ಭಾನುವಾರ, 25 ಅಕ್ಟೋಬರ್ 2026

Netflix ಪಾಸ್‌ವರ್ಡ್‌ ಶೇರ್‌ ಮಾಡ್ತೀರಾ ? ಹಾಗಿದ್ರೆ ಈ ಸುದ್ದಿ ಒಮ್ಮೆ ಖಂಡಿತ ಓದಲೇಬೇಕು

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್..ಇಂಟರ್ನೆಟ್ ಬ
ಬಳಕೆ ಮಾಡದೇ ಇರುವವರೆ ವಿರಳ. ನೆಟ್​ಫ್ಲಿಕ್ಸ್ ಇಲ್ಲವೇ ಅಮೆಜಾನ್ ಪ್ರೈಂ ಅಥವಾ ಯಾವುದೇ ಒಟಿಟಿ ಪ್ಯಾಕ್ ಹಾಕುವಾಗಲೂ ಒಂದು ತಂಡ ಹಣವನ್ನು ಶೇರ್ ಮಾಡಿ ಸಬ್ಸ್ಕ್ರಿಪ್ಶನ್ ಪಡೆಯುವುದು ಸಹಜ. ಆದರೆ ಇಲ್ಲಿ ಇನ್ಮುಂದೆ ನೆಟ್​ಫ್ಲಿಕ್ಸ್ ಪಾಸ್​ವರ್ಡ್ ಶೇರ್ ಮಾಡಿದರೆ, ಅದು ಕ್ರಿಮಿನಲ್ ಫ್ರಾಡ್ ಎಂದು ಪರಿಗಣಿಸಲಾಗಿದೆ.

Sponsored

ಒಟಿಟಿ (OTT) ಸಬ್​ಸ್ಕ್ರಿಪ್ಶನ್ ಪ್ಯಾಕ್ ರೀಚಾರ್ಜ್ ಮಾಡಿ ಒಂದಷ್ಟು ಜನರು ಅದನ್ನು ಶೇರ್ ಮಾಡಿಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ವಿದ್ಯಾರ್ಥಿಗಳು, ಸಹದ್ಯೋಗಿಗಳು, ಫ್ಯಾಮಿಲಿ ಸದಸ್ಯರು ಈ ಸುಲಭ ಐಡಿಯಾ ಬಳಸಿಕೊಂಡು ತಮಗಿಷ್ಟದ ಸಿನಿಮಾ, ವೆಬ್ ಸಿರೀಸ್​ಗಳನ್ನು ಎಂಜಾಯ್ ಮಾಡುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಇದು ಪಾಕೆಟ್ ಫ್ರೆಂಡ್ಲಿ ಆಗಿದ್ದು, ಅದೇ ರೀತಿ ಎಲ್ಲರೂ ಒಟಿಟಿ ಶೋಗಳನ್ನು (Shows) ಎಂಜಾಯ್ ಮಾಡಲು ಕೂಡಾ ಸಾಧ್ಯವಾಗಲಿದೆ.

Marriage AdMarriage AdSponsored

UK ಸರ್ಕಾರ ಈಗ ಹೊಸದೊಂದು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇದು ಅತ್ಯಂತ ಚಿಕ್ಕ ವಿಷಯ ಎಂದು ಕಂಡರೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಹ್ಯಾಕರ್ಸ್ ಹಾಗೂ ಅಕ್ರಮವಾಗಿ ಅಧಿಕೃತ ಜಾಲಗಳಿಗೆ ನುಸುಳುವವರ ಶೋಧ ಕಾರ್ಯಕ್ಕೆ ಮುಂದಾಗಿದ್ದು, ಈ ವೇಳೆ ಆಘಾತಕಾರಿ ವಿಚಾರವೊಂದು ಬಹಿರಂಗವಾಗಿದೆ.

netflix logo 2007 ರಲ್ಲಿ ಕೇವಲ 1,000 ಶೀರ್ಷಿಕೆಗಳೊಂದಿಗೆ ಸೀಮಿತ ರಿಲೀಸ್​ಗಳನ್ನಷ್ಟೇ ಒಳಗೊಂಡಿತ್ತು ಎನ್ನಲಾಗಿದೆ. ಆದರೆ ಆ ನಂತರದಲ್ಲಿ Neflix ಈಗ 6,600 ಕ್ಕೂ ಹೆಚ್ಚು ಚಲನಚಿತ್ರಗಳು ಹಾಗೂ ಟಿವಿ ಕಾರ್ಯಕ್ರಮಗಳನ್ನು ತನ್ನ ಸಬ್​ಸ್ಕ್ರೈಬರ್ಸ್​ಗಾಗಿ ಪರಿಚಯಿಸಿದೆ. 223 ಮಿಲಿಯನ್ ಚಂದಾದಾರರು ಬಳಸುತ್ತಿದ್ದಾರೆ.

ಆನ್ಲೈನ್ ವಂಚನೆಯ ಜಾಲ ಪತ್ತೆ ಮಾಡುವಾಗ ಅಕ್ರಮವಾಗಿ ನುಸುಳುವ ಹ್ಯಾಕರ್ಸ್ ಸುಲಭವಾಗಿ ಬಳಸಿಕೊಂಡಿದ್ದು ಪಾಸ್ವರ್ಡ್ ಶೇರಿಂಗ್ ಟೆಕ್ನಿಕ್. ತಮ್ಮ ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ ಅಥವಾ ಡಿಸ್ನಿ+ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವ ಜನರು ಹಕ್ಕುಸ್ವಾಮ್ಯ ಕಾನೂನನ್ನು ಸಹಜವಾಗಿಯೇ ಉಲ್ಲಂಘಿಸುತ್ತಾರೆ ಎನ್ನಲಾಗಿದೆ.

