Home » ‘ಟಾಕ್ಸಿಕ್‌’ ಸೋಲಿನ ಬಗ್ಗೆ ಯಶ್‌ ಫಸ್ಟ್ ರಿಯಾಕ್ಷನ್!!

‘ಟಾಕ್ಸಿಕ್‌’ ಸೋಲಿನ ಬಗ್ಗೆ ಯಶ್‌ ಫಸ್ಟ್ ರಿಯಾಕ್ಷನ್!!

0 comments

ರಾಕಿಂಗ್‌ ಸ್ಟಾರ್‌ ಯಶ್‌ಅಭಿನಯದ ʼಟಾಕ್ಸಿಕ್‌ʼ ಚಿತ್ರ ವಿಶ್ವದೆಲ್ಲೆಡೆ ತೆರೆಕಂಡು ಎರಡು ವಾರ ಕಳೆದಿದೆ. ಆದರೆ ನಿರೀಕ್ಷೆ ಮಾಡಿದಂತೆ ಈ ಸಿನಿಮಾ ಪ್ರದರ್ಶನ ಕಂಡು ಗಳಿಕೆಯನ್ನು ಮಾಡಲಿಲ್ಲ. ಜನರ ಮನ ಗೆಲ್ಲುವಲ್ಲಿ ಒಂದು ಹಂತದಲ್ಲಿ ಸೋತಿದೆ ಎನ್ನಬಹುದು. ಇದು ಕೇವಲ ಚಿತ್ರರಂಗದ ಸೋಲಲ್ಲ. ನಿಜಕ್ಕೂ ಕೂಡ ಕನ್ನಡಿಗರ ಸೋಲು. ಆದರೆ ಇದನ್ನು ಅರ್ಥ ಮಾಡಿಕೊಳ್ಳಲು ಮತ್ತೆ ಮತ್ತೆ ನಾವು ಸೋಲುತ್ತಿದ್ದೇವೆ. ಅಂತೂ ಈ ಸಿನಿಮಾ ಸೋಲಿನ ಬಗ್ಗೆ ನಟ ಯಶ್ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.

 ಈ ಒಂದು ಟಾಕ್ಸಿಕ್ ಎಂಬ ಬೃಹತ್ ಯೋಜನೆಗೆ ಯಶ್ ಅವರು ನಾಲ್ಕು ವರ್ಷಗಳ ಕಾಲ ಭಾರೀ ಪರಿಶ್ರಮ ಹಾಕಿದ್ದಾರೆ. ಅದು ಅವರ ಅಭಿನಯದ ಮೂಲಕ ದೊಡ್ಡ ಪರದೆಯಲ್ಲಿ ಎದ್ದು ಕಾಣುತ್ತದೆ. ಗೀತು ಮೋಹನ್‌ ದಾಸ್‌ ನಿರ್ದೇಶನದಲ್ಲಿ ಬಂದ ಮಲ್ಟಿಸ್ಟಾರ್ಸ್‌ ʼಟಾಕ್ಸಿಕ್‌ʼ ಬಹಳ ದೊಡ್ಡಮಟ್ಟದಲ್ಲಿ ತೆರೆಕಂಡ ಸಿನಿಮಾ. ಪ್ಯಾನ್‌ ಇಂಡಿಯಾ ಮಾತ್ರವಲ್ಲದೆ ಇಂಗ್ಲೀಷ್‌ ಭಾಷೆಯಲ್ಲೂ ತೆರೆಕಂಡ ಕನ್ನಡದ ಹೆಮ್ಮೆಯ ಸಿನಿಮಾ ʼಟಾಕ್ಸಿಕ್.‌ ಇದರ ಸೋಲು ಇದೀಗ ನಮ್ಮೆಲ್ಲರ ಹೊಣೆಯಾಗಿದೆ. ಬಹುಶಃ ಈ ಟಾಕ್ಸಿಕ್ ರೀತಿಯ ಸಿನಿಮಾವನ್ನು ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ನೋಡಲು ಸಾಧ್ಯವಿಲ್ಲ ಅಂತಹ ಪ್ರಯತ್ನವನ್ನು ಯಾರು ಮಾಡಲು ಆಗುವುದಿಲ್ಲ ಎಂಬುದು ಹಲವರ ಅಭಿಪ್ರಾಯ.

