ಹಾವಿನ ದ್ವೇಷ ಹನ್ನೆರಡು ವರುವ ಎನ್ನುವ ಮಾತಿದೆ. ಆದರೆ ಆನೆಗೂ ದ್ವೇಷ ಎನ್ನುವುದು ವರ್ಷಗಳಿಂದ ಇರುತ್ತೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. 14 ವರ್ಷಗಳ ಹಿಂದೆ ಕುಟುಂಬವೊಂದರ ತಂದೆ-ತಾಯಿಯನ್ನು ತುಳಿದು ಕೊಂದಿದ್ದ ಕಾಡಾನೆಯೊಂದು ಇದೀಗ ವರ್ಷಗಳ ಬಳಿಕ ಕುಟುಂಬವನ್ನು ಹುಡುಕಿ ಬಂದು ಮತ್ತಿಬ್ಬರನ್ನು ಸಾಯಿಸಿರುವ ಘಟನೆ ನೇಪಾಳದಲ್ಲಿ ನಡೆದಿದೆ. ಸುರಕ್ಷತೆಗಾಗಿ ಊರು ಬದಲಾಯಿಸಿದ್ದರೂ ಈ ಘಟನೆ ನಡೆದಿದೆ.
Sponsoredಶನಿಚರ ಬೋಟೆ ಕುಟುಂಬ ನೇಪಾಳದ ಚಿತ್ವನ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಡಿ ಪಟ್ಟಣದಲ್ಲಿ ವಾಸ ಮಾಡುತ್ತಿತ್ತು. ಧುರ್ಬೆ ಎನ್ನುವ ಕಾಡಾನೆ ಡಿ.2012 ರಲ್ಲಿ ಬೋಟೆಯವರ ತಂದೆ-ತಾಯಿಯನ್ನು ತುಳಿದು ಕೊಂದಿತ್ತು. ಈ ಘಟನೆಯ ನಂತರ ಶನಿಚರ ಬೋಟೆ ತನ್ನ ಕುಟುಂಬದ ಸುರಕ್ಷತೆಗಾಗಿ 14 ಕಿ.ಮೀ. ದೂರದ ಜಗತ್ಪುರ್ ಪ್ರದೇಶಕ್ಕೆ ಸ್ಥಳಾಂತರಗೊಂಡ್ಡು ಹೊಸ ಜೀವನ ಆರಂಭಿಸಿದ್ದರು.
ದೊಡ್ಡ ನದಿಯನ್ನು ದಾಟಿ ಬಂದರೆ ನಾವು ಸುರಕ್ಷಿತ ಎಂದು ತಿಳಿದು ಬಂದಿದ್ದು, ಆದರೆ ಇಷ್ಟು ವರ್ಷಗಳ ನಂತರವೂ ಅದೇ ಆನೆ ನಮ್ಮನ್ನು ಹುಡುಕಿಕೊಂಡು ಬಂದು ನನ್ನ ಸೊಸೆ, ಪುಟ್ಟ ಮಗುವನ್ನು ಕೊಂದಿರುವುದು ನಿಜಕ್ಕೂ ಖೇದಕರ. ನಾವು ಎಲ್ಲಿಗೆ ಹೋಗಬೇಕು ಎನ್ನುವುದೂ ತಿಳಿಯುತ್ತಿಲ್ಲ ಎಂದು ಶನಿಚರ ಬೋಟೆ ತನ್ನ ದುಃಖವನ್ನು ವ್ಯಕ್ತಪಡಿಸಿದ್ದಾರೆ.
14 ವರ್ಷಗಳಲ್ಲಿ ಒಂದೇ ಕುಟುಂಬದ ನಾಲ್ವರನ್ನು ಆನೆ ಬಲಿ ಪಡೆದುಕೊಂಡಿದೆ.




