Home » ಸೀಸನ್ 13ರ ಕಂಟೆಸ್ಟೆಂಟ್ಸ್ ವಿಡಿಯೋ ಹಂಚಿಕೊಂಡ ಬಿಗ್ ಬಾಸ್ ಕನ್ನಡ !!

ಸೀಸನ್ 13ರ ಕಂಟೆಸ್ಟೆಂಟ್ಸ್ ವಿಡಿಯೋ ಹಂಚಿಕೊಂಡ ಬಿಗ್ ಬಾಸ್ ಕನ್ನಡ !!

0 comments

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ – 13’ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ‘ಕಲರ್ಸ್ ಕನ್ನಡ’ ವಾಹಿನಿ ನೂತನ ಪ್ರೋಮೋ ಹಂಚಿಕೊಳ್ಳುವ ಮೂಲಕ ಮನೆಯೊಳಗೆ ಯಾರೆಲ್ಲಾ ಸ್ಪರ್ಧಿಗಳು ಹೋಗುತ್ತಾರೆ ಎಂಬುದನ್ನು ಪರೋಕ್ಷವಾಗಿ ತಿಳಿಸಿಕೊಟ್ಟಿದೆ. 

ಈ ಬಾರಿಯ ಶೋನಲ್ಲಿ ‘ಅಗ್ನಿ ಪರೀಕ್ಷೆ’ಯ ಮೂಲಕ ಮೂವರು ಸಾಮಾನ್ಯ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದು, ಉಳಿದಂತೆ ಹಲವು ಸೆಲೆಬ್ರಿಟಿಗಳು ದೊಡ್ಮನೆ ಅಂಗಳಕ್ಕೆ ಹೆಜ್ಜೆ ಇಡಲಿದ್ದಾರೆ. ಇದರ ನಡುವೆ ಕಲರ್ಸ್ ಕನ್ನಡ ವಾಹಿನಿ ಇಂದು ‘ಬಿಗ್ ಬಾಸ್ ಕನ್ನಡ 13’ ಶೋನ ಹೊಸ “ಬೋರ್ಡಿಂಗ್ ಪಾಸ್” ಟೀಸರ್ ಬಿಡುಗಡೆ ಮಾಡಿದೆ. “ಬಿಗ್ ಬಾಸ್ 13ಗೆ boarding pass ಸಿಕ್ಕಿರೋ ಸ್ಪರ್ಧಿಗಳು ಯಾರು? ಗೆಸ್ ಮಾಡಿ” ಎಂಬ ಕ್ಯಾಪ್ಷನ್ ನೀಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಈ ಟೀಸರ್‌ನಲ್ಲಿ ಬೋರ್ಡಿಂಗ್‌-ಪಾಸ್ ಗ್ರಾಫಿಕ್ಸ್ ಮತ್ತು ಕ್ವಿಕ್ ಕಟ್‌ಗಳನ್ನು ಬಳಸಲಾಗಿದೆ. ಎಲ್ಲಿಯೂ ಸ್ಪರ್ಧಿಗಳ ಮುಖ ಪೂರ್ತಿಯಾಗಿ ಕಾಣಿಸದಂತೆ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದ್ದು, ವೀಕ್ಷಕರೇ ಊಹಿಸುವಂತೆ ಪ್ರೋಮೋ ಡಿಸೈನ್ ಮಾಡಲಾಗಿದೆ. ಈ ಮುಂಚಿನ ಪ್ರೋಮೋಗಳಲ್ಲಿದ್ದ “ಗ್ರ್ಯಾಂಡ್ ಟೇಕ್ ಆಫ್” ಥೀಮ್ ಇಲ್ಲೂ ಮುಂದುವರಿದಿದ್ದು, ಸಿಕ್ಕಿರುವ ಸಣ್ಣ ಸುಳಿವುಗಳನ್ನೇ ಇಟ್ಟುಕೊಂಡು ದೊಡ್ಮನೆಗೆ ಹೋಗುವವರು ಯಾರು ಎಂದು ಶೋಧಿಸುವಂತೆ ವಾಹಿನಿ ಪ್ರೇಕ್ಷಕರನ್ನು ಕೇಳಿಕೊಂಡಿದೆ.

ಇನ್ನೂ ಸೆಪ್ಟೆಂಬರ್ 6ರ ಭಾನುವಾರ ಸಂಜೆ 7 ಗಂಟೆಗೆ ಶೋನ ಗ್ರ್ಯಾಂಡ್ ಪ್ರೀಮಿಯರ್ ನಡೆಯಲಿದ್ದು, ಅದಕ್ಕೆ ಸರಿಯಾಗಿ ಒಂದು ದಿನ ಮುಂಚಿತವಾಗಿ ಈ ಪ್ರೋಮೋ ಹೊರಬಿದ್ದಿದೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸೀಸನ್ 13 ಅನ್ನು “ಟೇಕ್-ಆಫ್” ಎಂಬ ಥೀಮ್‌ನಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಮನೆಗೆ ಕಾಲಿಡುವ ಸ್ಪರ್ಧಿಗಳು ಯಾರು ಎಂಬುದು ಕಲರ್ಸ್ ಕನ್ನಡ ಹಾಗೂ ಜಿಯೋಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರದ ವೇಳೆಯಷ್ಟೇ ಅಧಿಕೃತವಾಗಿ ತಿಳಿಯಲಿದೆ.

You may also like