ಯಶ್ ರಿಯಾಕ್ಷನ್ 

ಈ ಸಿನಿಮಾಕ್ಕೆ ಈ ರೀತಿ ಪ್ರತಿಕ್ರಿಯೆ ಬಂದಿರುವುದನ್ನು ಕಂಡು ಯಶ್‌ ಅವರು ಏನು ಹೇಳಿದ್ದಾರೆ ಎನ್ನುವುದನ್ನು ಯಶ್ ಅವರ ಪರಮಾಪ್ತ ಜೈದೇವ್‌ ಹೇಳಿದ್ದಾರೆ. “ರಿಲೀಸ್‌ ಆದ ಬಳಿಕ ಅವರನ್ನು ನಾನು ಭೇಟಿ ಆಗಿಲ್ಲ. ಫೋನಿನಲ್ಲಿ ಎರಡು ಸಲ ಮಾತನಾಡಿದ್ದಾರೆ. ʼ’ಜಾಸ್ತಿ ಮನಸ್ಸಿಗೆ ಹಚ್ಕೋ ಬೇಡ. ಆಯ್ತು ಆಗಿದೆ. ಜನಕ್ಕೆ ಬಿಟ್ಟು ಬಿಡೋಣ. ಅದು ಅವರಿಷ್ಟ. ನಾವು ಶ್ರದ್ಧೆಯಿಂದ ಮಾಡಿದ್ದೇವೆ. ಏನು ಕೊಡಬೇಕಿತ್ತೋ, ಅದನ್ನು ಕೊಟ್ಟಿದ್ದೇವೆ. ನೀನು ಜಾಸ್ತಿ ಮನಸ್ಸಿಗೆ ಹಚ್ಕೋಬೇಡ. ನೆಕ್ಸ್ಟ್‌ ರೆಡಿಯಾಗು ಕೆಲಸವಿದೆ ‘ ಅಂತಾ ನನಗೆ ಯಶ್‌ ಅವರು ಹೇಳಿದರು” ಎಂದಿದ್ದಾರೆ ಜೈದೇವ್.‌ ಆದರೆ ನನಗೆ ಆ ನೋವು ಗೊತ್ತಾಗುತ್ತದೆ.ಯಾರಿಗೆ ಆಗಲಿ. ನಾಲ್ಕು ವರ್ಷ ಇದಕ್ಕೆ ಅವರು ಪರಿಶ್ರಮ ಹಾಕಿದ್ದಾರೆ. ನಾನು ಕಥೆ ಆರಂಭದಿಂದ ಕೊನೆಯವರೆಗೂ ನೋಡಿದ್ದೇನೆ. ಆ ನೋವು ನನಗೆ ಅರ್ಥ ಆಗುತ್ತದೆ ಎಂದು ಹೇಳಿದ್ದಾರೆ. 

ಇನ್ನೂ” ʼಟಾಕ್ಸಿಕ್‌ʼ ಚಿತ್ರದ ಸುಮಾರು 3 ಲಕ್ಷಕ್ಕೂ ಹೆಚ್ಚಿನ ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿದ್ದೇವೆ. ಹೆಚ್ಚಿನದು ಹಿಂದಿಯಲ್ಲೇ ಆಗಿದೆ. ಮೊದಲು ಹಿಂದಿ, ತೆಲುಗು ಹಾಗೂ ಕನ್ನಡ ವರ್ಷನ್‌ನಲ್ಲಿ ಪೈರಸಿ ಆಯಿತು. ಇದನ್ನು ನೋಡಿ ನಿಜಕ್ಕೂ ಶಾಕ್‌ ಆಯಿತು. ಪೈರಸಿ ಮೊದಲಿನಿಂದಲೂ ಇದೆ. ಆದರೆ ಇಷ್ಟಮಟ್ಟಿಗೆ ಪೈರಸಿ ನೋಡಿರುವುದು ನನ್ನ ವೃತ್ತಿ ಬದುಕಿನಲ್ಲೇ ಮೊದಲು. ನಮ್ಮ ಚಿತ್ರವನ್ನು ಸೋಲಿಸಲು ಪೇಯ್ಡ್‌ ನೆಗೆಟಿವ್‌ ರಿವ್ಯೂ ಕೂಡ ಮಾಡಲಾಗಿದೆ. ಅದನ್ನು ನಾನು ಯಾರು, ಏನು ಅಂತ ಹೇಳಲ್ಲ. ನಮ್ಮ ಕಣ್ಣ ಮುಂದೆಯೇ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದು ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇಡೀ ಸಿನಿಮಾವನ್ನು ಸೆರೆ ಹಿಡಿದು ಫೇಸ್‌ಬುಕ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಈ ರೀತಿಯ ವಿಕೃತ ಮನಸ್ಥಿತಿ ಬಗ್ಗೆ ಏನು ಹೇಳಬೇಕೋ ಅನ್ನೋದು ಗೊತ್ತಿಲ್ಲವೆಂದಿದ್ದಾರೆ” ಜೈದೇವ್!!

 

You may also like