Home » ನನಗೆ 7,000 ಕೋಟಿ ರೂ ಪರಿಹಾರ ಬೇಕು – ಕೋರ್ಟ್ ಮೆಟ್ಟಿಲೇರಿದ ಊರ್ವಶಿ

ನನಗೆ 7,000 ಕೋಟಿ ರೂ ಪರಿಹಾರ ಬೇಕು – ಕೋರ್ಟ್ ಮೆಟ್ಟಿಲೇರಿದ ಊರ್ವಶಿ

0 comments

ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ಹೆಸರು ಮತ್ತು ಫೋಟೋಗಳನ್ನು ಅನುಮತಿಯಿಲ್ಲದೆ ಬಳಸಿಕೊಂಡ ಅಮೆರಿಕದ ಲಾಸ್ ಏಂಜಲೀಸ್ ಮೂಲದ ಎಐ ಕಂಪನಿ ವಿರುದ್ಧ 7,000 ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ತಂತ್ರಜ್ಞಾನ ಬೆಳೆದಂತೆ ಅದರ ದುರ್ಬಳಕೆಯೂ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನವು ಚಿತ್ರರಂಗದ ತಾರೆಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.  ಇದೀಗ ಅಮೆರಿಕದ ಲಾಸ್ ಎಂಜಲೀಸ್ ಮೂಲದ ಎಐ ಸಂಸ್ಥೆಯೊಂದು ಊರ್ವಶಿ ರೌಟೇಲಾ ಅವರ ಹೆಸರು, ಫೋಟೋ ಹಾಗೂ ವೀಡಿಯೋಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ಬಳಸಿಕೊಂಡಿದೆ. ಹೀಗಾಗಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಎಐ ಕಂಪನಿಯೊಂದರ ವಿರುದ್ಧ ಬೃಹತ್ ಮೊತ್ತದ ಕಾನೂನು ಸಮರಕ್ಕೆ ಧುಮುಕಿದ್ದಾರೆ. ತಮ್ಮ ಅನುಮತಿಯಿಲ್ಲದೆ ತಮ್ಮ ಐಡೆಂಟಿಟಿ ಬಳಸಿದ್ದಕ್ಕಾಗಿ ಅವರು ಬರೋಬ್ಬರಿ 7000 ಕೋಟಿ ರೂಪಾಯಿ ನಷ್ಟ ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಅಮೆರಿಕದ ಸಂಸ್ಥೆಯೊಂದರ ವಿರುದ್ಧ ಅವರು ಹೂಡಿರುವ ಈ 7000 ಕೋಟಿ ರೂಪಾಯಿ ದಾವೆ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಕಾನೂನು ಹೋರಾಟ ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಎಐ ದುರ್ಬಳಕೆ ತಡೆಯಲು ಇದು ಪ್ರಮುಖ ಹೆಜ್ಜೆಯಾಗಲಿದೆ.

You may also like