ಮಂಗಳವಾರ, 27 ಅಕ್ಟೋಬರ್ 2026
Trending

ತಮಿಳುನಾಡು ಜೈಲು ಪರಾರಿ ಹೈಡ್ರಾಮಾ: 17 ಕೈದಿಗಳು ಎಸ್ಕೇಪ್, 4 ಮಂದಿ ಮರುಸೆರೆ

​ಥೇಣಿ: ತಮಿಳುನಾಡಿನ ಥೇಣಿ ಉಪ ಜೈಲಿನಲ್ಲಿ ನಡೆದ ಭದ್ರತಾ ವೈಫಲ್ಯದ ದೊಡ್ಡ ಘಟನೆಯಲ್ಲಿ, ವಿಚಾರಣಾಧೀನ ಕೈದಿಗಳು ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.

Sponsored

​ಘಟನೆಯ ಹಿನ್ನೆಲೆ:
ಒಂದೇ ಕೋಣೆಯಲ್ಲಿದ್ದ 17 ಕೈದಿಗಳ ಪೈಕಿ ಒಬ್ಬನಿಗೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ನಟಿಸಿ ಜೈಲು ಸಿಬ್ಬಂದಿಯನ್ನು ನಂಬಿಸಲಾಗಿದೆ. ಇದನ್ನು ಸತ್ಯವೆಂದು ಭಾವಿಸಿ ಜೈಲು ಸಿಬ್ಬಂದಿ ಕೋಣೆಯ ಬಾಗಿಲು ತೆರೆದು ಒಳಗೆ ಪ್ರವೇಶಿಸಿದಾಗ, ಆ ಕೈದಿಗಳು ಏಕಾಏಕಿ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ದ್ವಿತೀಯ ದರ್ಜೆ ಪೊಲೀಸ್ ಸಿಬ್ಬಂದಿ ತಂಗಾಪಾಂಡಿ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಇಬ್ಬರು ಇತರ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸಿಬ್ಬಂದಿಯನ್ನು ಕಟ್ಟಿಹಾಕಿ ಅಥವಾ ಗಾಯಗೊಳಿಸಿ ಕೈದಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
​
ಪೊಲೀಸರ ಶೋಧ ಕಾರ್ಯಾಚರಣೆ:
ಘಟನೆಯ ಬೆನ್ನೇರ ಎಚ್ಚೆತ್ತ ಪೊಲೀಸ್ ಇಲಾಖೆಯು ತಪ್ಪಿಸಿಕೊಂಡವರ ಪತ್ತೆಗಾಗಿ ರಾಜ್ಯಾದ್ಯಂತ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಒಟ್ಟು 17 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಇದುವರೆಗೆ ನಾಲ್ವರು ಕೈದಿಗಳನ್ನು ಮರು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನೆರೆಯ ದಿಂಡಿಗುಲ್, ಮಧುರೈ ಮತ್ತು ಇಡುಕ್ಕಿ ಜಿಲ್ಲೆಗಳ ಗಡಿಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.

Advertisement
Advertisement

​ಕಳೆದ ವಾರವಷ್ಟೇ ಚೆನ್ನೈನ ಪುಝಲ್ ಕೇಂದ್ರ ಕಾರಾಗೃಹದಿಂದ ಕೈದಿಗಳು ಪರಾರಿಯಾಗಿರುವ ಘಟನೆ ಮಾಸುವ ಮುನ್ನವೇ, ಈಗ ಥೇಣಿಯಲ್ಲಿ ಈ ದೊಡ್ಡ ಮಟ್ಟದ ಜೈಲು ಪರಾರಿ ಘಟನೆ ನಡೆದಿರುವುದು ತಮಿಳುನಾಡು ಪೊಲೀಸ್ ಹಾಗೂ ಜೈಲು ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Advertisement