ಭಾನುವಾರ, 25 ಅಕ್ಟೋಬರ್ 2026
Trending

ಕಾಳಿಂಗ ಸರ್ಪ, ನಾಗರಹಾವು ಕಡಿತಕ್ಕೆ ಔಷಧಿ ಕಂಡು ಹಿಡಿದ ವಿಜ್ಞಾನಿಗಳು!

Snake Free State

ಬೆಂಗಳೂರು, ಸೆ.11: ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಹಾಗೂ ಡೆನ್ಮಾರ್ಕ್‌ ಸಂಶೋಧಕರ ತಂಡವು ಭಾರತೀಯ ನಾಗರಹಾವು ಹಾಗೂ ಕಾಳಿಂಗ ಸರ್ಪಗಳ ಕಡಿತಕ್ಕೆ ಹೊಸ ಔಷಧವನ್ನು ಸಂಶೋಧಿಸಿದ್ದಾರೆ.

Sponsored

ಸೈನ್ಸ್‌ ಟ್ರಾನ್ಸ್‌ಲೇಷನಲ್‌ ಮೆಡಿಸನ್‌ ನಿಯತಕಾಲಿಕೆಯಲ್ಲಿ ನ್ಯಾನೋಬಾಡಿ ಆಧಾರಿತ ಹೊಸ ಆಂಟಿವಿನಮ್‌ ಸಂಶೋಧನೆಯ ವಿವರಗಳು ಪ್ರಕಟವಾಗಿದೆ.

ಇಲಿಗಳ ಮೇಲೆ ಹೊಸ ಔಷಧದ ಪ್ರಯೋಗ ಮಾಡಲಾಗಿದ್ದು, ಉತ್ತಮ ಫಲಿತಾಂಶ ನೀಡಿದೆ. ಸಾಮಾನ್ಯ ನಾಗರಹಾವು, ಭಾರತದ ಕಾಳಿಂಗ ಸರ್ಪ ಪ್ರಭೇದಗಳು ಸೇರಿ ಎಲ್ಲಾ ಮಾದರಿಯ ಭಾರತೀಯ ನಾಗರಹಾವುಗಳ ವಿಷದ ವಿರುದ್ಧ ರಕ್ಷಣೆ ನೀಡಲಿದೆ.

ಹಾವಿನ ವಿಷ ಶರೀರ ಸೇರಿದ 30 ನಿಮಿಷಗಳ ನಂತರ ಹಾಗೂ ಪಾರ್ಶ್ವವಾಯು ಅಥವಾ ನರಸಂಬಂಧಿ ಲಕ್ಷಣಗಳು ಕಾಣಿಸಿಕೊಂಡ ನಂತರವೂ ಪರಿಣಾಮಕಾರಿಯಾಗಿದ್ದು, ಇಲಿಗಳು ಸಂಪೂರ್ಣ ಗುಣಮುಖವಾಗಿದೆ ಎಂದು ಐಐಎಸ್ಸಿ ಹೇಳಿದೆ.

ಈಗ ಆಗಿರುವ ಸಂಶೋಧನೆಯ ಪ್ರಕಾರ, ಅತ್ಯಂತ ಕಡಿಮೆ ಪ್ರಮಾಣದ ಡೋಸ್‌ ನೀಡಿ ಹಾವಿನ ವಿಷದ ಪರಿಣಾಮವನ್ನು ತಗ್ಗಿಸಬಹುದು. ಇದರಿಂದ ಉತ್ಪಾದನಾ ವೆಚ್ಚ ಹಾಗೂ ಅಡ್ಡಪರಿಣಾಮಗಳು ಕಡಿಮೆಯಾಗಲಿವೆ ಎಂದು ಐಐಎಸ್ಸಿ ತಿಳಿಸಿದೆ.