ಬಿಗ್ ಬಾಸ್ ಕನ್ನಡ ಸೀಸನ್ -13′ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಕಿಚ್ಚ ಸುದೀಪ್ ‘ದೊಡ್ಡನೆ’ ಫೈಟ್ ಹತ್ತುವ ಸ್ಪರ್ಧಿಗಳನ್ನು ಸ್ವಾಗತಿಸೋಕೆ ರೆಡಿಯಾಗಿದ್ದಾರೆ. ಇದೀಗ ಮಂಗಳೂರಿನ ಈ ಬೆಡಗಿ ಹಬ್ಬದ ಈ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.


ಕಲರ್ಸ್ ವಾಹಿನಿ ಕಡೆಯಿಂದ ಸ್ಪರ್ಧಿಗಳ ಪ್ರೋಮೊ ರಿಲೀಸ್ ಆಗಿದ್ದು, ಇದರಲ್ಲಿ ಓರ್ವ ಸ್ಪರ್ಧಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ಈಗಾಗಲೇ ರಿಯಾಲಿಟಿ ಶೋಗಳ ಮೂಲಕ ಸಖತ್ ಸೌಂಡ್ ಮಾಡಿರುವ, ಸೋಶಿಯಲ್ ಮೀಡಿಯಾ ತುಂಬೆಲ್ಲ ಸ್ಯಾಂಡಿ ಎಂದು ಖ್ಯಾತಿ ಪಡೆದಿರುವ, ಮಂಗಳೂರು ಮೂಲದ ಸೌಂದರ್ಯ ಶೆಟ್ಟಿ ‘ಬಿಗ್ ಬಾಸ್’ ಮನೆಗೆ ಬರುವುದು ಪಕ್ಕಾ ಆಗಿದೆ.
ಯಾರೀಕೆ ಸೌಂದರ್ಯ?
2019ರಲ್ಲಿ ‘ಮಿಸ್ ವರ್ಲ್ಡ್ ಟೀನ್ ಸೂಪರ್ ಮಾಡೆಲ್’ (ಮಿಸ್ ವರ್ಲ್ಡ್ ಟೀನ್ ಸೂಪರ್ ಮಾಡೆಲ್) ಗೆದ್ದುಕೊಂಡಿದ್ದಾರೆ. ಅಲ್ಲದೆ ಸೌಂದರ್ಯ ಅವರ ಜನಪ್ರಿಯತೆ ಹೆಚ್ಚಾಗಲು ಕಾರಣ. ಅವರು ಜನಪ್ರಿಯ ಎಂಟಿವಿ ರಿಯಾಲಿಟಿ ಶೋ ಆದ ‘MTV ಸ್ಪಿಟ್ಸ್ವಿಲ್ಲಾ’ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಫೈನಲಿಸ್ಟ್ ಆಗಿ ಗುರುತಿಸಿಕೊಂಡಿದ್ದರು.
ನೇರ ನಡೆ, ನುಡಿಗಳಿಂದಲೇ ಟಾಕ್ – ಫೈಟ್ ಎರಡಕ್ಕೂ ಸೈ ಎಂದು ಟಕ್ಕರ್ ಕೊಡುವ ವ್ಯಕ್ತಿತ್ವ ಸೌಂದರ್ಯ ಅವರದ್ದಾಗಿದೆ. ‘ಬಿಗ್ ಬಾಸ್’ನಲ್ಲಿ ಓರ್ವ ರಗಡ್ ಸ್ಪರ್ಧಿಯಾಗಿ ಸೌಂದರ್ಯ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾವ ರೀತಿ ಸಹ ಸ್ಪರ್ಧಿಗಳೊಂದಿಗೆ ಸೌಂದರ್ಯ ಇರುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

