ಭಾನುವಾರ, 25 ಅಕ್ಟೋಬರ್ 2026

ಪತ್ನಿ ಮೊಬೈಲ್ ನಿಂದ ಹೊಡೆದು ಪತಿ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಸಾವಿನ ಅಸಲಿ ಕಾರಣ ಬಹಿರಂಗ!!

ಕೌಟುಂಬಿಕ ಕಲಹದ ಸಂದರ್ಭದಲ್ಲಿ ಆಕ್ರೋಶಗೊಂಡ ಪತ್ನಿ, ಪತಿಯ ತಲೆಗೆ ಮೊಬೈಲ್ ಫೋನ್‌ನಿಂದ ಬಲವಾಗಿ ಹೊಡೆದಿದ್ದಕ್ಕೆ ಪತಿ ಮೃತಪಟ್ಟ ಘಟನೆ ಒಡಿಶಾದಲ್ಲಿ ಬೋಲಾಂಗಿರ್ ಜಿಲ್ಲೆಯಲ್ಲಿ ನಡೆದಿತ್ತು.  ಇದರಿಂದ ಕೆರಳಿದ ಗಂಡನ ಮನೆಯವರು ಹೆಂಡತಿಗೆ ಹಿಡಿಶಾಪ ಹಾಕುತ್ತಿದ್ದರು. ಆದರೆ ಇದರ ನಡುವೆ ಮರಣೋತ್ತರ ಪರೀಕ್ಷೆ ನಡೆದಿದ್ದು, ಸಾವಿನ ಅಸಲಿ ಕಾರಣ ಬಯಲಾಗಿದೆ.

Sponsored

ಶನಿವಾರದಂದು ದಂಪತಿ ನಡುವೆ ತಮ್ಮ ಮನೆಯಲ್ಲಿ ಯಾವುದೋ ಒಂದು ವಿಷಯಕ್ಕೆ ಸಣ್ಣದಾಗಿ ಶುರುವಾದ ವಾಗ್ವಾದವು ತೀವ್ರ ಸ್ವರೂಪಕ್ಕೆ ತಿರುಗಿತು. ಜಗಳ ವಿಕೋಪಕ್ಕೆ ಹೋದಾಗ ಕೋಪಗೊಂಡ ಪತ್ನಿ, ತನ್ನ ಕೈಯಲ್ಲಿದ್ದ ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಬಲವಾಗಿ ಹೊಡೆದಳು. ಪತ್ನಿಯ ಈ ಹಠಾತ್ ದಾಳಿಯಿಂದಾಗಿ ತಲೆಗೆ ತೀವ್ರ ಪೆಟ್ಟ ಬಿದ್ದು ಪತಿ ಸ್ಥಳದಲ್ಲೇ ರಕ್ತಸ್ರಾವವಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ, ಆರೋಗ್ಯದಲ್ಲಿ ಚೇತರಿಕೆ ಕಂಡಾಗ ಮನೆಗೆ ವಾಪಸ್ ಕರೆ ತರಲಾಗಿತ್ತು. ಆದರೆ ಮನೆಗೆ ಬರುತ್ತಿದ್ದಂತೆ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿ ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

Marriage AdMarriage AdSponsored

ಆದರೀಗ ಬಂದಿರುವ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ನಲ್ಲಿ ವ್ಯಕ್ತಿ ಸಾವಿಗೀಡಾಗಿರುವುದು ತಲೆಗೆ ಬಿದ್ದ ಪೆಟ್ಟಿನಿಂದಲ್ಲ. ಬದಲಿಗೆ ಲಿವರ್​ ಫೇಲ್ಯೂರ್​ನಿಂದ ಎಂದು ಹೇಳಲಾಗಿದೆ. ಕುಟುಂಬದವರು ಆರೋಪಿಸಿದಂತೆ ಮೃತನ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ, ಅತಿಯಾದ ಮದ್ಯ ಸೇವನೆಯಿಂದ ಲಿವರ್​ ಸಂಪೂರ್ಣವಾಗಿ ಡ್ಯಾಮೇಜ್​ ಆದರಿಂದ ಆತ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.