ತಾಲೂಕಿನ ಮಿತ್ತ ಬಾಗಿಲು ಗ್ರಾಮದ ಕಲ್ಲಂಡ ಪರಿಸರದ ಜನರಿಗೆ ಯುವ ತೇಜಸ್ಸು ಟ್ರಸ್ಟ್​ ಆಶ್ರಯವಾಗಿದೆ. ಕಲ್ಲಂಡ ಪ್ರದೇಶದಲ್ಲಿ ಹರಿಯುವ ನೇತ್ರಾವತಿ ನದಿ ಸಂಪರ್ಕದ ಏಳೂವರೆ ಹಳ್ಳಕ್ಕೆ ಅಡಿಕೆ ಮರದ ಕಾಲುಸಂಕವೇ ಪ್ರಮುಖ ಸಂಪರ್ಕವಾಗಿತ್ತು. ಇದೀಗ ಜಿಲ್ಲೆಯ ಯುವ ತೇಜಸ್ಸು ಟ್ರಸ್ಟ್ ಕಬ್ಬಿಣದ ಕಾಲುಸಂಕ ನಿರ್ಮಿಸಿಕೊಟ್ಟಿದೆ. ಇಲ್ಲಿನ ಗುತ್ತು, ಕಡ್ತಿ ಕುಮೆರು, ಕಕ್ಕೆನೇಜಿ, ಮಕ್ಕಿ, ಪರ್ಲ ಮೊದಲಾದ ಪ್ರದೇಶದ ಸುಮಾರು 28 ಕುಟುಂಬಗಳ …

ಜನರ ಸಮಸ್ಯೆಗೆ ಮುಕ್ತಿ ನೀಡಿದ ‘ಯುವ ತೇಜಸ್ಸು ಟ್ರಸ್ಟ್ ‘ | ಅಡಿಕೆ ಮರದ ಕಾಲುಸಂಕ ತೆರವುಗೊಳಿಸಿ ಕಬ್ಬಿಣದ ಕಾಲುಸಂಕ ನಿರ್ಮಿಸಿಕೊಟ್ಟ ತಂಡ Read More »

ಬೆಳ್ತಂಗಡಿ : ತುರ್ತು ಸೇವೆಗೆ ಶ್ರೀಸಾಯಿರಾಮ್ ಆಂಬುಲೆನ್ಸ್ ಲೋಕಾರ್ಪಣೆ

ಬೆಳ್ತಂಗಡಿ : ತಾಲೂಕಿನಾದ್ಯಂತ 24*7 ತುರ್ತು ಸೇವೆಗೆ ಶ್ರೀಸಾಯಿರಾಮ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸಿದೆ. ಬುಧವಾರದಂದು ಕುತ್ಯಾರು ಶ್ರೀ ಸೋಮನಾಥೇಶ್ವರನ ಸನ್ನಿಧಿಯಲ್ಲಿ ಲೋಕಾರ್ಪಣೆ ಗೈಯಲಾಗಿದ್ದು, ಇಂದಿನಿಂದ ತಾಲೂಕಿನಾದ್ಯಂತ ಸೇವೆಗೆ ಸಿದ್ಧವಾಗಲಿದೆ. ಈ ವೇಳೆ ಮಾಲಕರಾದ ಸೀತಾರಾಮ್,ಪವನ್ ಬಂಗೇರ ಖುಷಿ ಆಂಬುಲೆನ್ಸ್ನ ಗಣೇಶ್, ಚೇತನ್ ಹಾಗೂ ಸಾಯಿರಾಮ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಬೆಳ್ತಂಗಡಿ : ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು | ಅಧಿಕಾರಿಗಳ ದಿಢೀರ್ ಭೇಟಿ – 37.5 ಕ್ವಿಂಟಲ್ ಅಕ್ಕಿ ವಶಕ್ಕೆ

