ಶನಿವಾರ, 24 ಅಕ್ಟೋಬರ್ 2026

BBK 9: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಭಾಗವಹಿಸುವ ಮಾಜಿ ಸ್ಪರ್ಧಿಗಳು ಹಾಗೂ ಹೊಸಬರೆಷ್ಟು?

ಬಿಗ್ ಬಾಸ್ ಕನ್ನಡ ಓಟಿಟಿ ಶೋ ( Bigg Boss
Kannada OTT ) ಫಿನಾಲೆ ನಿನ್ನೆ ಮುಗಿಯಿತು, ಈಗ ಟಾಪ್ 4 ಸ್ಪರ್ಧಿಗಳು ಟಿವಿ ಸೀಸನ್ ಗೆ ಲಗ್ಗೆ ಇಟ್ಟಿದ್ದಾರೆ. ಇನ್ನೇನು ಒಂದು ವಾರದ ಅಂತರದಲ್ಲಿ ಅಂದರೆ ಸೆಪ್ಟೆಂಬರ್ 24ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಬಿಗ್ ಬಾಸ್ ಶೋ ಆರಂಭವಾಗಲಿದೆ.

ಈಗ ಕುತೂಹಲ ಮೂಡಿಸುತ್ತಿರುವ ವಿಷಯವೇನೆಂದರೆ, ಬಿಗ್ ಬಾಸ್ ಕನ್ನಡ ಸೀಸನ್ 9 ( Bigg Boss Kannada Season 9) ರಲ್ಲಿ ಯಾರು ಯಾರು ಭಾಗವಹಿಸಲಿದ್ದಾರೆ ಎಂದು. ಒಟ್ಟು 18 ಸ್ಪರ್ಧಿಗಳು ಈ ಶೋನಲ್ಲಿ ಇರಲಿದ್ದಾರೆ. ಅದರಲ್ಲಿ ಬಿಗ್ ಬಾಸ್ ಕನ್ನಡ ಓಟಿಟಿಯಿಂದ 4 ಸ್ಪರ್ಧಿಗಳು, ಕಳೆದ 8 ಸೀಸನ್‌ಗಳಲ್ಲಿ ಭಾಗವಹಿಸಿದ್ದವರಲ್ಲಿ 5 ಸ್ಪರ್ಧಿಗಳು ಹಾಗೂ 9 ಹೊಸ ಸ್ಪರ್ಧಿಗಳು ಈ ಶೋನಲ್ಲಿ ಇರಲಿದ್ದಾರೆ.

ಈ ರೀತಿಯ ಪದ್ಧತಿ ಹಿಂದಿ ಬಿಗ್ ಬಾಸ್ ನಲ್ಲಿತ್ತು. ಹಳೆಯ ಸೀಸನ್ ನಲ್ಲಿ ಭಾಗವಹಿಸಿದ ಕಂಟೆಂಸ್ಟೆಂಟ್ ಗಳನ್ನು ನಂತರದ ಹೊಸ ಸೀಸನ್ ಗಳಿಗೆ ಕರೆಸಿಕೊಳ್ಳಲಾಗುತ್ತಿತ್ತು.
ಹಾಗಾಗಿ ಈ ಪದ್ಧತಿಯನ್ನು ಈಗ ಕನ್ನಡ ಬಿಗ್ ಬಾಸ್ ನಲ್ಲೂ ಮುಂದುವರಿಸಲಾಗಿದೆ. ಹಿಂದಿ ಬಿಗ್ ಬಾಸ್ ನಲ್ಲಿ ಮನರಂಜನೆ ದೃಷ್ಟಿಯಿಂದ ರಾಖಿ ಅವರನ್ನು ಬಿಗ್ ಬಾಸ್ ಆಯ್ಕೆ ಮಾಡಲಾಗಿತ್ತು. ಈ ಬಾರಿಯ ಬಿಗ್ ಬಾಸ್ ನಲ್ಲೂ ರಾಖಿ ಸಾವಂತ್ ಹಾಗೂ ಆಕೆಯ ಪ್ರಿಯಕರ ಮೈಸೂರಿನ ಆದಿಲ್ ಕೂಡಾ ಹಿಂದಿಯ ಬಿಗ್ ಬಾಸ್ ಗೆ ಪ್ರವೇಶ ಪಡೆಯಲಿದ್ದಾರೆಂಬ ಮಾತು ಹರಿದಾಡುತ್ತಿದೆ. ಈಗ ಕನ್ನಡ ಬಿಗ್ ಬಾಸ್‌ನಲ್ಲಿ ಪ್ರವೀಣರ ಜೊತೆ ನವೀನರು ಇದ್ದಾರೆ. ಹಾಗಾಗಿ ಈ ಬಾರಿ ಭಾರೀ ವಿಶೇಷ ಇರಲಿದೆ ಶೋನಲ್ಲಿ.

