Home » ನಾನು ವಿದ್ಯಾರ್ಥಿಯಾಗಿದ್ದರೆ ಉತ್ತಮ ವಾಗ್ಮಿಯಾಗಲು ಏನು ಮಾಡಬೇಕು – ಶಿಕ್ಷಕಿಯನ್ನೇ ಪ್ರಶ್ನಿಸಿದ ಮೋದಿ!!

ನಾನು ವಿದ್ಯಾರ್ಥಿಯಾಗಿದ್ದರೆ ಉತ್ತಮ ವಾಗ್ಮಿಯಾಗಲು ಏನು ಮಾಡಬೇಕು – ಶಿಕ್ಷಕಿಯನ್ನೇ ಪ್ರಶ್ನಿಸಿದ ಮೋದಿ!!

0 comments

ನಾನೇನಾದರೂ ನಿಮ್ಮ ವಿದ್ಯಾರ್ಥಿಯಾದರೆ ಉತ್ತಮ ವಾಗ್ಮಿಯಾಗಲು ಯಾವ ಸಲಹೆಯನ್ನು ನೀಡುತ್ತಿದ್ದೀರಿ, ಎಂದು ಪ್ರಧಾನಿ ಮೋದಿ ಅವರು ಶಿಕ್ಷಕಿಯೊಬ್ಬರಿಗೆ ಪ್ರಶ್ನಿಸಿದ್ದು ಅವರು ನೀಡಿರುವ ಉತ್ತರ ಆಗಿದೆ

ಶಿಕ್ಷಕರ ದಿನದ ಅಂಗವಾಗಿ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ತಮ್ಮನ್ನು ವಿದ್ಯಾರ್ಥಿಯಂತೆ ಪರಿಗಣಿಸಿಕೊಂಡು, ನಾನು ನಿಮ್ಮ ವಿದ್ಯಾರ್ಥಿಯಾಗಿದ್ದರೆ ಉತ್ತಮ ವಾಗ್ಮಿಯಾಗಲು ಏನು ಮಾಡಬೇಕು? ಎಂದು ಶಿಕ್ಷಕಿಗೆ ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ, ಮೊದಲಿಗೆ ಆತ್ಮವಿಶ್ವಾಸ ಇರಬೇಕು. ನಿರಂತರ ಅಭ್ಯಾಸದಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ ಎಂದು ಸಲಹೆ ನೀಡಿದರು. ಅಲ್ಲದೆ ಪ್ರಧಾನಿಯವರ ಸಮ್ಮುಖದಲ್ಲಿ ಮಾತನಾಡುವಾಗ ತಮಗೇ ಆತ್ಮವಿಶ್ವಾಸ ಕಡಿಮೆಯಾದಂತಾಗಿದೆ ಎಂದು ಶಿಕ್ಷಕಿ ಹಾಸ್ಯಭರಿತವಾಗಿ ಹೇಳಿದಾಗ ಸಭೆಯಲ್ಲಿ ನಗೆ ಮೂಡಿತು. ಶಿಕ್ಷಕಿಯ ಮಾತಿಗೆ ಮೋದಿ ಅವರೂ ನಕ್ಕರು. 

ಶಿಕ್ಷಕರೊಂದಿಗೆ ನಡೆದ ಚರ್ಚೆಯಲ್ಲಿ ಮಕ್ಕಳ ಹೆಚ್ಚುತ್ತಿರುವ ಸ್ಕ್ರೀನ್‌ಟೈಮ್ ಬಗ್ಗೆಯೂ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದರು. ಮೊಬೈಲ್, ಕಂಪ್ಯೂಟರ್ ಹಾಗೂ ಇತರ ಡಿಜಿಟಲ್ ಸಾಧನಗಳ ಮುಂದೆ ಮಕ್ಕಳು ಹೆಚ್ಚು ಸಮಯ ಕಳೆಯುತ್ತಿರುವುದು ಒಂದು ರೀತಿಯ ಚಟವಾಗಿ ಪರಿಣಮಿಸುತ್ತಿದೆ ಎಂದು ಅವರು ಹೇಳಿದರು. ಮಕ್ಕಳನ್ನು ಸ್ಕ್ರೀನ್‌ನಿಂದ ದೂರವಿಡಲು ಅವರನ್ನು ಹೊರಾಂಗಣ ಕ್ರೀಡೆಗಳತ್ತ ಹೆಚ್ಚು ಸೆಳೆಯಬೇಕು ಎಂದು ಸಲಹೆ ನೀಡಿದರು. ಅಲ್ಲದೆ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬೇಡಿ, ಅವರನ್ನು ಮೈದಾನಕ್ಕೆ ಆಟವಾಡಲು ಕಳುಹಿಸಿ, ಪುಸ್ತಕಕ್ಕೆ ಮಾತ್ರ ನೀವು ಸೀಮಿತರಾಗಬೇಡಿ, ಇಂದು ಮೋದಿ ಅಭಿಮಾನಿಗಳು

You may also like