Home » ನಾನು ಗರ್ಭಿಣಿಯಾಗಿರುವುದು ನನಗೇ ಅಚ್ಚರಿ – ಸಮಂತಾ ಮಾತಿನ ಮರ್ಮವೇನು?

ನಾನು ಗರ್ಭಿಣಿಯಾಗಿರುವುದು ನನಗೇ ಅಚ್ಚರಿ – ಸಮಂತಾ ಮಾತಿನ ಮರ್ಮವೇನು?

0 comments

ಭಾರತದ ಬಹುಭಾಷಾ ಹಾಗೂ ಬಹು ಬೇಡಿಕೆಯ ನಟಿಯಾದ ನಟಿ ಸಮಂತ ರುತ್ ಪ್ರಭು ಅವರು ಸದ್ಯ ಗರ್ಭಿಣಿಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಕುರಿತು ಸಮಂತ ಅವರು ನಾನು ಗರ್ಭಿಣಿಯಾಗಿರುವುದು ನನಗೆ ಅಚ್ಚರಿ ತಂದಿದೆ ಎಂದು ಆಶ್ಚರ್ಯಕರ ಹೇಳಿಕೆಯನ್ನು ಕೊಟ್ಟಿದ್ದಾರೆ. ಹಾಗಿದ್ರೆ ಈ ಹೇಳಿಕೆಯ ಹಿಂದಿನ ಅರ್ಥವೇನು ಗೊತ್ತೆ?

‘ಮಾ ಇಂಟಿ ಬಂಗಾರಂ’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ್ದ ಸಮಂತಾ, ಶೀಘ್ರದಲ್ಲೇ ಮಾತೃತ್ವ ರಜೆಗೆ ತೆರಳಲಿದ್ದೇನೆ ಎಂದು ಹೇಳಿದ್ದರು. ಇದೀಗ ‘ದಿ ಹಾಲಿವುಡ್ ರಿಪೋರ್ಟರ್’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಗರ್ಭಧಾರಣೆಯ ವಿಷಯ ಹೇಗೆ ತಿಳಿಯಿತು ಎಂಬುದನ್ನು ಸಮಂತಾ ಬಹಿರಂಗಪಡಿಸಿದ್ದಾರೆ. 

‘ಮಾ ಇಂಟಿ ಬಂಗಾರಂ’ ಚಿತ್ರದ ‘ಥಸ್ಸಾಡಿಯಾ’ ಹಾಡಿನ ಚಿತ್ರೀಕರಣ ನಡೆಯುತ್ತಿದ್ದಾಗ ತಾವು ಗರ್ಭಿಣಿಯಾಗಿರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ. ಪೋಷಕರಾಗುವ ಕುರಿತು ಮಾತನಾಡಿದ ಸಮಂತಾ, ತಾವು ಮತ್ತು ರಾಜ್ ಇಬ್ಬರೂ ಒಂದು ಹಂತದಲ್ಲಿ, “ನಮಗೆ ಮಕ್ಕಳಾಗದೇ ಇರಬಹುದು, ಆಗಬಹುದು” ಎಂಬ ವಿಚಾರಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದೆವು. ನನಗೆ ಎರಡೂ ಸರಿ ಎನಿಸಿತ್ತು. ಅವರಿಗೂ ಹಾಗೆಯೇ ಅನಿಸಿತ್ತು. ಆದರೆ ಈ ಗರ್ಭಧಾರಣೆ ನಮಗೆ ಅಚ್ಚರಿಯಾಗಿದೆ,” ಎಂದು ಹೇಳಿದ್ದಾರೆ.

ಅಲ್ಲದೆ “ಎಲ್ಲವೂ ಸರಿಯಾದ ಸಮಯದಲ್ಲಿ ಒಂದಕ್ಕೊಂದು ಹೊಂದಿಕೊಂಡಿದೆ ಎಂದು ಅನಿಸುತ್ತದೆ. ಈಗ ನಾನು ನಿಜವಾಗಿಯೂ ತುಂಬಾ ಉತ್ಸುಕಳಾಗಿದ್ದೇನೆ. ದಂಪತಿ ಪೋಷಕರಾಗಲು ನಿರ್ಧರಿಸಿದಾಗ, ಮಗು ಜೀವನವನ್ನೇ ಬದಲಾಯಿಸುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆ ಬದಲಾವಣೆಗೆ ನಾನು ಸಿದ್ಧಳಾಗಿದ್ದೇನೆ ಎಂದು ಅನಿಸುತ್ತದೆ” ಎಂದು ಸಮಂತಾ ತಿಳಿಸಿದ್ದಾರೆ.

You may also like