ಗರ್ಭಿಣಿ ಪತ್ರಕರ್ತೆಗೆ ತಳ್ಳಿದ ಆರೋಪ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ
ಕಳೆದ ಅಕ್ಟೋಬರ್ 12 ರಂದು ದೆಹಲಿಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಯಕರು ನಡೆಸಿದ ಪ್ರತಿಭಟನಾ ಮೆರವಣಿಗೆ ಹಾಗೂ ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಘಟನೆಯ ವೇಳೆ, ಗರ್ಭಿಣಿ ಪತ್ರಕರ್ತೆ ರಿಚಾ ಪರಾಶರ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಹಾಗೂ ತಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಪತ್ರಕರ್ತೆಯು ತನ್ನ ಮೇಲಾದ ಹಲ್ಲೆ ಹಾಗೂ ರಾಹುಲ್ ಗಾಂಧಿ ತಮ್ಮ ಕೈಯನ್ನು ಬಲವಾಗಿ ಎಳೆದು ತಳ್ಳಿದ್ದರಿಂದ ಕೆಳಗೆ ಬಿದ್ದಿರುವುದಾಗಿ ಆರೋಪಿಸಿ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಹುಲ್ ಗಾಂಧಿ ಹಾಗೂ ಇತರರಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೋರಿದೆ.
ಆದರೆ ಈ ಆರೋಪಗಳನ್ನು ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದು ಬಿಜೆಪಿ ಮತ್ತು ವಿರೋಧಿಗಳು ಮಾಡುತ್ತಿರುವ ಕಪೋಕಲ್ಪಿತ ಹಾಗೂ ರಾಜಕೀಯ ಪ್ರೇರಿತ ಅಪಪ್ರಚಾರ ಎಂದು ಸ್ಪಷ್ಟಪಡಿಸಿದೆ.
Sponsored