ಇದು ಸಣ್ಣ ವಿಚಾರದಂತೆ ಕಂಡರೂ ಕೂಡ ಅದರ ಮುಂದಿನ ಪರಿಣಾಮ ಊಹಿಸಲು ಅಸಾಧ್ಯವಾದಂತಹ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಸರ್ಕಾರ ಪಾಸ್‌ವರ್ಡ್ ಶೇರ್ ಮಾಡುವುದು ಕ್ರಿಮಿನಲ್ ಫ್ರಾಡ್ ಎಂದು ಪರಿಗಣಿಸುತ್ತದೆ ಎಂಬ ಸೂಚನೆ ನೀಡಿದೆ.
ನೆಟ್‌ಫ್ಲಿಕ್ಸ್ ನಿಮ್ಮನ್ನು ಪ್ರೀತಿಸುತ್ತದೆ, ನೀವು ನೆಟ್‌ಫ್ಲಿಕ್ಸ್ ಅನ್ನು ಪ್ರೀತಿಸುತ್ತೀರಿ ಅಷ್ಟೆ ಅಲ್ಲದೆ, ಈಗ ನಿಮ್ಮ ಎಲ್ಲಾ ಸ್ನೇಹಿತರು ನೆಟ್‌ಫ್ಲಿಕ್ಸ್ ಅನ್ನು ಸಹ ಪ್ರೀತಿಸುತ್ತಾರೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ನೆಟ್​ಫ್ಲಿಕ್ಸ್ ಈ ಬಗ್ಗೆ ಅಪ್ಡೇಟ್ ನೀಡಿದೆ.

ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರ್ ಮಾಡಿಕೊಳ್ಳುವ ಆಪ್ಶನ್ ಕಂಪನಿಗೆ ದೊಡ್ಡಮಟ್ಟದಲ್ಲಿ ಉಪಕಾರ ಮಾಡುತ್ತವೆ. ಕಂಪೆನಿಯ ಪಾಪ್ಯುಲಾರಿಟಿ, ಲಾಭವನ್ನು ಗಮನಿಸಿದರೆ ಈ ಅಂಶ ದೊಡ್ಡ ಕೊಡುಗೆಯನ್ನು ನೀಡಿದ್ದು, ಹೀಗಾಗಿ ಈ ಪದ್ಧತಿ ಸಾಮಾನ್ಯವಾಗಿ ಬಿಟ್ಟಿದೆ.

ಒಂದೆಡೆ ಗ್ರಾಹಕರಿಗೆ ಪ್ರಯೋಜನ ನೀಡುವ ಜೊತೆಗೆ ಕಂಪೆನಿಗಳಿಗೂ ಲಾಭ ಕೊಡುವಂತಹ ಪಾಸ್​ವರ್ಡ್ ಶೇರಿಂಗ್ ಟೆಕ್ನಿಕ್ ಅತ್ಯಂತ ಲಾಭದಾಯಕ ಎಂದೇ ಪರಿಗಣಿಸಲಾಗಿದೆ. ಇದನ್ನು ಜಾಗತಿಕವಾಗಿ ಸಂಪೂರ್ಣವಾಗಿ ಸಾಮಾನ್ಯಗೊಳಿಸಲಾಗಿದೆ.

ಇದೇ ಮೊದಲ ಬಾರಿಗೆ ಈ ವರ್ಷದ ಆರಂಭದಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಸಂಖ್ಯೆಗಳು ಕಡಿಮೆಯಾಗಿದೆ. ಇದರ ಪ್ರತಿಸ್ಪರ್ಧಿಗಳಾದ Amazon Prime, Disney+, HBO ಮತ್ತು ಡಜನ್‌ಗಟ್ಟಲೆ ಇತರರಿಂದ ಸ್ಪರ್ಧೆ ಹೆಚ್ಚಾಗಿದೆ. ಆದರೆ ‘ಪಾಸ್ವರ್ಡ್ ಹಂಚಿಕೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡುತ್ತಿದೆ.ಪಾಸ್‌ವರ್ಡ್ ಹಂಚಿಕೆಯ ಪ್ರಮಾಣವು ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಇದು ಕೊನೆಯಲ್ಲಿ ದೊಡ್ಡ ಇಕ್ಕಟ್ಟಿಗೆ ದಾರಿ ಮಾಡುತ್ತದೆ ಎಂದು ಅಂದಾಜಿಸಲಾಗುತ್ತಿದೆ.

ಪಾಸ್‌ವರ್ಡ್ ಹಂಚಿಕೆಯು ಯಾವಾಗಲೂ ಸ್ಟ್ರೀಮಿಂಗ್ ಸೇವೆಗಳ ಸೇವಾ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಪಾಸ್ವರ್ಡ್ ಹಂಚಿಕೆಯು ಕಾನೂನುಬಾಹಿರವಲ್ಲ. ಆದರೆ Netflix & Co. ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. UK ಸರ್ಕಾರ Meta ಸಹಭಾಗಿತ್ವದಲ್ಲಿ ಹೊಸ ಅಭಿಯಾನವನ್ನು ಘೋಷಿಸಿದೆ. ಪೈರಸಿ ತಪ್ಪಿಸುವ ಸಲುವಾಗಿ ಪಾಸ್​ವರ್ಡ್ ಶೇರಿಂಗ್ ನಿಷೇಧಿಸಲಾಗಿದೆ ಎನ್ನಲಾಗಿದೆ.