ಚಿಕ್ಕಮಗಳೂರು: ತೇಗೂರು ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಅ.25 ರ ರವಿವಾರ ನಡೆದಿದೆ.
Sponsoredಚಿಕ್ಕಮಗಳೂರು ನಗರದ ಸೈಯದ್ ಗಲ್ಲಿ ನಿವಾಸಿ ಮಹಮ್ಮದ್ ಗೌಸ್‌ಖಾನ್ (36) ಮೃತ ವ್ಯಕ್ತಿ.
Marriage AdSponsoredಮಹಮ್ಮದ್ ಗೌಸ್ ಖಾನ್ ಅವರು ತಮ್ಮ ಪತ್ನಿ ಜೊತೆ ಸ್ಕೂಟರ್‌ನಲ್ಲಿ ತೇಗೂರು ಗ್ರಾಮದಿಂದ ಚಿಕ್ಕಮಗಳೂರು ನಗರದ ಕಡೆಗೆ ತೆರಳುತ್ತಿದ್ದು, ಈ ವೇಳೆ ಮಾರ್ಗಮಧ್ಯೆ ಟ್ರ್ಯಾಕ್ಟರ್‌ಗೆ ಟಿಂಬರ್ ಮರಗಳನ್ನು ಎಳೆದು ಲೋಡ್ ಮಾಡುವ ಉದ್ದೇಶದಿಂದ ರಸ್ತೆಗೆ ಅಡ್ಡವಾಗಿ ಹಗ್ಗವೊಂದನ್ನು ಕಟ್ಟಲಾಗಿತ್ತು. ಇದು ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಸ್ಪಷ್ಟವಾಗಿ ಕಾಣಿಸಿಲ್ಲ. ಪರಿಣಾಮ ಕುತ್ತಿಗೆಗೆ ಸಿಲುಕಿ ಗೌಸ್‌ಖಾನ್ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