ಬೆಳ್ತಂಗಡಿ :ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ದಾಸ್ತಾನು ವಶ ಪಡಿಸಿಕೊಂಡಿರುವ ಘಟನೆ ಪಣಕಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಗೋವಿಂದ ಸದನದ ಮನೆಯಪಕ್ಕದಲ್ಲಿರುವ ಗೋಡೌನ್ ನಲ್ಲಿ ಈ ಅಕ್ರಮ ದಾಸ್ತಾನು ಸರಬರಾಜು ಆಗುತ್ತಿದ್ದು, ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಮತ್ತು ಆಹಾರ ನಿರೀಕ್ಷಕರು ವಿಶ್ವ.ಕೆ ಜಂಟಿಯಾಗಿ ಸಿಬ್ಬಂದಿಗಳ ಜೊತೆ ಇಂದು ಮಧ್ಯಾಹ್ನ ದಾಳಿ ಮಾಡಿದ್ದಾರೆ. ಅಕ್ರಮ ದಾಸ್ತಾನು ಶೇಖರಿಸಿಟ್ಟ …

ಬೆಳ್ತಂಗಡಿ : ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು | ಅಧಿಕಾರಿಗಳ ದಿಢೀರ್ ಭೇಟಿ – 37.5 ಕ್ವಿಂಟಲ್ ಅಕ್ಕಿ ವಶಕ್ಕೆ Read More »

ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ನಾಲ್ಕು ನಾಯಕರು ರಾಜೀನಾಮೆ

ಬೆಳ್ತಂಗಡಿ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಕುಟುಂಬಸ್ಥರ ಆಕ್ರಂದನದ ನಡುವೆಯೇ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬುಧವಾರ ಸಂಜೆ ಸ್ವಗ್ರಾಮದಲ್ಲಿ ಪಂಚಭೂತಗಳಲ್ಲಿ ಲೀನವಾದರು. ಪ್ರವೀಣ್ ನೆಟ್ಟಾರು ಸಾವಿಗೆ ನ್ಯಾಯ ಬೇಕು ಎಂದು ಸಾವಿರಾರು ಜನರು ಆಕ್ರೋಶ ಹೊರಹಾಕಿದ್ದಾರೆ. ಅಂತಿಮ ದರ್ಶನ ಪಡೆಯಲು ಆಗಮಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ರನ್ನು ಮುತ್ತಿಗೆ ಹಾಕಿ, ಸಚಿವರಾದ ಸುನೀಲ್ ಕುಮಾರ್, ಅಂಗಾರ ಅವರ ಕಾರನ್ನೂ ಅಡ್ಡಗಟ್ಟಿ ಹಿಂದೂ …

ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ನಾಲ್ಕು ನಾಯಕರು ರಾಜೀನಾಮೆ Read More »

ಬೆಳ್ತಂಗಡಿ । ಅಜ್ಜಿಯ ಕಿವಿ ಹರಿದು ಚಿನ್ನ ಹೊತ್ತೊಯ್ದ ದರೋಡೆಕೋರನ ಬಂಧನ ! | ಆರೋಪಿ ಯಾರೆಂದು ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ !

ಬೆಳ್ತಂಗಡಿ : ಹಾಡುಹಗಲೇ ಅಸಹಾಯಕ ವೃದ್ಧೆಯೊಬ್ಬರ ಕಿವಿ ಹರಿದು ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದು, ಮನೆಯಲ್ಲಿದ್ದ ನಗದನ್ನು ದರೋಡೆಗೈದಿದ್ದ ಆರೋಪಿಯನ್ನು ಇದೀಗ ಬಂಧಿಸಲಾಗಿದೆ. ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿನ ಡೀಕಯ್ಯ ಅವರ ತಾಯಿ ಅಕ್ಕು (85ವ) ಎಂಬ ವೃದ್ಧೆಯೋರ್ವರ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೈದು ಚಿನ್ನಾಭರಣವನ್ನು ದರೋಡೆಗೈದ ಘಟನೆ ಇಂದು ಮಧ್ಯಾಹ್ನದ ವೇಳೆ ನಡೆದಿತ್ತು. ಅಸಹಾಯಕ ಅಜ್ಜಿಯ ಮೇಲೆ ನಡೆದ ಈ ಹೀನಾಯ ಕೃತ್ಯಕ್ಕೆ ಜನ ಬೆಚ್ಚಿ ಬಿದ್ದಿದ್ದರು. ಈಗ ಆರೋಪಿಯನ್ನು …

ಬೆಳ್ತಂಗಡಿ । ಅಜ್ಜಿಯ ಕಿವಿ ಹರಿದು ಚಿನ್ನ ಹೊತ್ತೊಯ್ದ ದರೋಡೆಕೋರನ ಬಂಧನ ! | ಆರೋಪಿ ಯಾರೆಂದು ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ ! Read More »

ಬೆಳ್ತಂಗಡಿ : ಹಾಡಹಗಲೇ ದರೋಡೆ ಮಾಡಿ ನಡೆಯಿತು ವೃದ್ಧೆಯ ಕೊಲೆ!

ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿನ ವೃದ್ಧೆಯೋರ್ವರ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆಗೈದು ಚಿನ್ನಾಭರಣವನ್ನು ದರೋಡೆಗೈದ ಘಟನೆ ಇಂದು ಮಧ್ಯಾಹ್ನದ ವೇಳೆ ನಡೆದಿದೆ. ಮೃತರನ್ನು ಡೀಕಯ್ಯ ಅವರ ತಾಯಿ ಅಕ್ಕು (85ವ) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನದ ವೇಳೆ ಅಕ್ಕು ಅವರು ಮನೆಯಲ್ಲಿ ಒಬ್ಬರೇ ಇದ್ದರು. ಇದನ್ನು ಗುರಿಯಾಗಿಸಿಕೊಂಡ ಯಾರೋ ಕಿಡಿಗೇಡಿಗಳು ಮನೆಗೆ ನುಗ್ಗಿ ವೃದ್ಧೆ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ನಗದು ಸಹಿತ ಅವರು ಹಾಕಿಕೊಂಡಿದ್ದ ಚಿನ್ನವನ್ನು ಕಿತ್ತುಕೊಂಡು ಹೋಗಿದ್ದಾರೆ. …

ಬೆಳ್ತಂಗಡಿ : ಹಾಡಹಗಲೇ ದರೋಡೆ ಮಾಡಿ ನಡೆಯಿತು ವೃದ್ಧೆಯ ಕೊಲೆ! Read More »

ವಿಶೇಷ ನ್ಯಾಯಾಲಯದಿಂದ ಸಮನ್ಸ್!! ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆಗೆ ಸಜ್ಜಾದ ಬೆಳ್ತಂಗಡಿ ಶಾಸಕ ಪೂಂಜಾ

ಬೆಳ್ತಂಗಡಿ:ಜು.23.ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯ ದಿಂದ ಬಂದಿರುವ ಸಮನ್ಸ್ ಬಗ್ಗೆ ಬಂದಾರು ಮೊಗ್ರು ಗ್ರಾಮಸ್ಥರ ಪರವಾಗಿ ಶಾಸಕ ಹರೀಶ್ ಪೂಂಜ ರಲ್ಲಿ ಮನವಿ ಮಾಡಿಕೊಂಡ ಮೇರೆಗೆ ಶಾಸಕರು ಗ್ರಾಮಸ್ಥರಿಗೆ ಈ ಸಮನ್ಸ್ ಬಗ್ಗೆ ಶಾಸಕರೇ ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆ ಯ ಸಂಪೂರ್ಣ ಜವಾಬ್ದಾರಿಯನ್ನು ಖುದ್ದು ನಿರ್ವಹಿಸುವುದಾಗಿ ರೈತರ ಪರವಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿಕಣಿಯೂರು ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಬಾಲಕೃಷ್ಣ ಗೌಡ ಮುಗೇರಡ್ಕ,ಮೊಗ್ರು ಶಕ್ತಿ ಕೇಂದ್ರ ಪ್ರಮುಖ್ ಅಶೋಕ ಮೊಗ್ರ,ಮೊಗ್ರು ಶಕ್ತಿ ಕೇಂದ್ರ …

ವಿಶೇಷ ನ್ಯಾಯಾಲಯದಿಂದ ಸಮನ್ಸ್!! ಗ್ರಾಮಸ್ಥರ ಪರವಾಗಿ ಕೋರ್ಟ್ ದಾವೆಗೆ ಸಜ್ಜಾದ ಬೆಳ್ತಂಗಡಿ ಶಾಸಕ ಪೂಂಜಾ Read More »