ಹಿಂದಿ ಬಿಗ್ ಬಾಸ್ ನಲ್ಲಿ ಇದು ಹಳೆಯ ಪದ್ಧತಿಯಾದರೂ ಕನ್ನಡದ ವೀಕ್ಷಕರಿಗೆ ಇದೊಂದು ಹೊಸ ಅನುಭವ ತರಲಿದೆ. ಬಿಗ್ ಬಾಸ್ ಕನ್ನಡ ಓಟಿಟಿ ಸ್ಪರ್ಧಿಗಳಾದ ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಅವರು ಬಿಗ್ ಬಾಸ್ ಕನ್ನಡ ಸೀಸನ್ 9 ಮನೆ ಪ್ರವೇಶ ಮಾಡಲಿದ್ದಾರೆ. ಕಿಚ್ಚ ಸುದೀಪ್ ಇರುವ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರೋಮೋ ಹೊರಬಿದ್ದಿದ್ದು, ಅದರಲ್ಲಿ ದೀಪಿಕಾ ದಾಸ್, ಅನುಪಮಾ ಗೌಡ, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ ಕಾಣಿಸಿಕೊಂಡಿದ್ದರು. ಇವರು ಬಿಗ್ ಬಾಸ್ ಮನೆಗೆ ಹೋಗುವ ಎಲ್ಲಾ ಸಂಭವನೀಯತೆ ಇದೆ. ಅಥವಾ ಬೇರೆ 5 ಮಾಜಿ ಸ್ಪರ್ಧಿಗಳು ಹೋಗುತ್ತಾರಾ ಎಂದು ಕಾದು ನೋಡಬೇಕಿದೆ.

ಈ ಹಿಂದಿನ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದಾಗ ಆದ ತಪ್ಪು, ಎಡವಟ್ಟುಗಳ ಅರಿವಿನ ಜೊತೆಯಲ್ಲಿ ಅನುಭವ ಕೂಡ ಇರೋದರಿಂದ ಹಳೆಯ ಸ್ಪರ್ಧಿಗಳು ಇನ್ನಷ್ಟು ಚೆನ್ನಾಗಿ ಬಿಗ್ ಬಾಸ್ ಆಟ ಆಡಬಹುದು. ಈ ಹಳೆ ಪಂಟರ ಜೊತೆ ಜೊತೆಯಲ್ಲಿ 9 ಹೊಸ ಸ್ಪರ್ಧಿಗಳು ಯಾವ ರೀತಿ ಆಟ ಆಟ ಆಡುತ್ತಾರೆ ಎಂಬುವುದೇ ಈ ಬಾರಿಯ ಬಿಗ್ ಬಾಸ್ ನ ಆಟದ ವೈಶಿಷ್ಟ್ಯ. ಅದಕ್ಕೆ ಇರಬೇಕು ಇದನ್ನು ಪ್ರವೀಣರು & ನವೀನರ ಆಟ ಎಂದು ವಾಹಿನಿ ಹೇಳಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