ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.23 ಹಾಗೂ 24 ರಂದು ಸರ್ಪಸಂಸ್ಕಾರ, ಅಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನಡೆಯುವುದಿಲ್ಲ. ಆ.23 ರಂದು ಏಕಾದಶಿ ಹಾಗೂ ಆ.24 ರಂದು ಅತಿರಿಕ್ತ ಏಕಾದಶಿ ಇರುವ ಕಾರಣ ಈ ಸೇವೆಗಳು ನಡೆಯುವುದಿಲ್ಲ.
Sponsoredಉಳಿದಂತೆ ದೇವರ ದರ್ಶನ, ಮಂಗಳಾರತಿ, ಅರ್ಚನೆ, ಮಹಾಪೂಜೆ ಸಹಿತ ಇತರ ಎಲ್ಲಾ ಪೂಜಾ ಸೇವೆಗಳು ಎಂದಿನಂತೆ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.