ಬೆಳ್ತಂಗಡಿ : ಬೆಳಾಲು ಗ್ರಾಮದಲ್ಲಿ ಪತ್ತೆಯಾದ ರಸ್ತೆ ದಾಟುತ್ತಿರುವ ಬೃಹತ್ ಆಕಾರದ ಕಾಡುಕೋಣ

ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ದೊಂಪದಪಲ್ಕೆ ಪ್ರದೇಶದ ಪಿಜಕ್ಕಲ ಸಮೀಪ ಬೃಹತ್ ಆಕಾರದ ಕಾಡುಕೋಣವೊಂದು ರಸ್ತೆ ಅಡ್ಡ ದಾಟುತ್ತಿರುವುದು ಕಂಡುಬಂದಿದೆ. ನಿನ್ನೆ ಸಂಜೆಯ ವೇಳೆಗೆ ಪಿಜಕ್ಕಲ ಸಮೀಪ ಈ ಘಟನೆ ನಡೆದಿದ್ದು, ಅಲ್ಲಿನ ಸ್ಥಳೀಯರೊಬ್ಬರು ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಬೃಹತ್ ಆಕಾರದ ಕಾಡುಕೋಣ ಪತ್ತೆಯಾಗಿದೆ. ಕಾಡುಕೋಣ ರಸ್ತೆ ಅಡ್ಡ ದಾಟುವುದು ಕಂಡುಬಂದಿರುತ್ತದೆ. ಇದನ್ನು ನೋಡಿದ ಅವರು ತಕ್ಷಣ ಭಯ ಬೀತರಾಗಿ ವಾಹನವನ್ನು ನಿಧಾನವಾಗಿ ಸಂಚರಿಸಿದ್ದಾರೆ. ಬಳಿಕ, ಈ ದೃಶ್ಯವನ್ನು ಕಣ್ಣಾರ ಕಂಡ ಇವರು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ.

ಬೆಳ್ತಂಗಡಿ | ನಟೋರಿಯಸ್ ಕ್ರಿಮಿನಲ್ ಮಾತೃಶ್ರೀ ಫೈನಾನ್ಸ್ ಮಾಲಕ ಬಾಲಕೃಷ್ಣ ಸುವರ್ಣ ಅರೆಸ್ಟ್ | ದುಡ್ಡು ಕಂಡಲ್ಲಿ ಗುಂಡಿ ತೋಡುವುದೇ ಈತನ ಫುಲ್ ಟೈಮ್ ಕಾಯಕ

ಮಂಗಳೂರು : ನಕಲಿ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್ ಸಾಲ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನಂತೆ ಮಂಗಳೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ವಂಚನೆ ಪ್ರಕರಣದಲ್ಲಿರುವ ಪ್ರಮುಖ ಆರೋಪಿಗಳು ಮಂಗಳೂರು ಬಜ್ಪೆಯ ಕೊಳಂಬೆ ನಿವಾಸಿ ಕಿರಣ್ ಕುಮಾರ್(41), ಮಂಗಳೂರು ಜಪ್ಪುವಿನ ಕುಡುಪಾಡಿ ಹಾಲಿ ನಿವಾಸಿ‌, ಈ ಹಿಂದೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ದೇಕಿನಕಟ್ಟೆ ನಿವಾಸಿಯಾಗಿದ್ದ ಬಾಲಕೃಷ್ಣ ಸುವರ್ಣ(38), ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ದೀಕ್ಷಿತ್ ರಾಜ್(32) ಬಂಧಿತರು. ತಮ್ಮ ಬ್ಯಾಂಕ್ ಗೆ ಮೋಸ …

ಬೆಳ್ತಂಗಡಿ | ನಟೋರಿಯಸ್ ಕ್ರಿಮಿನಲ್ ಮಾತೃಶ್ರೀ ಫೈನಾನ್ಸ್ ಮಾಲಕ ಬಾಲಕೃಷ್ಣ ಸುವರ್ಣ ಅರೆಸ್ಟ್ | ದುಡ್ಡು ಕಂಡಲ್ಲಿ ಗುಂಡಿ ತೋಡುವುದೇ ಈತನ ಫುಲ್ ಟೈಮ್ ಕಾಯಕ Read More »

error: Content is protected !!
Scroll to Top